`ಹಸಿರು ಮೈಸೂರಿಗಾಗಿ ಲಕ್ಷ ವೃಕ್ಷ ಅಭಿಯಾನ’ಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ

ಮೈಸೂರು, ಸೆ.6(ಆರ್‍ಕೆಬಿ)- ಹಸಿರು ಮೈಸೂರಿಗಾಗಿ ಲಕ್ಷ ವೃಕ್ಷ ಅಭಿಯಾನಕ್ಕೆ ಶುಕ್ರ ವಾರ ಮೈಸೂರಿನಲ್ಲಿ ಶ್ರೀಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮೈಸೂರಿನ ಜೆ.ಪಿ.ನಗರದ ಡಾ. ಪುಟ್ಟರಾಜ ಗವಾಯಿಗಳ ಕ್ರೀಡಾಂಗಣದಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಗಣಪತಿ ಆಶ್ರಮದ ದತ್ತ ವಿಜಯಾ ನಂದ ಸ್ವಾಮೀಜಿ, ಈಶಾ ಫೌಂಡೇಷನ್‍ನ ಸದ್ಗುರು ಜಗ್ಗಿ ವಾಸುದೇವ್ ಸಮ್ಮುಖದಲ್ಲಿ 10 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿ ಸಲಾಯಿತು. ಪರಿಸರ ಕಾಳಜಿಯಿಂದ ಸಾಧನೆ ಮಾಡಿದ ಆರು ಮಂದಿಗೆ ಪರಿಸರ ಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹೆಚ್.ವಿ.ರಾಜೀವ್ ಸ್ನೇಹ ಬಳಗ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಂಟಿಯಾಗಿ ಕಾರ್ಯಕ್ರಮ ಆಯೋಜಿ ಸಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಇಂದು ಪರಿಸರ ಸಮತೋಲನ ತಪ್ಪಿದೆ. ದುರಂತವೆಂದರೆ ಬೆಳೆಯೇ ಬರ ದಂತಹ ಪರಿಸ್ಥಿತಿ ಇಂದು ನಿರ್ಮಾಣ ವಾಗಿದೆ. ಭತ್ತದ ಕೃಷಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ನೀರು ಮರು ಪೂರಣವಾಗ ಬೇಕು. ಗಿಡಗಳನ್ನು ನಾಟಿ ಮಾಡಿ, ಅವು ಗಳನ್ನು ಮರಗಳಾಗಿ ಬೆಳೆಸುವುದು ಅಗತ್ಯ. ಹಾಗಾದರೆ ಮಾತ್ರ ಪರಿಸರ ರಕ್ಷಣೆ ಸಾಧ್ಯ ವಾಗುತ್ತೆ. ನಮಗೆ ಉಸಿರಾಡಲು ಉತ್ತಮ ಗಾಳಿ ಸಿಗುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸ ಬೇಕಿದೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಾಗಿದೆ. ವೃಕ್ಷಾಂದೋಲನದ ಮೂಲಕ ಹಸಿರು ವಲಯವಾಗಿ, ಮಾರ್ಪ ಡಿಸುವುದರೊಂದಿಗೆ ಮೈಸೂರಿನ ತಾಪ ಮಾನ ಇಳಿಕೆಗೆ ಎಲ್ಲರೂ ಕೈಜೋಡಿಸಬೇ ಕಿದೆ. ಪ್ರಕೃತಿ, ಭೂಮಿಯನ್ನು ಉಳಿಸು ವುದು ಅಗತ್ಯ ಎಂದರು.

ಮೈಸೂರಿನ ನಾಗರಿಕರು ಇದು ನನ್ನ ನಗರ ಎಂಬ ಸಂಕಲ್ಪ ಮಾಡಿದರೆ ಇಡೀ ದೇಶದಲ್ಲಿ ಮೈಸೂರು ಹಸಿರು ನಗರ ವಾಗಲು ಸಾಧ್ಯವಿದೆ. ಹಸಿರು ಮೈಸೂರಿ ಗಾಗಿ ಲಕ್ಷ ವೃಕ್ಷ ಅಭಿಯಾನ ಕಾರ್ಯ ಕ್ರಮದ ಹಿಂದಿನ ಕಾಳಜಿ ಮೆಚ್ಚುವಂತ ಹದ್ದು ಎಂದು ಹೆಚ್.ವಿ.ರಾಜೀವ್ ಅವರ ಶ್ರಮವನ್ನು ಶ್ಲಾಘಿಸಿದರು.

