ರಾಜಕೀಯ ಸಂಚಲನ ಮೂಡಿಸಿರುವ ಸಂತೋಷ್ ಜೀ ರಾಜ್ಯ ಭೇಟಿ

ಬೆಂಗಳೂರು, ನ.23(ಕೆಎಂಶಿ)- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜೀ ಇಂದು ರಾಜ್ಯದ ಬಿಜೆಪಿ ಮುಖಂಡರೊಟ್ಟಿಗೆ ಸಮಾಲೋಚನೆ ನಡೆಸಿ, ಪಕ್ಷ ಮತ್ತು ಸರ್ಕಾರದಲ್ಲಿ ಸಂಚಲನ ಮೂಡಿಸಿ ದ್ದಾರೆ. ಇವರ ಎರಡು ದಿನಗಳ ರಾಜ್ಯ ಭೇಟಿ ಬಗ್ಗೆ, ನಾನಾ ರೀತಿ ವ್ಯಾಖ್ಯಾನ ಮಾಡಲಾಗು ತ್ತಿದೆ. ಇವರು ಇಂದು ಇಡೀ ದಿನ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪು ಟದ ಸಹೋದ್ಯೋಗಿಗಳು, ಪಕ್ಷದ ರಾಜ್ಯಾ ಧ್ಯಕ್ಷರು ಮತ್ತು ಮುಖಂಡರೊಟ್ಟಿಗೆ ಪ್ರತ್ಯೇಕ ಸಮಾಲೋಚನೆ ನಡೆಸಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಜೊತೆ ಖಾಸಗಿ ಹೊಟೇಲ್ ನಲ್ಲಿ ಮುಖಾಮುಖಿ ಭೇಟಿ ಮಾಡಿ, ಚರ್ಚೆ ನಡೆಸಿರುವುದು
ಭಾರಿ ಚರ್ಚೆಗೆ ಎಡೆಮಾಡಿದೆ. ಎಲ್ಲರ ಭೇಟಿಯ ನಂತರ ಮುಖ್ಯಮಂತ್ರಿಯವರ ಕಾವೇರಿ ನಿವಾಸಕ್ಕೆ ತೆರಳಿದ ಸಂತೋಷ್ ಜೀ, ಯಡಿಯೂರಪ್ಪನವರ ಜೊತೆ ಸುದೀರ್ಘವಾಗಿ ಚರ್ಚೆ ಮಾಡಿದರು. ಚರ್ಚೆ ಸಂದರ್ಭದಲ್ಲೇ ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಅವರನ್ನು ಅಲ್ಲಿಗೆ ಕರೆಸಿಕೊಂಡು, ರಾಜ್ಯ ರಾಜಕೀಯ ವಿದ್ಯಮಾನ, ಸಂಪುಟ ವಿಸ್ತರಣೆಗೆ ಸಂಬಂಧಿಸಿ ದಂತೆ ಹಾಗೂ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು, 3 ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ಇದಕ್ಕೆ ಪೂರ್ವ ಸಿದ್ಧತೆ ಬಗ್ಗೆಯು ಈ ನಾಯಕರು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಮುಂದೆ ಎದುರಾಗುತ್ತಿರುವ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೇಗೆ ಇರಬೇಕು ಎಂಬುದರ ಬಗ್ಗೆ, ಒಂದು ಲೋಕಸಭಾ ಕ್ಷೇತ್ರ ಹಾಗೂ 2 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾ ವಣೆಯ ಬಗ್ಗೆಯು ಸಮಾಲೋ ಚನೆ ಮಾಡಿದರು ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ ಸಂಪುಟ ವಿಸ್ತರಣೆ ಇಲ್ಲವೇ ಪುನರ್ರಚನೆ ಬಗ್ಗೆಯು ಚರ್ಚೆ ನಡೆಸಿದ್ದರು ಎನ್ನಲಾಗಿದೆ ಎಂದು ಸಚಿವ ಆಕಾಂಕ್ಷಿಗಳು ಹೇಳಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರು ಸಂಪುಟ ವಿಸ್ತರಣೆಗಾಗಿ ದೆಹಲಿಗೆ ಹೋಗಿ ಬಂದ ನಂತರ ಸಂತೋಷ್, ಈ ಭೇಟಿ ಎಲ್ಲಾ ಕೋನಗಳಲ್ಲೂ ಚರ್ಚೆಗೆ ಎಡೆಮಾಡಿದೆ. ಉನ್ನತ ಮೂಲಗಳ ಪ್ರಕಾರ ರಮೇಶ್ ಜಾರಕಿಹೊಳಿ ಮಾತ್ರ ಸರ್ಕಾರ ಬರಲು ಕಾರಣರಾದವರಿಗೆ ಮಂತ್ರಿ ಸ್ಥಾನ ಕೊಡಬೇಕು. ಲಕ್ಷ್ಮಣ್ ಸವದಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಸಂತೋಷ್ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.