ರಾಜಕಾರಣಿಗಳು, ಪೊಲೀಸರು ಸಮನ್ವಯತೆಯಿಂದ ಸಮಾಜ ಮುನ್ನಡೆಸುವ ಗುರುತರ ಜವಾಬ್ದಾರಿ ಹೊಂದಿದ್ದಾರೆ

ಸಂಸದ ಪ್ರತಾಪಸಿಂಹ ಅಭಿಮತ: ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರರಾವ್ ಸಹಮತ

ಮೈಸೂರು:  ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ತಮ್ಮ ವಸಾಹತುಶಾಹಿ ನೀತಿಯ ರಕ್ಷಣೆಗಾಗಿ ಸ್ಥಾಪಿಸಿಕೊಂಡಿದ್ದ ಪೊಲೀಸ್ ವ್ಯವಸ್ಥೆ, ಸಣ್ಣ -ಪುಟ್ಟ ಬದಲಾವಣೆಯೊಂದಿಗೆ ಇಂದಿಗೂ ಹಾಗೆಯೇ ಮುಂದುವರಿದಿದೆ. ಜೊತೆಗೆ ಪೊಲೀಸರು ಹಾಗೂ ಸಾರ್ವಜನಿಕರ ನಡು ವಿನ ಕಂದಕವೂ ಉಳಿದುಕೊಂಡು ಬಂದಿದೆ. ಈಗಿನ ಉದ್ದೇಶಕ್ಕೆ ತಕ್ಕಂತೆ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಯಾಗಬೇಕೆಂಬ ಆಶಯ, ‘ನೈಟ್ಸ್ ಇನ್ ಖಾಕಿ’ ಪೊಲೀಸ್ ಪಾರಿತೋಷಕ ಪ್ರಧಾನ ಸಮಾರಂಭದಲ್ಲಿ ವ್ಯಕ್ತವಾಯಿತು. ಶಾಸಕಾಂಗ ಹಾಗೂ ಕಾರ್ಯಾಂಗ ಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಮಹತ್ವ ಪಡೆದುಕೊಂಡಿದೆ.

ಮೈಸೂರು ರೌಂಡ್ ಟೇಬಲ್-21 (ಒಖಖಿ-21) ಮತ್ತು ಮೈಸೂರು ಲೇಡೀಸ್ ಸರ್ಕಲ್-9 (ಒಐಅ-9) ಸಹಯೋಗದಲ್ಲಿ ಚಾಮುಂಡಿಬೆಟ್ಟ ತಪ್ಪಲಿನ ಆಲೀವ್ ಗಾರ್ಡ್‍ನ್‍ನ ಸಮಾವೇಶ ಸಭಾಂಗಣ ದಲ್ಲಿ ನಡೆದ ‘ನೈಟ್ಸ್ ಇನ್ ಖಾಕಿ’ ಪೊಲೀಸ್ ಪಾರಿತೋಷಕ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಜನಸ್ನೇಹಿ ಪೊಲೀಸರೆಂದು ಹೇಳಿ ಕೊಂಡರೂ ಸಾರ್ವಜನಿಕರ ನಡುವಿನ ಕಂದಕ ಹಾಗೆಯೇ ಉಳಿದಿರುವ ಬಗ್ಗೆ ವಿಷಾಧ ವ್ಯಕ್ತಪಡಿಸಿದರಲ್ಲದೆ, ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಅಗತ್ಯವಾಗಿ ಆಗಬೇಕಿದೆ ಎಂದರು.