ಯಾರು ಗಿಡಗಳನ್ನು ನೆಡುತ್ತಾರೋ ಆ ಗಿಡಕ್ಕೆ ಅವರ ಹೆಸರನ್ನೇ ಹಾಕಬೇಕು. ಅವರೇ ಅದನ್ನು ತಮ್ಮ ಜೀವದಂತೆ ಕಾಪಾಡಿ ಕೊಂಡುಹೋಗಬೇಕು. ಹಾಗಾದರೆ ಮಾತ್ರ ಹೆಚ್ಚು ಮರಗಳು ಜೀವಂತವಾಗಿ ಇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಈಶಾ ಫೌಂಡೇಷನ್‍ನ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿ, ಇದು ನನ್ನ ಮೈಸೂರು, ದೇಶದಲ್ಲಿ ಎಲ್ಲಕ್ಕಿಂತ ಹೆಚ್ಚು ಸ್ವಚ್ಛ ನಗರ ಎಂಬ ಖ್ಯಾತಿಯ ಊರಿದು. ಇದನ್ನು ಹಸಿರಾಗಿ ಪರಿವರ್ತಿಸಲು ಮುಂದಾ ಗಿರುವುದು ನಿಜಕ್ಕೂ ಮೆಚ್ಚುವಂತಹ ಕಾರ್ಯ ಎಂದರು. ತಾವು ಮೈಸೂರಿನಲ್ಲಿ ಇದ್ದ ದಿನಗಳನ್ನು ಸ್ಮರಿಸಿದ ಅವರು, 40-50 ವರ್ಷದ ಹಿಂದೆ ಚಾಮುಂಡಿಬೆಟ್ಟದ ಮೇಲಿನಿಂದ ನೋಡಿದರೆ ತೆಂಗಿನ ತೋಟದ ರೀತಿ ಕಾಣುತ್ತಿತ್ತು. ಈಗ ಬಹ ಳಷ್ಟು ಕಟ್ಟಡಗಳು ಬಂದಿವೆ. ಜನಸಂಖ್ಯೆಗೆ ಅಗತ್ಯವಾದ ಕಟ್ಟಡ ಬೇಕು ನಿಜ. ಆದರೆ, ಮನೆ ಕಟ್ಟಿದರೆ ಕನಿಷ್ಟ 4 ಮರಗಳನ್ನು ಬೆಳೆಸಬೇಕು ಎಂಬುದು ಕಡ್ಡಾಯವಾಗ ಬೇಕು. ಮೈಸೂರಿನ ಜನಸಂಖ್ಯೆ 13 ಲಕ್ಷ. ಅಂದರೆ ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟರೆ 13 ಲಕ್ಷ ಮರಗಳು ಬೆಳೆಯು ತ್ತವೆ. ಮೈಸೂರಿನ ಹಸಿರು ತನ್ನಂತಾನೇ ಬೆಳೆಯುತ್ತದೆ. ಇದು ಬಹಳ ಮುಖ್ಯ. ಇದನ್ನು ನಗರಪಾಲಿಕೆ ಆಡಳಿತ ಗಮನಿಸಬೇಕು ಎಂದು ಸಲಹೆ ನೀಡಿದರು.

ಹಸಿರು ಎಂಬುದು ಹೊಸ ವಿಷಯವೇ ನಲ್ಲ. ನಮ್ಮ ದೇಶದ ಬಣ್ಣವೇ ಹಸಿರು. 15-20 ಸಾವಿರ ವರ್ಷಗಳಿಂದ ಹಸಿರು ಸಂಸ್ಕøತಿ ಬೆಳೆದು ಬಂದಿದೆ. ಆದರೆ ಇಂದು ಹಸಿರು ಸಂಸ್ಕøತಿಗೆ ಕೊಡಲಿ ಇಟ್ಟಿದ್ದೇವೆ. ಸರಿ ಮಾಡಿಕೊಳ್ಳುವ ಶಕ್ತಿ ಮತ್ತು ಪರಿ ಹಾರವೂ ನಮ್ಮಲ್ಲಿದೆ. ಆದರೆ ಅದಕ್ಕೆ ಸ್ವಲ್ಪ ಹೆಚ್ಚಿನ ಶ್ರಮ ಅಗತ್ಯ. ಆ ನಿಟ್ಟಿನಲ್ಲಿ ಲಕ್ಷ ವೃಕ್ಷ ಅಭಿಯಾನ ಶಕ್ತಿ ಕೊಡುವ ಪ್ರಯತ್ನ ವಾಗಲಿ ಎಂದು ಹಾರೈಸಿದರು.

ಪರಿಸರ ಪೋಷಕ ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ನಿವೃತ್ತ ಐಎಫ್‍ಎಸ್ ಅಧಿಕಾರಿ ಎ.ಸಿ.ಲಕ್ಷ್ಮಣ್, ನಮ್ಮ ಮೈಸೂರು ಫೌಂಡೇಷನ್‍ನ ದಶರಥ್, ಕೋಟಿ ವೃಕ್ಷ ಪ್ರತಿಷ್ಠಾನದ ಸಂಸ್ಥಾಪಕ ಶ್ರೀಕಾಂತ್, ಚಾಮ ರಾಜನಗರದ ಆಡಿಟರ್ ವೆಂಕಟೇಶ್, ಮೈಸೂರಿನ ಪರಿಸರ ಪ್ರೇಮಿ ರಘುಲಾಲ್ ಅಂಡ್ ಕಂಪನಿಯ ರಾಘವನ್, ಧರ್ಮ ಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ ಅವರಿಗೆ ಪರಿಸರ ಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಅಲ್ಲದೆ ಇದೇ ಸಂದರ್ಭದಲ್ಲಿ 10 ಸಾವಿರ ಸಸಿಗಳನ್ನು ಉಚಿತವಾಗಿ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಸಾಂಕೇತಿಕವಾಗಿ ಐದು ಜನರಿಗೆ ಸಸಿ ಗಳನ್ನು ವಿತರಿಸಲಾಯಿತು. ಕಾರ್ಯ ಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗ ನ್ನಾಥ್, ಶಾಸಕ ತನ್ವೀರ್‍ಸೇಠ್, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಡಾ.ಬಿ. ಹೆಚ್.ಮಂಜುನಾಥ್, ರಾಜೀವ್ ಸ್ನೇಹ ಬಳಗದ ಹೆಚ್.ವಿ.ರಾಜೀವ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಮೈಸೂರು ಜಿಲ್ಲಾ ಧರ್ಮ ಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಜಿಲ್ಲಾ ನಿರ್ದೇ ಶಕ ವಿ.ವಿಜಯಕುಮಾರ್ ನಾಗನಾಳ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಎಂ. ನಾಗಭೂಷಣ್ ಇನ್ನಿತರರು ಉಪಸ್ಥಿತರಿದ್ದರು.