ಗೂಳೀಪುರ ಪಿಎಸಿಸಿ ಅಧ್ಯಕ್ಷರ ಅವಿರೋಧ ಆಯ್ಕೆ

ಚಾಮರಾಜನಗರ:  ತಾಲೂಕಿನ ಗೂಳೀಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೊಮ್ಮ ಗ್ರಾಮದ ಜಿ.ಎಂ.ರವಿಶಂಕರಮೂರ್ತಿ ಅವಿರೋಧವಾಗಿ ಆಯ್ಕೆಗೊಂಡರು.

ಕೃಷಿ ಪತಿನ ಸಹಕಾರ ಸಂಘದ ಕಛೇರಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಮತ್ತು ಸದಸ್ಯರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೋಟಂಬಳ್ಳಿ ಗ್ರಾಮದ ಎಂ.ರಾಜು, ನಿರ್ದೇಶಕರುಗಳಾಗಿ ಜಿ.ಎನ್. ಬಸವಣ್ಣ, ಹೆಚ್.ನಾರಾಯಣಸ್ವಾಮಿ, ರಂಗಶೆಟ್ಟಿ, ಎಂ.ನಾಗೇಂದ್ರ ಸ್ವಾಮಿ, ಮಹದೇವಯ್ಯ, ಪಿ.ಡೈರಿಶಿವಣ್ಣ, ಗುರುಸ್ವಾಮಿ, ಹೆಚ್.ಡಿ. ಚಂದ್ರೇಗೌಡ, ಮಹಿಳಾ ವಿಭಾಗದಿಂದ ಭಾಗ್ಯಮ್ಮ ಮತ್ತು ಗುರು ಮಲ್ಲಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದ ಸಹಕಾರ ಇಲಾಖೆಯ ಸಿದ್ದಲಿಂಗಮೂರ್ತಿ ತಿಳಿಸಿದ್ದಾರೆ.

ನೂತನ ಅಧ್ಯಕ್ಷ ಜಿ.ಎಂ.ರವಿಶಂಕರಮೂರ್ತಿ ಮಾತನಾಡಿ, ತಮ್ಮ ಅಧಿಕಾರದ ಅವಧಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಏಳಿಗೆಗೆ ಹಗಲಿರುಳು ದುಡಿಯುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ಸಹಕಾರ ಸಂಘದಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕೊಡಿಸಿ ಕೊಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಗೂಳಿಪುರ ಗ್ರಾಪಂನ ಉಪಾಧ್ಯಕ್ಷ ಬೂದಂಬಳ್ಳಿ ಶಂಕರ್, ಗ್ರಾಪಂ ಸದಸ್ಯ ಮಹದೇವಸ್ವಾಮಿ, ಎಂಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ಲಿಂಗರಾಜು, ಜಿ.ಎನ್. ಚಂದ್ರಪ್ಪ, ಜಿ.ಎಂ.ಗುರುಸ್ವಾಮಿ, ಹಾಲು ಉತ್ಪಾದಕ ಸಹಕಾರ ಸಂಘದ ಸಿದ್ದಲಿಂಗಸ್ವಾಮಿ, ಮಹದೇವನಾಯಕ, ಇರಸವಾಡಿ ಗ್ರಾಪಂನ ಮಾಜಿ ಸದಸ್ಯ ರಂಗಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.