ಸಾವಯವ ಕೃಷಿ ಉತ್ಪನ್ನಗಳ  ‘ರೈತ ಸಂತೆ’ಗೆ ಉತ್ತಮ ಪ್ರತಿಕ್ರಿಯೆ

ಮೈಸೂರು:  ಸಾವಯವ ಕೃಷಿಗೆ ಪ್ರತ್ಯೇಕ ಮಾರುಕಟ್ಟೆ ಒದಗಿಸುವ ಸಲುವಾಗಿ ನಿಸರ್ಗ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರೈತ ಸಂತೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೈಸೂರಿನ ಕಾಮಾಕ್ಷಿ ಆಸ್ಪತ್ರೆ ರಸ್ತೆಯ ಹ್ಯಾಪಿಮ್ಯಾನ್ ಉದ್ಯಾನವನದ ಬಳಿ ಟ್ರಸ್ಟ್‍ನ ಮಾರಾಟ ಕೇಂದ್ರದ ಎದುರು ಏರ್ಪಡಿಸಿದ್ದ ರೈತ ಸಂತೆಯಲ್ಲಿ ಗ್ರಾಹಕರು ನೇರವಾಗಿ ರೈತರಿಂದ ಧಾನ್ಯ ಹಾಗೂ ತರಕಾರಿ ಸೇರಿದಂತೆ ಸಿರಿಧಾನ್ಯಗಳಿಂದ ತಯಾರಾದ ತಿಂಡಿ ತಿನಿಸುಗಳನ್ನು ಖರೀದಿಸಿದರು.

ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ `ನೈಸರ್ಗಿಕ ಸಾವಯವ ರೈತ ಗ್ರಾಹಕ ಒಕ್ಕೂಟ’ದ `ನಿಸರ್ಗ ಟ್ರಸ್ಟ್’ ವತಿಯಿಂದ ಇಲ್ಲಿ ಪ್ರತಿ ತಿಂಗಳ 2ನೇ ಶನಿ ವಾರ ರೈತ ಸಂತೆ ಹಮ್ಮಿಕೊಳ್ಳುತ್ತ ಬರಲಾ ಗಿದ್ದು, ಇಂದು ಬೆಳಿಗ್ಗೆ 10ರಿಂದ ಸಂಜೆ 6ರವ ರೆಗೆ ನಡೆದ 9ನೇ ಸಂತೆಯಲ್ಲಿ ಸಾವಯವ ದವಸ-ಧಾನ್ಯ, ತರಕಾರಿ, ರಸಾಯನಿಕ ರಹಿತ ಸೋಪು, ಕೇಶ ತೈಲ, ಹಲ್ಲುಪುಡಿ ಸೇರಿ ದಂತೆ ನಾನಾ ಪದಾರ್ಥಗಳು ಮಾರಾಟ ಗೊಂಡವು. ತಾವು ಬೆಳೆದ ಪದಾರ್ಥಗಳನ್ನು ಸುಮಾರು 10ಕ್ಕೂ ಹೆಚ್ಚು ರೈತರು ಮಾರಾಟ ಮಾಡಿದರು. ಸಾವಯವ ಕೃಷಿ ಪದ್ಧತಿಯ ವಿಶೇಷ ತಿಳಿಸಿದ ರೈತರು, ಇದರಿಂದ ಆಗುವ ಪ್ರಯೋಜನಗಳನ್ನು ಗ್ರಾಹಕರಿಗೆ ತಿಳಿಸಿ ವಹಿ ವಾಟು ನಡೆಸಿದರು. ಸಾವಯವ ಪದ್ಧತಿ ಅಳವಡಿಸಿಕೊಂಡ ರೈತರ ಗುಂಪುಗಳು ಮೈಸೂರು, ಮಂಡ್ಯ ಹಾಗೂ ಚಾಮರಾಜ ನಗರ ಜಿಲ್ಲೆಗಳಿಂದ ಆಗಮಿಸಿ ವ್ಯಾಪಾರ ವಹಿ ವಾಟು ನಡೆಸಿದವು. ವಿವಿಧ ತರಕಾರಿಗಳು ಮಾತ್ರವಲ್ಲದೆ, ಬೆಲ್ಲ, ಅಡುಗೆ ಎಣ್ಣೆ, ತೆಂಗಿನ ಎಣ್ಣೆ ಸೇರಿದಂತೆ ನಾನಾ ಪದಾರ್ಥಗಳು ಇಂದಿಲ್ಲಿ ಮಾರಾಟಗೊಂಡವು. ಬಾಳೆ ಹಣ್ಣು, ಬಾಳೆ ದಿಂಡು, ಸೊಪ್ಪು ಸೇರಿದಂತೆ ವಿವಿಧ ಪದಾರ್ಥಗಳು ಸಂತೆಯಲ್ಲಿ ಕಂಡು ಬಂದವು.

