ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ತೀವ್ರ ನಿಗಾ ವಹಿಸಲು ಪೊಲೀಸರ ಸೂಚನೆ

ಮೈಸೂರು: ಏಪ್ರಿಲ್ 23 ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕ ರಣವನ್ನು ಗಂಭೀರವಾಗಿ ಪರಿಗಣಿಸಿ ರುವ ಮೈಸೂರು ಪೊಲೀಸರು ಸಾಂಸ್ಕøತಿಕ ನಗರಿಯಲ್ಲಿ ಅಗತ್ಯ ಮುಂಜಾ ಗ್ರತಾ ಕ್ರಮ ಕೈಗೊಂಡಿದ್ದಾರೆ.

ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲ ಕೃಷ್ಣ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತು ರಾಜ್, ಶುಕ್ರವಾರ ನಜರ್‍ಬಾದ್‍ನ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಹೋಟೆಲ್ ಮಾಲೀಕರು, ವ್ಯವಸ್ಥಾಪಕರು, ಚರ್ಚೆ, ಮಸೀದಿ, ದೇವಸ್ಥಾನ, ಐಟಿ-ಬಿಟಿ ಕಂಪನಿ ಮುಖ್ಯಸ್ಥರು ಹಾಗೂ ಕೈಗಾ ರಿಕೋದ್ಯಮಿಗಳೊಂದಿಗೆ ಸಭೆ ನಡೆಸಿದರು.

ಮೈಸೂರು ನಗರ ಹಾಗೂ ಹೊರ ವಲಯದಲ್ಲಿರುವ 24 ಸ್ಟಾರ್ ಹೋಟೆಲ್ ಸೇರಿದಂತೆ ಒಟ್ಟು 350 ಹೋಟೆಲ್ ಮತ್ತು ಲಾಡ್ಜ್‍ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ, ಬ್ಯಾಗೇಜ್ ಸ್ಕ್ಯಾನರ್‍ಗಳನ್ನು ಅಳವಡಿಸಿ ಹೋಟೆಲ್‍ಗೆ ಬರುವವರ ಲಗೇಜ್ ಬ್ಯಾಗ್ ಗಳನ್ನು ಸ್ಕ್ಯಾನ್ ಮಾಡಬೇಕು, ಪ್ರವೇಶ ದ್ವಾರದಲ್ಲಿ ಮೆಟಲ್ ಫ್ರೇಮ್ ಡೋರ್ ಡಿಟೆ ಕ್ಟರ್ ಹಾಗೂ ಹ್ಯಾಂಡ್ ಮೆಟಲ್ ಡಿಟೆಕ್ಟರ್ ಗಳಿಂದ ಪರೀಕ್ಷಿಸಬೇಕು. ಹೋಟೆಲ್‍ಗಳಿಗೆ ಬರುವವರ ಪೂರ್ವಾಪರ ವಿಚಾರಿಸಬೇಕು ಎಂದು ಮುತ್ತುರಾಜ್ ಸೂಚಿಸಿದರು.

ದೇವಸ್ಥಾನಗಳಿಗೆ ಹೊಸಬರು ಭೇಟಿ ನೀಡಿದಾಗ ಅಥವಾ ಅನುಮಾನಾಸ್ಪದ ವ್ಯಕ್ತಿಗಳು ಕಂಡರೆ ಅವರ ಚಲನ-ವಲನ ಗಳ ಮೇಲೆ ನಿಗಾ ಇರಿಸಬೇಕು. ಐಟಿ-ಬಿಟಿ ಕಂಪನಿಗಳು ಹಾಗೂ ಕೈಗಾರಿಕೆಗಳಲ್ಲಿ ಅಗತ್ಯ ಭದ್ರತಾ ಕ್ರಮ ವಹಿಸುವಂತೆಯೂ ಸೂಚನೆ ನೀಡಿದ್ದಾರೆ. ಮೈಸೂರು ರೈಲು ನಿಲ್ದಾಣ, ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ ಸೇರಿದಂತೆ ಪ್ರವಾಸಿ ತಾಣ ಗಳಲ್ಲಿ ದಿನದ 24 ಗಂಟೆಯೂ ಭದ್ರತೆ ಗಾಗಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋ ಜಿಸಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲ ಕೃಷ್ಣ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮತ್ತೊಂದೆಡೆ ರಾಜ್ಯ ಗುಪ್ತಚರ ವಿಭಾ ಗದ ಎಸ್‍ಪಿ ಬಿ.ಟಿ.ಕವಿತಾ ನೇತೃತ್ವದ ತಂಡ ಭಯೋತ್ಪಾದನಾ ಕೃತ್ಯಗಳ ಸಂಬಂಧ ನಿಗಾ ವಹಿಸಿ ಎಲ್ಲೆಡೆ ಎಚ್ಚರ ವಹಿಸಿದ್ದಾರೆ. ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿ, ಸಂಶಯಾಸ್ಪದ ವ್ಯಕ್ತಿಗಳು ಹಾಗೂ ವಸ್ತು ಗಳ ಮೇಲೆ ತೀವ್ರ ನಿಗಾ ವಹಿಸುತ್ತಿದ್ದಾರೆ.