ಜೆಪಿನಗರದಲ್ಲಿ ಶ್ರೀಕಂಠೇಶ್ವರ ಎಲೈಟ್ ಮಾಲ್ ಆರಂಭ

ಮೈಸೂರು, ಡಿ.12- ಮೈಸೂರಿನ ಜೆ.ಪಿ.ನಗರದಲ್ಲಿ ನೂತನ ವಾಗಿ ಪ್ರಾರಂಭವಾಗಿರುವ ಶ್ರೀಕಂಠೇಶ್ವರ ಫರ್ನಿಚರ್ ಎಲೈಟ್ ಮಾಲ್ ಶಾಖೆಯನ್ನು ಶಾಸಕ ಎಸ್.ಎ.ರಾಮದಾಸ್ ಉದ್ಘಾ ಟಿಸಿದರು. ನಂತರ ಮಾತನಾಡಿದ ಅವರು, ಶ್ರೀಕಂಠೇಶ್ವರ ಟಿವಿ ಸೆಂಟರ್ ಮೂಲಕ 25 ವರ್ಷಗಳ ಹಿಂದೆ ಸಣ್ಣ ಉದ್ಯಮ ಆರಂಭಿಸಿದ ಉಮೇಶ್ ಶರ್ಮಾ, ಇಂದು ಸಹಸ್ರಾರು ಮಂದಿಗೆ ಜೀವನೋಪಾಯದ ಬೆಳಕಾಗಿ ನಿಂತಿದ್ದಾರೆ. ಅಲ್ಲದೇ ಮುಂದಿನ ದಿನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ವ್ಯವಹರಿಸಲು ಎಲ್ಲ ತರಹದ ನೆರವನ್ನು ಬಳಸಿಕೊಳ್ಳಲು ಮುಂದಾಗಬೇಕು, ಮೇಕ್ ಇನ್ ಇಂಡಿಯಾ ಕಾಯಕಲ್ಪಕ್ಕೆ ಶ್ರೀಕಂಠೇಶ್ವರ ಟಿವಿ ಸೆಂಟರ್ ಮೈಸೂರು ಭಾಗದಿಂದ ಮುನ್ನುಡಿ ಬರೆಯಲಿ. ಇದಕ್ಕೆ ಪ್ರತಿಯೊಬ್ಬ ಕೆಲಸಗಾರರು ಕ್ರಿಯಾಶೀಲತೆಯಿಂದ ಶ್ರಮಿಸಬೇಕು ಎಂದು ರಾಮದಾಸ್ ಹಾರೈಸಿದರು.

ನಂತರ ಮಾಲೀಕ ಉಮೇಶ್ ಶರ್ಮಾ ಮಾತನಾಡಿ, ಮೈಸೂರಿನಲ್ಲಿ ಪ್ರಥಮ ಬಾರಿಗೆ ಅಂತರಾಷ್ಟ್ರೀಯ ಗುಣಮಟ್ಟದ ಫರ್ನಿಚರ್ ಮಾರಾಟ ಮಳಿಗೆ ಎಂಬ ಹೆಗ್ಗಳಿಕೆಗೆ ಎಲೈಟ್ ಮಾಲ್ ಪಾತ್ರವಾಗಿದೆ ಎಂದರು. ಉದ್ಘಾಟನೆ ಹಿನ್ನಲೆಯಲ್ಲಿ ಗ್ರಾಹಕರಿಗೆ ಅತ್ಯಾಕರ್ಷಕ ರಿಯಾಯಿತಿ ದರದಲ್ಲಿ ಫರ್ನಿಚರ್‍ಗಳನ್ನು ಮಾರಾಟ ಮಾಡಲಾಗುತ್ತಿದೆ. ಇನ್ನು ಕೈಗೆಟಕುವ ದರದಲ್ಲಿ ಫರ್ನಿಚರ್ಸ್‍ಗಳ ಮಾರಾಟ ಮಾಡುತ್ತಿರುವುದರಿಂದ ಆರಂಭದ ದಿನದಲ್ಲೇ ಎಲೈಟ್ ಮಾಲ್ ಗ್ರಾಹಕರಿಂದ ತುಂಬಿ ಹೋಗಿತ್ತು.

ಕಾರ್ಯಕ್ರಮದಲ್ಲಿ ಶ್ರೀಲಂಕಾ ಮೂಲದ ದಾಮ್ರೋ ಫರ್ನಿ ಚರ್ಸ್ ಅಧ್ಯಕ್ಷೆ ಚಮಿಂದ ವೀರಸಿಂಘೆ, ಜಿಲ್ಲಾ ಸಹಕಾರಿ ಯೂನಿ ಯನ್ ಅಧ್ಯಕ್ಷ ಎಚ್.ವಿ.ರಾಜೀವ್, ಉದ್ಯಮಿ ಡಿ.ಟಿ.ಪ್ರಕಾಶ್, ಶ್ರೀಕಂಠೇಶ್ವರ ಟಿವಿ ಸೆಂಟರ್ ಮಾಲೀಕ ಉಮೇಶ್ ಶರ್ಮ, ಅರ್ಚನಾ ಉಮೇಶ್, ಗಗನ್ ಸೇರಿದಂತೆ ಇತರರಿದ್ದರು.