ಚಿಕ್ಕಬಳ್ಳಾಪುರ, ಜು.21- ಸಮ್ಮಿಶ್ರ ಸರ್ಕಾರ ಉಳಿಯುತ್ತೋ, ಉರುಳುತ್ತೋ ಅಂತ ಎಲ್ಲರಿಗೂ ಟೆನ್ಷನ್ ಶುರುವಾಗಿದೆ. ಆದರೆ ಹಾಸನ ಸಂಸದ, ಜೆಡಿಎಸ್ ಪಕ್ಷದ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರು ಖಂಡಿತ ಸರ್ಕಾರ ಉಳಿಯುತ್ತದೆ. ನಾಳೆ ಕಾದು ನೋಡಿ ಅಂತ ಆತ್ಮವಿಶ್ವಾಸದ ಮಾತುಗಳನ್ನಾ ಡಿದ್ದಾರೆ. ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾ ರ್ಟಿಗೆ ಭೇಟಿ ನೀಡಿ ಶಾಸಕರೊಂದಿಗೆ ಮಾತುಕತೆ ನಡೆಸಿ, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಎಲ್ಲಾ ಅತೃಪ್ತ ಶಾಸಕ ರೊಂದಿಗೆ ಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ,
ಸಚಿವ ಡಿ.ಕೆ.ಶಿವಕುಮಾರ್ ಫೆÇೀನ್ ಮುಖಾಂತರ ಮಾತನಾಡಿದ್ದಾರೆ. ಎಲ್ಲಾ ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಹೀಗಾಗಿ ಎಲ್ಲಾ ಶಾಸಕರು ಸೋಮವಾರ ಸದನಕ್ಕೆ ಆಗಮಿಸುತ್ತಾರೆ. ವಿಶ್ವಾಸ ಮತ ಯಾಚನೆಯಲ್ಲಿ ನಮಗೆ ಜಯ ಸಿಗಲಿದೆ ಎಂದರು. ಅತೃಪ್ತರೊಂದಿಗೆ ಮಾತುಕತೆ ನಡೆಸಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಂಸದರು, ಆ ವಿಚಾರಗಳನ್ನು ಬಹಿರಂಗ ವಾಗಿ ಹೇಳಲು ಆಗಲ್ಲ. ಸೋಮವಾರ ಕಾದು ನೋಡಿ ಎಂದರು. ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುತ್ತೇವೆ ಎನ್ನುವ ಪ್ರಸ್ತಾಪದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸ ದರು, ಹೈಕಮಾಂಡ್ ಹಾಗೂ ಸಿಎಂ ಏನೇ ತೀರ್ಮಾನ ಕೈಗೊಂಡರೂ ಅದ ಕ್ಕೆಲ್ಲಾ ನಾವು ಬದ್ಧವಾಗಿರುತ್ತೇವೆ. ರೆಸಾರ್ಟ್ ರಾಜಕಾರಣ ತಪ್ಪು. ಆದರೆ ಇದಕ್ಕೆಲ್ಲಾ ನೇರ ಕಾರಣ ಬಿಜೆಪಿಯವರೇ. ಅವರ ಆಪರೇಷನ್ ಕಮಲದಿಂದ ನಾವು ರೆಸಾರ್ಟ್ ಸೇರಿದ್ದೇವೆಯೇ ಹೊರತು ಬೇರೆ ಯಾವುದಕ್ಕೂ ಅಲ್ಲ ಎಂದರು.