ಅಹಂಕಾರ, ಸೋಮಾರಿತನ ತ್ಯಜಿಸಿದರೆ ಸಾಧನೆ ಸುಲಭ

`ಸಾಧಕರೊಂದಿಗೆ ಸಂವಾದ’ದಲ್ಲಿ ವಿದ್ಯಾರ್ಥಿಗಳಿಗೆ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಮಾರ್ಗದರ್ಶನ
ಮೈಸೂರು,ಜ.23(ಎಂಟಿವೈ)- ಅಹಂ ಕಾರ ಹಾಗೂ ಸೋಮಾರಿತನಕ್ಕೆ ಆಸ್ಪದ ನೀಡದೆ ಸಾಧನೆ ಮಾಡುವತ್ತ ಗಮನ ಕೇಂದ್ರೀಕರಿಸುವಂತೆ ವಿದ್ಯಾರ್ಥಿಗಳಿಗೆ ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾ ಚಲ ಶಾಸ್ತ್ರಿ ಸಲಹೆ ನೀಡಿದ್ದಾರೆ.

ಮೈಸೂರಿನ ಜಯಲಕ್ಷ್ಮೀಪುರಂನಲ್ಲಿ ರುವ ಮಹಾಜನ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಗುರುವಾರ ಆಯೋಜಿಸಿದ್ದ `ಸಾಧಕ ರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಅಹಂಕಾರ ಹಾಗೂ ಸೋಮಾ ರಿತನಕ್ಕೆ ಅವಕಾಶ ನೀಡಬಾರದು. ಕಳೆದು ಹೋದ ದಿನಗಳ ಬಗ್ಗೆ ಚಿಂತಿಸದೆ, ಮುಂಬ ರುವ ದಿನದಲ್ಲಿ ಸಾಧನೆ ಮಾಡುವುದಕ್ಕೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ನಾಡಿನ ಶ್ರೇಷ್ಠ ಸಾಹಿತಿ, ಕವಿಗಳು ಹಾಗೂ ಬರಹ ಗಾರರ ಕೃತಿಗಳನ್ನು ಓದಿಕೊಳ್ಳಬೇಕು. ಇದ ರಿಂದ ಸಂಸ್ಕಾರ ಲಭಿಸುತ್ತದೆ, ಪ್ರಭಾವಿ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.