ರಾಜಕಾರಣಿಗಳು ಹಾಗೂ ಪೊಲೀಸರು, ಸಮಾಜದಲ್ಲಿ ಅತೀ ಹೆಚ್ಚು ದೂಷಣೆಗೆ ಒಳಗಾಗುತ್ತಾರೆ. ಏನೇ ಸಮಸ್ಯೆಯಾದರೂ ಈ ಇಬ್ಬರಿಗೆ ಹಿಡಿಶಾಪ ಹಾಕುತ್ತಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಶಿಕ್ಷಕರು, ವೈದ್ಯರು ಹಾಗೂ ಪೊಲೀಸರು ಸಮರ್ಥವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದರೆ ಸಾಕು ಅಭಿ ನಂದನಾರ್ಹರಾಗುತ್ತಾರೆ. ಬ್ರಿಟಿಷರನ್ನು ಓಡಿಸಿದ್ದೇವೆಯಾದರೂ ಅವರು ಬಿಟ್ಟು ಹೋಗಿ ರುವ ಖಾಕಿಯನ್ನು ಇಂದಿಗೂ ಉಳಿಸಿ ಕೊಂಡಿದ್ದೇವೆ. ಕೈಯಲ್ಲಿ ಲಾಠಿ ಹಿಡಿದು ಭಾರಿಸುವ, ಬೂಟ್‍ನಲ್ಲಿ ತುಳಿಯುವ ಖಾಕಿ ಛಾಪು ಇಂದಿಗೂ ಜನರ ಮನಸ್ಸಿ ನಲ್ಲಿದೆ. ಅದೇ ಭಯ, ಆತಂಕ, ಅವಿಶ್ವಾಸ ಉಳಿದಿದೆ. ಅಂದಿನಿಂದ ಪೊಲೀಸರು ಹಾಗೂ ಜನರ ನಡುವೆ ಸೃಷ್ಟಿಯಾದ ಕಂದಕವನ್ನು, ಇಂದಿನ ಜನಸ್ನೇಹಿ ಪೊಲೀಸರು ಮುಚ್ಚಲು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಿಸಿದರು.

ಪೊಲೀಸರ ಕಷ್ಟದ ಬಗ್ಗೆ ನನಗೆ ಅರಿ ವಿದೆ. ಆದರೆ ಯಾವುದೇ ಸಂದರ್ಭದಲ್ಲೂ ನೆರವಿಗಾಗಿ ಠಾಣೆಗೆ ಬರುವವರನ್ನು ವಿಶ್ವಾಸ ದಿಂದ ಕಂಡು, ಉತ್ತಮ ರೀತಿಯಲ್ಲಿ ನಡೆಸಿ ಕೊಳ್ಳಬೇಕು. ಕೇಸ್ ದಾಖಲಿಸಿಕೊಳ್ಳುವುದ ಕ್ಕಿಂತ ಮಾತುಕತೆಯಲ್ಲೇ ಸಮಸ್ಯೆ ಬಗೆಹರಿ ಸಲು ಆದ್ಯತೆ ನೀಡಬೇಕು. ಪ್ರೀತಿ, ವಿಶ್ವಾಸ ದಿಂದ ಕಂಡರೆ ಸಾಕು ಜನರ ಮನಸ್ಸಿನಲ್ಲಿ ಉತ್ತಮ ಪೊಲೀಸರಾಗುತ್ತೀರಿ. ವರ್ಗಾವಣೆ ಯಾದಾಗ ಜನರ ಅಭಿಮಾನ ಅಥವಾ ಬೈಗುಳ ಯಾವುದನ್ನು ಕೊಂಡೊಯ್ಯುತ್ತೀ ರೆಂಬುದು ನಿಮ್ಮ ಕರ್ತವ್ಯ ಶೈಲಿಯಲ್ಲಿರು ತ್ತದೆ. ನಿಜವಾಗಿ ಕಷ್ಟವಿದ್ದು, ನೆರವಿಗಾಗಿ ಠಾಣೆಗೆ ಬರುವವರಿಗೆ ಸ್ಪಂದಿಸಿ. ಹಾಗೆಯೇ ಯಾರದೋ ಶಿಫಾರಸ್ಸಿನ ಮೇಲೆ ಮತ್ತೊಬ್ಬ ರಿಗೆ ತೊಂದರೆ ಕೊಡುವ ದುರುದ್ದೇಶದಿಂದ ಬರುವವರ ಬಗ್ಗೆಯೂ ನಿಗಾ ವಹಿಸಿ ಎಂದು ಅವರು ಸಲಹೆ ನೀಡಿದರು.

