ಕ್ಷೇತ್ರ ಬಿಟ್ಟ ಶಾಸಕರು: ಯಾವ ಪಕ್ಷದ ಶಾಸಕರು ಯಾವ ರೆಸಾರ್ಟ್‍ನಲ್ಲಿದ್ದಾರೆ?

ಬೆಂಗಳೂರು, ಜು.12- ಸಮ್ಮಿಶ್ರ ಸರ್ಕಾರವನ್ನು ವಿರೋಧಿಸಿ 16 ಶಾಸಕರು ರಾಜೀನಾಮೆ ನೀಡಿರುವುದರಿಂದ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್‍ಗೆ ಕಳುಹಿಸಿವೆ. ಜು.12ರಂದು ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್-ಬಿಜೆಪಿ ಪಕ್ಷಗಳ ಶಾಸಕರು ರೆಸಾರ್ಟ್‍ನತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರು ಕ್ಲಾರ್ಕ್ಸ್ ಎಕ್ಸೋಟಿಕಾ ರೆಸಾರ್ಟ್‍ನಲ್ಲಿರಲಿದ್ದಾರೆ. ಇನ್ನು ಬಿಜೆಪಿ ಶಾಸಕರು ಬೆಂಗಳೂರಿನ ರಮಾಡ ಹೋಟೆಲ್‍ನಲ್ಲಿರಲಿದ್ದಾರೆ. ಬಿಜೆಪಿ ಎರಡು ದಿನಗಳಿಗೆ 30 ರೂಮ್‍ಗಳನ್ನು ಕಾಯ್ದಿರಿಸಿದೆ. ಪಕ್ಷದ ಎಲ್ಲಾ ಶಾಸಕರು ಹೊಟೆಲ್‍ಗೆ ತೆರಳಲಿದ್ದು, ಸೋಮವಾರ ಸದನಕ್ಕೆ ಆಗಮಿಸಲಿ ದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.