ಸಂತೇಮರಹಳ್ಳಿ: ಸಂತೇಮರ ಹಳ್ಳಿ ಭಾಗದ ಹಲವು ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಗುದ್ದಲಿ ಪೂಜೆ ನೆರವೇರಿಸಿದರು.
ಸಮೀಪದ ಕೆಂಪನಪುರ ಗ್ರಾಮದ ಎಸ್.ಸಿ ಬಡಾವಣೆಯಲ್ಲಿ 15 ಲಕ್ಷದ ರೂ. ವೆಚ್ಚ ದಲ್ಲಿ ಕಾಂಕ್ರಿಟ್ ಮತ್ತು ಚರಂಡಿ ಕಾಮಗಾ ರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಬಜೆಟ್ ಹತ್ತಿರವಿರುವುದರಿಂದ ತುರ್ತಾಗಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುತ್ತಿದ್ದು, ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಶೀಘ್ರವಾಗಿ ಕಾಮಗಾರಿ ಪೂರ್ಣ ಗೊಳಿ ಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮುಂದಿನ ಬಜೆಟ್‍ನಲ್ಲಿ ಇಪ್ಪತ್ತು ಕೋಟಿ ರೂ.ಗೂ ಹೆಚ್ಚು ಹಣವನ್ನು ಈ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆ ಮಾಡುವಂತೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದು, ನನ್ನ ಅವಧಿಯೊಳಗೆ ಕೊಳ್ಳೇಗಾಲವನ್ನು ಮಾದರಿ ಕ್ಷೇತ್ರ ಮಾಡಬೇಕೆಂಬುದೇ ನನ್ನ ಆಸೆ ಯಾಗಿದೆ. ಹಾಗಾಗಿ ಗ್ರಾಮಸ್ಥರು ಯಾವುದೇ ಅಡ್ಡಿ-ಆತಂಕಗಳಿಲ್ಲದೆ, ಅಧಿಕಾರಿಗಳ ಜೊತೆ ಚರ್ಚಿಸಿ ಕಾಮಗಾರಿಗಳನ್ನು ಗ್ರಾಮಕ್ಕೆ ಅನುಕೂಲವಾಗುವಂತೆ ಮಾಡಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ವೇಳೆ ಕಾವುದವಾಡಿ, ಕಮರ ವಾಡಿ, ಉಮ್ಮತ್ತೂರು, ಹೆಗ್ಗವಾಡಿ, ಗ್ರಾಮ ಗಳಲ್ಲಿ ಎಸ್‍ಇಪಿ, ಟಿಎಸ್‍ಪಿಯಡಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಗುರುಸಿದ್ದಪ್ಪ, ಕೆ.ಎಂ.ನಾಗ ರಾಜು, ಚನ್ನಬಸವಯ್ಯ, ಬಾಗಳಿ ರೇವಣ್ಣ, ಜಯಶಂಕರ್, ಸೋಮಣ್ಣ, ನಾಗಶಂಕರ್, ಕಮರವಾಡಿ ಶಂಕರಪ್ಪ, ಬಸವಟ್ಟಿ ಮಲ್ಲೇಶಪ್ಪ, ಕಾವುದವಾಡಿ ಮಹದೇವಸ್ವಾಮಿ ಗ್ರಾಪಂ ಸದಸ್ಯರಾದ ಗುರುಪ್ರಸಾದ್ ಮತ್ತಿತರರಿದ್ದರು.