ಅಧಿಕ ಕೆಲಸದ ಒತ್ತಡದಿಂದ ಪೊಲೀಸ್ ಸಿಬ್ಬಂದಿಯ ಆರೋಗ್ಯ ಹದಗೆಟ್ಟಿರುತ್ತದೆ. ಅವರ ಕುಟುಂಬದವರೊಂದಿಗೆ ಕಾಲ ಕಳೆ ಯುವುದಕ್ಕೂ ಅವಕಾಶ ಸಿಗುವುದಿಲ್ಲ. ಅವರ ವಾಸಕ್ಕೆ ನೀಡಿರುವ ಕ್ವಾರ್ಟಸ್‍ಗಳು ಅತ್ಯಂತ ದುಸ್ಥಿತಿಯಲ್ಲಿರುತ್ತವೆ. ದುಸ್ತರದ ಬದುಕು ಸಾಗಿಸುತ್ತಿರುವ ಸಿಬ್ಬಂದಿ ಹಿತಕ್ಕಾಗಿ ಐಪಿಎಸ್ ಹಂತದ ಅಧಿಕಾರಿಗಳು ಗಮನಹರಿಸಬೇಕು. ಎಸ್‍ಪಿ ಗ್ರೇಡ್‍ನಿಂದ ಕೆಳಹಂತದ ಅಧಿಕಾರಿ ಗಳು ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಉನ್ನತ ವ್ಯಾಸಂಗದವರೆಗೂ ಉಚಿತ ಶಿಕ್ಷಣ ನೀಡ ಬೇಕು. ಸೈನಿಕರಿಗಿಂತಲೂ ಪೊಲೀಸರು ಹೆಚ್ಚು ಸಂಕಷ್ಟದಲ್ಲಿದ್ದಾರೆ. ಪೊಲೀಸರು ಹಾಗೂ ರಾಜಕಾರಣಿಗಳು ಸಮನ್ವಯತೆಯಿಂದ ಸಮಾಜ ಮುನ್ನಡೆಸುವ ಗುರುತರ ಜವಾ ಬ್ದಾರಿ ಹೊಂದಿದ್ದಾರೆಂದು ಹೇಳಿದರು.

