ಪಡುವಾರಹಳ್ಳಿ ಕರಿಯಪ್ಪ ಹತ್ಯೆ ಪ್ರಕರಣ: 6 ಮಂದಿ ಹಂತಕರು

ಮೈಸೂರು: 2010ರಲ್ಲಿ ನಡೆ ದಿದ್ದ ಪಡುವಾರಹಳ್ಳಿ ಕರಿಯಪ್ಪ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ವರ್ಷದ ನಂತರ ವಿಚಾರಣೆ ಪೂರ್ಣಗೊಂಡು, 6 ಮಂದಿ ಹಂತಕರೆಂದು ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಂದು ತೀರ್ಪು ನೀಡಿದೆ.

ಮೈಸೂರಿನ ಪಡುವಾರಹಳ್ಳಿ ನಿವಾಸಿಗಳಾದ ಅಶೋಕ, ಹೇಮಂತ, ಪ್ರವೀಣ್, ರಮೇಶ, ಮಂಜೇಶ ಹಾಗೂ ಸೂರಜ್ ಹಂತಕರಾಗಿದ್ದು, ನಾಳೆ(ಮಾ.15) ಶಿಕ್ಷೆ ಪ್ರಮಾಣವನ್ನು ಕೋರ್ಟ್ ಪ್ರಕಟಿಸಲಿದೆ.

ಕರಿಯಪ್ಪ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ 11 ಮಂದಿ ಪೈಕಿ ಚಂದ್ರು, ಸ್ವಾಮಿ ಹಾಗೂ ಸುನೀಲ್ ಖುಲಾಸೆಗೊಳಿಸಲಾಗಿದೆ. ಪ್ರಕರಣದ ಮತ್ತಿಬ್ಬರು ಆರೋಪಿಗಳಾಗಿದ್ದ ದೇವು ಅಲಿಯಾಸ್ ದೇವೇಂದ್ರ ಹಾಗೂ ವಿಜಯಕುಮಾರ್ ಅಲಿಯಾಸ್ ವಿಜಿ ಕೊಲೆ ಯಾಗಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಜಿ.ಕುರುವತ್ತಿ ಅವರು ವಾದ-ಪ್ರತಿವಾದವನ್ನು ಆಲಿಸಿದ ನಂತರ ಹಾಗೂ ಸಾಕ್ಷ್ಯಾ ಪುರಾವೆಗಳ ಆಧಾರದ ಮೇಲೆ 6 ಮಂದಿ ಹಂತಕರೆಂದು ಘೋಷಿಸಿದ್ದಾರೆ. ಶುಕ್ರವಾರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸುವರು.
2010ರ ಅಕ್ಟೋಬರ್ 3ರಂದು ಮಧ್ಯಾಹ್ನ ಮೈಸೂ ರಿನ ಸರಸ್ವತಿಪುರಂ ಠಾಣಾ ಸರಹದ್ದಿನ ತೊಣಚಿ ಕೊಪ್ಪಲಿನ ಬಿಸಿಲು ಮಾರಮ್ಮ ದೇವಾಲಯದ ಬಳಿ ತನ್ನ ಕಚೇರಿಯಲ್ಲಿದ್ದ ಕರಿಯಪ್ಪ ಮೇಲೆ ದೇವು, ವಿಜಿ ಸೇರಿ ದಂತೆ 11 ಮಂದಿ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸರಸ್ವತಿ ಪುರಂ ಠಾಣೆ ಅಂದಿನ ಪೊಲೀಸ್ ಇನ್ಸ್‍ಸ್ಪೆಕ್ಟರ್ ಸಿದ್ದರಾಜು ಅವರು, 11 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳ ವಿರುದ್ಧ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದ ಪೊಲೀಸರು ಕೊಲೆಗೆ ಸಂಬಂಧಿಸಿದ ಸಾಕ್ಷ್ಯಾಧಾರ ಸಂಗ್ರಹಿಸಿದ್ದರು.