ನಿಸರ್ಗ ಟ್ರಸ್ಟ್‍ನ ಮಾರಾಟ ಕೇಂದ್ರ: ಸರ ಸ್ವತಿಪುರಂನ ಮಾರಾಟ ಕೇಂದ್ರಕ್ಕೆ ಗ್ರಾಹಕರು ಭೇಟಿ ನೀಡಿ ಸಾವಯವ ದವಸಧಾನ್ಯಗಳನ್ನು ಖರೀದಿ ಮಾಡಬಹುದು. ವಾರದ ಎಲ್ಲಾ ದಿನಗಳು ಬೆಳಿಗ್ಗೆ 9.30 ರಿಂದ ರಾತ್ರಿ 8.30ರವರೆಗೆ ಕೇಂದ್ರ ತೆರೆದಿರುತ್ತದೆ. ವಿಶೇಷವಾಗಿ ಸಿರಿಧಾನ್ಯಗಳು ಹಾಗೂ ಅವುಗಳಿಂದ ತಯಾರಾದ ತಿಂಡಿ ತಿನಿಸು ಇಲ್ಲಿ ಲಭ್ಯವಿದ. ಅದೇ ರೀತಿ ಟ್ರಸ್ಟ್‍ನ ಜೆಪಿ ನಗರದ ಮಾರಾಟ ಕೇಂದ್ರಕ್ಕೂ ಇದೇ ವೇಳೆಯಲ್ಲಿ ಗ್ರಾಹಕರು ಭೇಟಿ ನೀಡಿ ಕೊಂಡುಕೊಳ್ಳಬಹುದು.

ಸಂತೆಯಲ್ಲಿ ಬಾಂಬ್ ಉಂಟು…!

ರೈತ ಸಂತೆಯಲ್ಲಿ ಬಾಂಬ್ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿತು! ಹೌದು ಇದೀಗ ತಾನೇ ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿಸಿ ಪರಿಸರ ಹಾಗೂ ಪ್ರಾಣಿ-ಪಕ್ಷಿ ಸಂಕು ಲಕ್ಕೆ ಮಾತ್ರವಲ್ಲದೇ ವೃದ್ಧರು-ಮಕ್ಕಳು ಹಾಗೂ ಅನಾರೋಗ್ಯ ಪೀಡಿತರಿಗೂ ಕಿರಿಕಿರಿ ಉಂಟು ಮಾಡಿದ್ದಾಗಿದೆ. ಈ ನಡುವೆ ರೈತ ಸಂತೆಯಲ್ಲೂ ಆಟೋಂಬಾಂಬ್ ಮಾದರಿಯ ಬಾಂಬ್ ಕಂಡು ಅನೇಕರು ಬೆಚ್ಚಿದರು.

ಇದು ತಿನ್ನುವ ಬಾಂಬ್! ಇದರ ಹೆಸರು `ಎನರ್ಜಿ ಬಾಂಬ್’. ಖರ್ಜೂರ, ಹಸು ವಿನ ತುಪ್ಪ, ಬೆಲ್ಲ ಹಾಗೂ ಗೋಡಂಬಿಯಿಂದ ತಯಾರು ಮಾಡಲಾದ ತಿನಿಸು ಇದಾಗಿದ್ದು, ಇದನ್ನು ಬಾಂಬ್ ಮಾದರಿಯಲ್ಲಿ ಪೊಟ್ಟಣ ಕಟ್ಟಿರುವುದು ಆಕರ್ಷಣೆಗೆ ಕಾರಣವಾಗಿದೆ. ಇದರ ಬೆಲೆ ಒಂದಕ್ಕೆ 10 ರೂ. ನಿಗದಿ ಮಾಡಲಾಗಿದೆ. ಚಾಮರಾಜ ನಗರ ಜಿಲ್ಲೆ ಆಲೂರು `ಆರೋಗ್ಯ ಬುತ್ತಿ’ ಸ್ವಸಹಾಯ ರೈತರ ಗುಂಪು ಇದರ ತಯಾರಕರು.