ಹುಣಸೂರಿನ ಹನುಮ ಜಯಂತಿ ಸಂದರ್ಭದಲ್ಲಿ ಬಿಳಿಕೆರೆ ಬಳಿ ತಮ್ಮ ಕಾರನ್ನು ಪೊಲೀಸರು ತಡೆದು ನಿಲ್ಲಿಸಿ, ಕ್ರಿಮಿನಲ್ ಕೇಸ್ ದಾಖಲಿಸಿದ ಘಟನೆಯನ್ನು ಇದೇ ವೇಳೆ ಸ್ಮರಿಸಿಕೊಂಡ ಪ್ರತಾಪ್‍ಸಿಂಹ, ಇಂತಹ ಘಟನೆಗಳಿಂದ ಪೊಲೀಸರ ಮೇಲಿನ ವಿಶ್ವಾಸ ಕುಂದುತ್ತದೆ. ರಾಜಕಾರಣಿಗಳನ್ನು ಎದುರು ಹಾಕಿಕೊಂಡರೆ ದೊಡ್ಡ ಹವಾ ಸೃಷ್ಟಿಸಿ ದಂತೆ ಎಂಬ ಭಾವನೆ ಕೆಲ ಐಪಿಎಸ್ ಅಧಿಕಾರಿ ಗಳಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಸಂಘ ಕಟ್ಟಿಕೊಂಡು ಸಕ್ರಿಯ ವಾಗುವ ಅಧಿಕಾರಿಗಳಿಗೆ ನಿಜವಾದ ಪೊಲೀಸ್ ಉದ್ದೇಶ ತಿಳಿದಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಹಳಷ್ಟು ಬದಲಾವಣೆಯಾಗಬೇಕು: ನಗರ ಪೊಲೀಸ್ ಆಯುಕ್ತರಾದ ಡಾ.ಎ. ಸುಬ್ರಹ್ಮಣ್ಯೇಶ್ವರರಾವ್ ಮಾತನಾಡಿ, ವಸಾ ಹತುಷಾಯಿ ನೀತಿ ರಕ್ಷಣೆಗಾಗಿ ಬ್ರಿಟಿಷರು ಮಾಡಿಕೊಂಡ ಪೊಲೀಸ್ ವ್ಯವಸ್ಥೆ ಇಂದಿ ನವರೆಗೂ ಹಾಗೆಯೇ ಮುಂದುವರಿದಿದೆ. ಸ್ವಾತಂತ್ರ್ಯ ಬಂದ ನಂತರ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ತರದೆ ಸಣ್ಣಪುಟ್ಟ ಬದಲಾವಣೆ ಮಾಡಲಾಗುತ್ತಿದೆ. ಹಾಗಾಗಿ ಅದೇ ಸಮವಸ್ತ್ರ, ಲಾಠಿ, ಬೂಟು, ನಿಯಮ ಗಳು ಇಂದಿಗೂ ಮುಂದುವರೆದಿವೆ. ಸಾರ್ವ ಜನಿಕರು ಹಾಗೂ ಪೊಲೀಸರ ನಡುವಿನ ಕಂದಕ, ಕೋಳಿ ಮೊದಲ ಮೊಟ್ಟೆ ಮೊದಲ ಎಂಬಂತೆ ಹಾಗೆಯೇ ಉಳಿದಿದೆ. `ನೈಟ್ಸ್ ಇನ್ ಖಾಕಿ’ ಎಂಬ ಕಾರ್ಯಕ್ರಮ ಬದಲಾವಣೆ ಹಾದಿಯ ಮೊದಲ ಹೆಜ್ಜೆಯಂತಿದೆ. ಪೊಲೀ ಸರ ಕಾರ್ಯವನ್ನು ಮೆಚ್ಚಿ, ಪ್ರೋತ್ಸಾಹಿ ಸುತ್ತಿರುವುದು ಅಭಿನಂದನಾರ್ಹ. ಎಲ್ಲಾ ರೀತಿಯಲ್ಲೂ ಪೊಲೀಸ್ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಯಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಸದರಾದ ಪ್ರತಾಪ್‍ಸಿಂಹ ಅವರು ಪೊಲೀಸ್ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದು, ಅವರಿಗೆ ವೈಯಕ್ತಿಕವಾಗಿ ಅಭಿನಂದನೆ ತಿಳಿಸುತ್ತೇನೆ. ಅವರು ಹೇಳಿದಂತೆ ಸಮಾಜದಲ್ಲಿ ಯಾವ ಘಟನೆ ನಡೆದರೂ ಪೊಲೀಸರು ಹಾಗೂ ರಾಜಕಾರಣ ಗಳನ್ನು ದೂಷಿಸಲಾಗುತ್ತದೆ. ನಾನು ವೈದ್ಯನಾಗಿ ದ್ದರಿಂದ ವೈದ್ಯಮಿತ್ರರ ವಾಟ್ಸಾಪ್ ಗ್ರೂಪ್ ನಲ್ಲಿದ್ದೇನೆ. ಇತ್ತೀಚೆಗೆ ಹೆಚ್ಚುತ್ತಿರುವ ವೈದ್ಯರ ಮೇಲಿನ ಹಲ್ಲೆ, ಆಸ್ಪತ್ರೆಯಲ್ಲಿ ದಾಂಧಲೆ ಘಟನೆಗಳ ಬಗ್ಗೆ ಚರ್ಚಿಸುವಾಗ ಪೊಲೀ ಸರು ಹಾಗೂ ರಾಜಕಾರಣ ಗಳ ವೈಫ ಲ್ಯವೇ ಇದಕ್ಕೆಲ್ಲಾ ಕಾರಣ ಎಂದು ಪ್ರತಿ ಕ್ರಿಯಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರ ಕಾರ್ಯವನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಬದಲಾವಣೆಯ ಮಹತ್ವದ ಹೆಜ್ಜೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.