ಮೈಸೂರು, ಜೂ.20(ಆರ್‍ಕೆಬಿ)- ರಮೇಶ್‍ಚಂದ್ರ ರತನ್ ನೇತೃತ್ವದಲ್ಲಿ ಸದಸ್ಯ ರಾದ ವೆಂಕಟಮರಣಿ, ಎಂ.ಎನ್.ಸುಂದರ್, ಸದಾನಂದ ತನವಾಡೆ ಅವರನ್ನು ಒಳ ಗೊಂಡ ರೈಲು ಪ್ರಯಾಣಿಕರ ಸೇವೆಗಳ ಸಮಿತಿ (ಪಿಎಸ್‍ಸಿ)ಯ ತಂಡ ಗುರು ವಾರ ಮೈಸೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಒದಗಿಸಲಾಗಿರುವ ವಿವಿಧ ಸೌಲಭ್ಯಗಳ ಮಾಹಿತಿ ಪಡೆದುಕೊಂಡಿತು.
ಮುಂಗಡ ಟಿಕೆಟ್ ಕಾಯ್ದಿರಿಸುವ ಕಚೇರಿ (ಪಿಆರ್‍ಎಸ್), ಬುಕಿಂಗ್ ಕಚೇರಿ, ನಿರೀಕ್ಷಣಾ ಗೃಹಗಳಲ್ಲಿ ಕಾಯುತ್ತಿರುವ ರೈಲು ಬಳಕೆಗಾರರೊಂದಿಗೆ ಸಮಿತಿ ಸದಸ್ಯರು ಸಂವಹನ ನಡೆಸಿದರು. ನಿಲ್ದಾಣದಲ್ಲಿ ಪ್ರಯಾ ಣಿಕರ ಸೌಕರ್ಯಕ್ಕಾಗಿ ಕೈಗೊಂಡಿ ರುವ ಕಾಮಗಾರಿ ಕುರಿತು ಮೈಸೂರು ವಿಭಾಗದ ಪ್ರಯತ್ನವನ್ನು ಶ್ಲಾಘಿಸಿದ ಸಮಿತಿ, ಇತರೆ ರೈಲ್ವೆ ನಿಲ್ದಾಣಗಳು ಮೈಸೂರು ಮಾದರಿ ಯನ್ನು ಅನುಸರಿಸಬೇಕು ಎಂದು ಅಭಿಪ್ರಾಯ ಪಟ್ಟಿತು. ಮೈಸೂರು ನಿಲ್ದಾಣದ ಪ್ರಾಂಗಣ ದಲ್ಲಿ ಪುನರ್ ನಿರ್ಮಾಣ ಕಾರ್ಯ ಕೈಗೊಂಡಿರುವುದು ಸೇವೆಗಳಿಗೆ ಅಡ್ಡಿ ಉಂಟಾಗಿದ್ದರೂ ರಸ್ತೆ ಮೂಲಕ ಪ್ರಯಾ ಣಿಕರಿಗೆ ಮಾಡಲಾದ ವ್ಯವಸ್ಥೆ ಬಗ್ಗೆ ಸಮಿತಿ ಪ್ರಶಂಸೆ ವ್ಯಕ್ತಪಡಿಸಿತು.
ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಯಾವ ಹಂತದಲ್ಲೂ ಕಡೆ ಗಣಿಸದಂತೆ ವಿಭಾಗಕ್ಕೆ ಸೂಚನೆ ನೀಡಿದ ಸಮಿತಿ, ಲಭ್ಯವಿರುವ ತಂತ್ರಜ್ಞಾನ ಬಳಸಿ ಕೊಂಡು, ವಿಶೇಷವಾಗಿ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಸಿಸಿಟಿವಿ ಕಣ್ಗಾ ವಲು ಹೆಚ್ಚಿಸಿ, ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಖಾತ್ರಿಪಡಿಸಿಕೊಳ್ಳುವಂತೆಯೂ ಸೂಚಿಸಿತು. ನಿಲ್ದಾಣದ ಎಲ್ಲಾ 6 ಪ್ಲಾಟ್ ಫಾರಂಗಳಲ್ಲಿಯೂ ತುರ್ತು ವೈದ್ಯಕೀಯ ಆರೈಕೆ ಕೇಂದ್ರ ತೆರೆಯುವ ಸಾಧ್ಯತೆ ಬಗ್ಗೆ ಚಿಂತಿಸಲು ರೈಲ್ವೆಗೆ ಸೂಚಿಸಿತು. ರೈಲ್ವೆ ಬಳಕೆ ದಾರರಿಗೆ ನಿಲ್ದಾಣದಲ್ಲಿ ಉಚಿತ ಬ್ಯಾಟರಿ ವಾಹನ, ತುರ್ತು ವೈದ್ಯಕೀಯ ಸೇವೆ, ಕೊಠಡಿಗಳ ಆನ್‍ಲೈನ್ ಬುಕಿಂಗ್ ವ್ಯವಸ್ಥೆ, ಕುಡಿಯುವ ನೀರು ಮಾರಾಟ ಯಂತ್ರ ಮುಂತಾದವುಗಳ ಗುಣಮಟ್ಟದ ಬಗ್ಗೆ ಹಾಗೂ ನಿಲ್ದಾಣದಲ್ಲಿನ ಸ್ವಚ್ಛತೆಯ ಬಗ್ಗೆ ಸಮಿತಿ ಸದಸ್ಯರು ತೃಪ್ತಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣ ಗರ್ಗ್ ಅವರು ರೈಲ್ವೆ ಗ್ರಾಹಕರಿಗೆ ಒದಗಿ ಸುತ್ತಿರುವ ಸೇವೆಗಳ ಮತ್ತಷ್ಟು ಸುಧಾ ರಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಮಿತಿ ಸದಸ್ಯರೊಂದಿಗೆ ಚರ್ಚಿಸಿದರು. ಹಿರಿಯ ವಿಭಾಗೀಯ ವಾಣಿಜ್ಯ ವ್ಯವ ಸ್ಥಾಪಕ ಡಾ.ಎಸ್.ಜಿ.ಯತೀಶ್ ಅವರು ಮೈಸೂರು ರೈಲ್ವೆ ನಿಲ್ದಾಣದಲ್ಲಿ ವಿವಿಧ ಸೇವಾ ಸುಧಾರಣಾ ಕಾರ್ಯಗಳಿಗೆ ಸಂಬಂಧಿಸಿದ ಪವರ್ ಪಾಯಿಂಟ್ ಪ್ರಸ್ತುತಪಡಿಸಿದರು. ಹೆಚ್ಚುವರಿ ವಿಭಾ ಗೀಯ ರೈಲ್ವೆ ವ್ಯವಸ್ಥಾಪಕ ಎ.ದೇವ ಸಹಾಯಂ ಉಪಸ್ಥಿತರಿದ್ದರು.