ರಿಂಗ್ ರಸ್ತೆಯಲ್ಲಿ ಮತ್ತೆ ಆವರಿಸಿದೆ ಕಗ್ಗತ್ತಲು

ಮೈಸೂರು, ನ. 16(ಆರ್‍ಕೆ)- ದಸರಾ ಮುಗಿದು ತಿಂಗಳ ನಂತರ ಮೈಸೂರಿನ ರಿಂಗ್ ರಸ್ತೆಯಲ್ಲಿ ಮತ್ತೆ ಕಗ್ಗತ್ತಲು ಆವರಿಸಿದೆ.ಕೆಟ್ಟು ನಿಂತಿದ್ದ ರಿಂಗ್ ರಸ್ತೆ ಬೀದಿ ದೀಪಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ನಿರ್ದೇಶನದಂತೆ ಪಾಲಿಕೆ ಹಾಗೂ ಮುಡಾದಿಂದ ದಸರಾ ವೇಳೆ ಕಾಯಕಲ್ಪ ಒದಗಿಸಲಾಗಿತ್ತು.

ರಿಂಗ್ ರಸ್ತೆ ಬೀದಿ ದೀಪಗಳಿಗೆ ಬಲ್ಬ್ ಗಳನ್ನು ಹಾಕಿ ರಿಪೇರಿ ಮಾಡಲು ಮುಡಾ ಮತ್ತು ಪಾಲಿಕೆ ಒಟ್ಟಾಗಿ ಖರ್ಚು ಮಾಡ ಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರು ಸೂಚನೆ ನೀಡಿದ್ದರಿಂದ ಅಧಿಕಾರಿಗಳು ಆಗ ತಕ್ಷಣ ಸ್ಪಂದಿಸಿದ್ದರು. ಬಳಿಕ 42 ಕಿ.ಮೀ. ಹೊರ ವರ್ತುಲ ರಸ್ತೆಯು ದಸರಾ ವೇಳೆ ಬೆಳಗುತ್ತಿತ್ತು.

ಆದರೆ ತಿಂಗಳು ಕಳೆದ ನಂತರ ಬಲ್ಬ್ ಗಳೆಲ್ಲಾ ಬರ್ನ್ ಆಗಿ ರಾತ್ರಿ ವೇಳೆ ಕತ್ತಲೆ ಯಿಂದ ಕೂಡಿರುವ ಕಾರಣ ವಾಹನ ಸವಾ ರರು ಹಾಗೂ ಅಕ್ಕಪಕ್ಕದ ಬಡಾವಣೆಯ ನಿವಾಸಿಗಳಿಗೆ ಸಂಚಾರಕ್ಕೆ ಬಹಳ ತೊಂದರೆ ಯಾಗಿದೆ. 6 ಪಥದ ರಿಂಗ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ನಿಗಮಕ್ಕೆ ವಹಿಸಲಾ ಗಿದೆ. ರಸ್ತೆ ರಿಪೇರಿ, ಡಾಂಬರೀಕರಣ ಹಾಗೂ ನಿರ್ವಹಣೆ ನಾವು ಮಾಡುತ್ತೇವೆಯೇ ಹೊರತು, ಬೀದಿದೀಪ ನಿರ್ವಹಣೆ ಮತ್ತು ವಿದ್ಯುತ್ ಬಿಲ್ ಪಾವತಿಗೆ ನಮಗೆ ಅವ ಕಾಶವಿಲ್ಲ ಎಂದು ನಿಗಮದ ಅಧಿಕಾರಿ ಗಳು ಸ್ಪಷ್ಟಪಡಿಸಿದ್ದಾರೆ.ರಿಂಗ್ ರೋಡ್ ಬೀದಿ ದೀಪಗಳನ್ನು ಯಾರು ನಿರ್ವಹಿಸಬೇಕೆಂಬ ಬಗ್ಗೆ ಸ್ಪಷ್ಟ ಸೂಚನೆಗಳಿಲ್ಲದೇ ಗೊಂದಲ ಉಂಟಾಗಿದೆ.

ದಸರಾ ವೇಳೆ ಮುಡಾ ಮತ್ತು ಪಾಲಿಕೆ ಜೊತೆಯಾಗಿ ಬೀದಿ ದೀಪ ರಿಪೇರಿ ಮಾಡಿ ಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿ ವರು ಸೂಚಿಸಿದ್ದರಿಂದ ಅದರಂತೆ ಮಾಡಿ ದ್ದೆವು. ಮುಂದೆ ರಿಂಗ್ ರಸ್ತೆ ಸೇರಿದಂತೆ ಹೊರಭಾಗದ ಬಡಾವಣೆಗಳನ್ನು ಮುಡಾ ನಿರ್ವಹಿಸಬೇಕು, ಒಳಭಾಗದ ಬಡಾವಣೆ ಗಳಲ್ಲಿ ಪಾಲಿಕೆ ಮೂಲಸೌಕರ್ಯ ಒದಗಿಸಿ ನಿರ್ವಹಿಸುವುದು ಎಂದು ಗುರುವಾರ ನಡೆದ ಜಂಟಿ ಸಭೆಯಲ್ಲಿ ನಿರ್ಧಾರವಾಗಿದೆ ಎಂದು ನಗರಪಾಲಿಕೆ ಹೆಚ್ಚುವರಿ ಉಪ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಈ ಕುರಿತು ಇಷ್ಟ ರಲ್ಲೇ ಪಾಲಿಕೆ ಮತ್ತು ಮುಡಾ ಅಧಿಕಾರಿ ಗಳು ಜೊತೆಗೂಡಿ ಪರಿಶೀಲನೆ ನಡೆಸಿ ವ್ಯಾಪ್ತಿ ಯನ್ನು ಗುರುತಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವಿವರಿಸಿದರು.