ಇರ್ವಿನ್, ದೇವರಾಜ ಅರಸು ರಸ್ತೆಗೆ ತರಾತುರಿ ಪ್ಯಾಚ್‍ವಕ್ರ್ಸ್

ಮೈಸೂರು,ಸೆ.16(ಆರ್‍ಕೆ)-ದಸರಾಗೆ ದಿನಗಣನೆ ಆರಂಭವಾಗಿದ್ದು, ಮೈಸೂರು ಮಹಾನಗರ ಪಾಲಿಕೆಯು ರಸ್ತೆ ಕಾಮಗಾರಿ ಗಳನ್ನು ತ್ವರಿತಗತಿಯಲ್ಲಿ ನಡೆಸುತ್ತಿದೆ.

ಇರ್ವಿನ್ ರಸ್ತೆಯ ಅಗಲೀಕರಣಕ್ಕಾಗಿ ಎರಡೂ ಕಡೆಯ ಕಟ್ಟಡಗಳ (ಭಾಗಶಃ)ನ್ನು ಕೆಡವುತ್ತಿರುವುದರಿಂದ ಸದ್ಯಕ್ಕೆ ಗುಂಡಿ ಬಿದ್ದಿ ರುವ ರಸ್ತೆ ಪ್ಯಾಚ್ ವರ್ಕ್ ಅನ್ನು ಕೈಗೆತ್ತಿಕೊಳ್ಳ ಲಾಗಿದೆ. ದಸರಾ ಅನುದಾನದಡಿ ನೆಹರು ಸರ್ಕಲ್‍ನಿಂದ ಸರ್ಕಾರಿ ಆಯುರ್ವೇದ ಸರ್ಕಲ್‍ವರೆಗೆ 500 ಮೀಟರ್ ಅಂತರದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಇಂದು ನಡೆಯಿತು.

ಡಿ.ದೇವರಾಜ ಅರಸು ರಸ್ತೆಯ ಫುಟ್ ಪಾತ್ ಹಾಗೂ ರಸ್ತೆಯ ಗುಂಡಿ ಮುಚ್ಚಿ ಪ್ಯಾಚ್ ಮಾಡುವುದು, ಜೆಎಲ್‍ಬಿ ರಸ್ತೆ, ಬೆಂಗಳೂರು-ನೀಲಗಿರಿ ರಸ್ತೆ, ಅಶೋಕ ರಸ್ತೆ ಸೇರಿದಂತೆ ಮೈಸೂರು ನಗರದ ಹೃದಯ ಭಾಗದಲ್ಲಿರುವ ಎಲ್ಲಾ ರಸ್ತೆಗಳ ರಿಪೇರಿ ಕಾಮಗಾರಿ ಶೀಘ್ರಗತಿಯಲ್ಲಿ ನಡೆಯುತ್ತಿದೆ.

ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಸೂಪರಿಂಟೆಂಡಿಂಗ್ ಇಂಜಿನಿಯರ್ ನಾಗ ರಾಜ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಡಿ. ನಾಗರಾಜ್ ಅವರು ಇಂದು ರಸ್ತೆ ಕಾಮ ಗಾರಿಗಳನ್ನು ಪರಿಶೀಲಿಸಿದರು.