ಅಂಚೆ ಇಲಾಖೆಯಲ್ಲಿ ಹೊರ ರಾಜ್ಯದ ನೌಕರರಿಂದ ಅನಾಥ ಪ್ರಜ್ಞೆ

ಅರಸೀಕೆರೆ: ಅಂಚೆ ಇಲಾಖೆ ಯಾವುದೇ ಕ್ಷೇತ್ರಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಪ್ರಮುಖವಾಗಿ ಆರ್. ಎಂ.ಎಸ್ ಕಾರಣವಾಗಿದ್ದು, ಈ ಘಟಕದಲ್ಲಿ ಇಲಾಖೆ ಹೊರ ರಾಜ್ಯದ ಅನ್ಯ ಭಾಷಿಕ ರನ್ನು ನೇಮಕ ಮಾಡುತ್ತಿರುವುದರಿಂದ ಒಂದು ರೀತಿ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಆರ್‍ಎಂಎಸ್ ಮತ್ತು ಎಂಎಂಎಸ್ ಸಂಘಟನೆಯ ಮಾಜಿ ವೃತ್ತ ಕಾರ್ಯ ದರ್ಶಿ ಹಾಗೂ ಕಾನೂನು ತಜ್ಞ ಕಾಮೇಡ್ ಪಿ.ಕಮಲೇಶನ್ ಆತಂಕ ವ್ಯಕ್ತಪಡಿಸಿದರು.

ನಗರದ ಶ್ರೀಮತಿ ಶಾಂತವೀರಮ್ಮ ಪರ ಮೇಶ್ವರಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಭಾರತ ಆರ್‍ಎಂಎಸ್ ಮತ್ತು ಎಂಎಂಎಸ್ ಕಾರ್ಮಿಕ ಸಂಘಟನೆಯ ನೂತನ ಶಾಖೆ ಮತ್ತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಅರಸೀಕೆರೆಯಲ್ಲಿ ಕಾರ್ಯನಿರ್ವ ಹಿಸುತ್ತಿದ್ದ ಆರ್‍ಎಂಎಸ್ ಕಚೇರಿಯು ಸ್ಥಳೀಯವಾಗಿ ಅವಿನಾಭಾವ ಸಂಬಂಧ ವನ್ನು ಹೊಂದಿತ್ತು. ಪತ್ರಗಳ ರವಾನೆ ಸೇರಿದಂತೆ ಅಂಚೆ ಇಲಾಖೆಗೆ ಸಂಬಂ ಧಿಸಿದ ಸೇವೆಗಳನ್ನು ಪಡೆಯಲು ಸ್ಥಳೀಯ ಜನತೆ ಸದಾ ಸಂಪರ್ಕದಲ್ಲಿ ಇರುತ್ತಿದ್ದರು. ಇಂತಹ ವಿಶ್ವಾಸ ಪೂರಕ ಘಟಕವನ್ನು ಕಳೆದ ಹನ್ನೆರಡು ವರ್ಷಗಳ ಹಿಂದೆ ಸ್ಥಳಾಂ ತರಗೊಳಿಸಲಾಗಿತ್ತು. ಇದರ ವಿರುದ್ಧ ಊರಿನ ಜನತೆ ಮತ್ತು ವಿವಿಧ ಸಂಘ ಸಂಸ್ಥೆಗಳು ಹಾಗೂ ಜನ ಪ್ರತಿನಿಧಿಗಳು ಅಹೋರಾತ್ರಿ ಧರಣಿ ಮತ್ತು ರೈಲು ತಡೆ ನಡೆಸುವುದರ ಮೂಲಕ ಪುನಃ ಅರಸೀಕೆರೆಗೆ ಕಚೇರಿ ಸ್ಥಾಪಿಸಲು ಶ್ರಮಪಟ್ಟಿದ್ದಾರೆ ಎಂದರು.