ಮಾಗಿದ ವಯಸ್ಸು ಮತ್ತು ಮಾಗಿದ ವರ್ಚಸ್ಸು ನನ್ನದಾಗಿದೆ. ದೈಹಿಕ ಮತ್ತು ಬೌದ್ಧಿಕ ವರ್ಚಸ್ಸು ಕಡಿಮೆಯಾಗುತ್ತಿದೆ. ಇದು ಸಹಜವಾದ ಪ್ರಕ್ರಿಯೆ. ನಾನು ಪದವಿ ವ್ಯಾಸಂಗಕ್ಕೆ ಐಚ್ಛಿಕ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದು ಆಕಸ್ಮಿಕವಲ್ಲ. ಮೊದಲಿನಿಂ ದಲೂ ಕನ್ನಡದ ಬಗ್ಗೆ ಆಸಕ್ತಿ ಮತ್ತು ಅಭಿರುಚಿ ಇತ್ತು. ನಾನು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಸಿಕ್ಕ ಗುರುಗಳು ನನ್ನ ಆಸಕ್ತಿ ಮತ್ತು ಅಭಿರುಚಿಗೆ ನೀರೆ ರೆದರು. ನಂತರ ಸಿಕ್ಕ ಪ್ರಾಧ್ಯಾಪಕರಿಂದಾಗಿ ನನಗೆ ಉತ್ತಮ ಜೀವನ ಕಲ್ಪಿಸಿಕೊಳ್ಳಲು ಸಾಧÀ್ಯವಾಯಿತು ಎಂದು ತಮ್ಮ ಗುರು ಪರಂಪರೆಯನ್ನು ಸ್ಮರಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಉದ್ಘಾ ಟಿಸಿ ಮಾತನಾಡಿ, ಇಂದು ದೋಷಪೂರ್ಣ ಕನ್ನಡ ಬಳಕೆ ಸಾಮಾನ್ಯವಾಗಿದ್ದು, ವ್ಯಾಕರಣ ಬದ್ಧ ಪದ ಪ್ರಯೋಗಗಳು ಆಗಬೇಕು. ಆಡ ಳಿತದಲ್ಲಿ ಕನ್ನಡ ಅನುಷ್ಠಾನ ಮಾಡುವುದು ಸವಾಲಿನ ಕೆಲಸವಾಗಿದೆ. ಇದಕ್ಕೆ ಒಂದು ಚೌಕಟ್ಟು ರೂಪಿಸಲು ಕನ್ನಡ ಅಭಿವೃದ್ಧಿ ಪ್ರಾಧಿ ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಡಾ.ಎನ್.ಎಸ್. ತಾರಾ ನಾಥ್ ಮಾತನಾಡಿ, ಮೈಸೂರಿನ ಪ್ರಸಿದ್ಧಿಗೆ ಪ್ರವಾಸಿ ತಾಣಗಳ ಜೊತೆಗೆ ವಿದ್ಯಾ ಕೇಂದ್ರ ಗಳು ಹಾಗೂ ವಿದ್ವಾಂಸರು ಕಾರಣರಾಗಿ ದ್ದಾರೆ. ಮೈಸೂರು ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಕೀರ್ತಿ ತಂದವರಲ್ಲಿ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿಯವರೂ ಒಬ್ಬರು. ಇವರಿಗೆ ಹಳೆಗನ್ನಡ ಎಂದರೆ ಕಡುವ್ಯಾಮೋಹ. ಒಂದು ರೀತಿ ಅಭಿನವ ಸಾಹಿತ್ಯ ತಪಸ್ವಿಯಂತಿದ್ದಾರೆ. ಸೃಜನ ಶೀಲ ಕ್ಷೇತ್ರವನ್ನು ಬಿಟ್ಟು ಸಂಶೋಧÀನಾ ಕ್ಷೇತ್ರಕ್ಕೆ ತಮ್ಮನ್ನು ತೊಡಗಿಸಿಕೊಂಡ ಶಾಸ್ತ್ರಿಗಳು, ಸಂಶೋಧÀನೆಗಾಗಿ ಪ್ರಾಧ್ಯಾಪಕ ಹುದ್ದೆಯನ್ನೇ ತ್ಯಜಿಸಿದರು. ಬಳಿಕ 1980ರ ನಂತರ ಹಲ ವಾರು ಕೃತಿಗಳನ್ನು, ಹಳೆಗನ್ನಡ ಸಾಹಿತ್ಯ ಸಂಶೋಧÀನೆ ನಡೆಸಿ ಪ್ರಕಟಿಸಿದರು. ಇವರು ಹಳೆಗನ್ನಡಕ್ಕಷ್ಟೇ ಸೀಮಿತರಾಗದೇ, ನಿಘಂಟು, ಜೈನಸಾಹಿತ್ಯದಲ್ಲೂ ಹೆಚ್ಚು ಕೆಲಸ ಮಾಡಿ ದ್ದಾರೆ. ಹೊಸಗನ್ನಡ ಸಾಹಿತ್ಯದಲ್ಲೂ ಕೃಷಿ ಮಾಡಿದ ಅಪೂರ್ವ ವ್ಯಕ್ತಿಯಾಗಿದ್ದಾರೆ. ಕನ್ನಡ ಪದಗಳ ದೋಷಗಳನ್ನು ವಿವರಣೆ ಸಹಿತ ತಿದ್ದುವ ಪ್ರಯತ್ನ ಮಾಡುವ ಮೂಲಕ ಹೊಸ ತಲೆಮಾರಿಗೆ 100 ಮೌಲ್ವಿಕ ಕೃತಿ ಗಳನ್ನು ನೀಡಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಡಾ.ಟಿ.ವಿ. ವೆಂಕಟಾ ಚಲ ಶಾಸ್ತ್ರಿ ಅವರಿಗೆ ಅಭಿನಂದಿಸಲಾಯಿತು. ಮಧ್ಯಾಹ್ನದ ನಂತರ 14 ವಿದ್ಯಾರ್ಥಿಗಳು ಕವನ ವಾಚನ ಮಾಡಿ ಗಮನ ಸೆಳೆದರು. ಮೈಸೂರು ವಿವಿ ಕುವೆಂಪು ಕನ್ನಡ ಅಧÀ್ಯಯನ ಸಂಸ್ಥೆಯ ನಿರ್ದೇಶಕ ಡಾ.ನೀಲಗಿರಿ ತಳ ವಾರ, ಮಹಾಜನ ಪ್ರಥಮ ದರ್ಜೆ ಕಾಲೇ ಜಿನ ಪ್ರಾಂಶುಪಾಲ ಡಾ.ಎಸ್. ವೆಂಕಟರಾಮು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ಸಾಹಿತಿಗಳಾದ ಹೆಚ್.ಎಂ.ನಾಗರಾಜರಾವ್, ಡಾ.ಜ್ಯೋತಿ ಶಂಕರ್, ಡಾ.ಪಂಡಿತಾರಾಧÀ್ಯ, ಡಾ.ಹೆಚ್. ಆರ್.ತಿಮ್ಮೇಗೌಡ ಇದ್ದರು.