ಅರ್ಥಪೂರ್ಣವಾಗಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ

ಚಾಮರಾಜನಗರ:  ದೇಶದ ಭದ್ರತೆ, ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆಗಾಗಿ ಜೀವದ ಹಂಗು ತೊರೆದು ಹೋರಾಡಿ ವೀರ ಮರಣವನ್ನಪ್ಪಿದ ಪೊಲೀ ಸರಿಗೆ ಗೌರವ ನಮನ ಸಲ್ಲಿಸುವ ಸಲು ವಾಗಿ ನಡೆದ ಪೊಲೀಸ್ ಹುತಾತ್ಮರ ದಿನ ಆಚರಣೆ ಕಾರ್ಯಕ್ರಮ ನಗರದಲ್ಲಿಂದು ಅರ್ಥಪೂರ್ಣವಾಗಿ ನಡೆಯಿತು.

ಜಿಲ್ಲಾ ಪೊಲೀಸ್ ಕವಾಯಿತು ಮೈದಾನ ದಲ್ಲಿ 60ನೇ ವರ್ಷದ ಪೊಲೀಸ್ ಹುತಾ ತ್ಮರ ದಿನದ ಸ್ಮರಣೆ ಅಂಗವಾಗಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾ ಗಿದ್ದ ಗೌರವ ವಂದನೆ ಕಾರ್ಯಕ್ರಮವು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ಜಿ.ಬಸವರಾಜ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂ ದರ್ ಕುಮಾರ್ ಮೀನಾ ಅವರ ಸಮ್ಮು ಖದಲ್ಲಿ ನೆರವೇರಿತು.

ಮೊದಲಿಗೆ ಪರೇಡ್ ಕಮಾಂಡರ್ ಅವರಿಂದ ವಂದನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ನಂತರ ಮುಖ್ಯ ಅತಿಥಿ, ವಿಶೇಷ ಆಹ್ವಾನಿತರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಗಣ್ಯರು ಹುತಾತ್ಮ ಪೊಲೀಸ ರಿಗೆ ಪುಷ್ಪಗುಚ್ಚ ಸಮರ್ಪಣೆ ಮಾಡಿದರು.

ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾತ ನಾಡಿ, ಕಾನೂನು ಸುವ್ಯವಸ್ಥೆಗಾಗಿ ಕರ್ತವ್ಯ ದಲ್ಲಿದ್ದ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರನ್ನು ಇಂದು ಸ್ಮರಣೆ ಮಾಡ ಲಾಗುತ್ತಿದೆ. ರಾಜ್ಯದ 15 ಮಂದಿ ಸೇರಿ ದಂತೆ ದೇಶದ ವಿವಿಧ ಭಾಗಗಳಲ್ಲಿ 414 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ಅವರುಗಳನ್ನು ಸ್ಮರಿಸುವುದು ಈ ದಿನದ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡಿದ್ದ ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಬಸವರಾಜ ಮಾತನಾಡಿ, ನಾಡಿನ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ನಾವೆಲ್ಲರು ಯಾವುದೇ ಭಯ-ಭೀತಿ ಇಲ್ಲದೆ ನೆಮ್ಮದಿ ಜೀವನ ನಡೆಸಲು ಪೊಲೀಸರು ಸಹ ಕಾರಣರಾಗಿದ್ದಾರೆ. ಹುತಾತ್ಮರಾದ ಪೊಲೀಸ್ ಕುಟುಂಬಕ್ಕೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದರು.

ತದನಂತರ ಪರೇಡ್ ಕಮಾಂಡರ್ ಅವರು ಮೂರು ಸುತ್ತಿನ ವಾಲೀ ಫೈರಿಂಗ್ ನಡೆಸಿದರು. ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷಗಳ ಮೌನಾಚರಣೆ ಮಾಡಲಾಯಿತು.

ಪೊಲೀಸ್ ಹುತಾತ್ಮರ ದಿನ ಆಚರಣೆ ಅಂಗವಾಗಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಏರ್ಪಡಿಸ ಲಾಗಿದ್ದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹು ಮಾನ, ಪ್ರಮಾಣಪತ್ರಗಳನ್ನು ಇದೇ ಸಂದ ರ್ಭದಲ್ಲಿ ವಿತರಿಸಲಾಯಿತು.