ಜನರಿಗೆ ಇಲಾಖೆಯ ನೌಕರರು ಚಿರ ಋಣಿಯಾಗಿದ್ದಾರೆ. ಕೇಂದ್ರ ಸರ್ಕಾರ ಸ್ವಾಮ್ಯದ ಅನೇಕ ಉದ್ದಿಮೆಗಳು ರೋಗ ಗ್ರಸ್ಥವಾಗಿ ಇಂದು ಮುಚ್ಚುವ ಪರಿಸ್ಥಿತಿ ತಲುಪುತ್ತಿವೆ. ಉನ್ನತ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರಗಳು ಅನುಸರಿ ಸುತ್ತಿರುವ ಅವೈಜ್ಞಾನಿಕ ಮಾರ್ಗಸೂಚಿ ಗಳು ಇದಕ್ಕೆ ಮೂಲ ಕಾರಣವಾಗಿವೆ. ಬಿಎಸ್‍ಎನ್‍ಎಲ್ ಎಂಬ ದೈತ್ಯ ಉದ್ಯಮ ನಷ್ಟದ ಹಾದಿಯನ್ನು ಹಿಡಿದಿದ್ದು, ನೌಕರ ರಿಗೆ ಎರಡೆರಡು ತಿಂಗಳ ವೇತನ ನೀಡದಿ ರುವ ಪ್ರಸಂಗಗಳೇ ಸಾಕ್ಷೀಕರಿಸುತ್ತಿವೆ. ಕೇಂದ್ರ ಸರ್ಕಾರದ ಉದ್ದಿಮೆಗಳಲ್ಲಿ ಅಂಚೆ ಉದ್ಯಮ ಬೃಹತ್ತಾಗಿದ್ದು, ಇದನ್ನು ಕೂಡ ಮೊಟಕುಗೊಳಿಸುವ ಮೂಲಕ ನೌಕರರಿಗೆ ಭಾರಿ ಪೆಟ್ಟನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಜಾಗ ತಿಕ ಮಟ್ಟದ ಹೋರಾಟಗಳು ಹೆಚ್ಚಾಗ ಲಿದ್ದು, ಇದಕ್ಕೆ ಪ್ರತಿಯಾಗಿ ಹೋರಾಟ ಮಾಡಲು ನಾವು ಸಿದ್ಧರಾಗದಿದ್ದಲ್ಲಿ ಬಾರಿ ಬೆಲೆಯನ್ನು ನಾವು ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಿಓಸಿ ಅಧ್ಯಕ್ಷ ರಾಧಾಕೃಷ್ಣನ್ ಮಾತ ನಾಡಿ, 5ನೇ ವೇತನ ಆಯೋಗ ವರದಿ ನೀಡಿದ ಪರಿಣಾಮ ಕೇಂದ್ರ ಸರ್ಕಾರವು ತನ್ನ ಹಲವು ಉದ್ಯಮಗಳಲ್ಲಿ ಸೇವೆ ಸಲ್ಲಿ ಸುತ್ತಿದ್ದ ನೌಕರರಿಗೆ ಸ್ವಯಂ ನಿವೃತ್ತಿ ಪಡೆ ಯಲು ಬಲವಂತವಾಗಿ ಹೇರಿತು. ಅದ ರಲ್ಲೂ ಟೆಲಿಕಾಂ ಉದ್ದಿಮೆಯಾದ ಬಿಎಸ್ ಎನ್‍ಎಲ್, ಐಟಿಐ, ಹೆಚ್‍ಎಎಲ್ ಸೇರಿ ದಂತೆ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ನೌಕರ ರನ್ನು ಸ್ವಯಂ ಪ್ರೇರಿತ ನಿವೃತ್ತಿಗೆ ಪ್ರೋತ್ಸಾ ಹಿಸಿತು. ಸರ್ಕಾರದ ಈ ದ್ವಂದ್ವ ನೀತಿ ಇಂದಿಗೂ ಮುಂದುವರೆದಿದ್ದು ಇದರ ಒಳ ಮರ್ಮವನ್ನು ನೌಕರರು ಅರಿತಾಗ ಮಾತ್ರ ಸತ್ಯಾಂಶ ಕಾಣುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗ್ರೂಪ್ ಸಿ ವೃತ್ತ ಕಾರ್ಯದರ್ಶಿ ಶ್ರೀನಿವಾಸ, ಎಂ.ಜಿ ಮತ್ತು ಎಂ.ಟಿ.ಎಸ್. ವೃತ್ತ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಉದಯಕುಮಾರ್ ರಾವ್, ವಿಭಾಗೀಯ ಕಾರ್ಯದರ್ಶಿ ರವಿ ಪ್ರಸಾದ್, ಗ್ರೂಪ್ ಸಿ ವಿಭಾಗೀಯ ಕಾರ್ಯದರ್ಶಿ ಗುಣಪಾಲ್, ಕರವೇ ತಾಲೂಕು ಘಟಕದ ಅಧ್ಯಕ್ಷ ಹೇಮಂತ್‍ಕುಮಾರ್ ಮಾತನಾಡಿ ದರು. ಪತ್ರಕರ್ತ ಆನಂದ್ ಕೌಶಿಕ್, ಸಂಘ ಟನೆಯ ಪದಾಧಿಕಾರಿಗಳಾದ ಎ.ಜಿ.ವಟಿ, ಜಾಕೀರ್ ಹುಸೇನ್, ಸಂದೀಪ್, ಹನು ಮಂತಯ್ಯ, ಪುಟ್ಟರಾಜು, ಮಂಜುನಾಥ್, ವಿಶ್ವನಾಥ್, ಭವಾನಿ ಬಾಲಕೃಷ್ಣ, ಪ್ರೇಮ ಕುಮಾರಿ, ಭವಾನಿ, ಕಿರಣ್, ನಾಗರಾಜು, ವಿಶ್ವನಾಥ್ ಉಪಸ್ಥಿತರಿದ್ದರು.