ಪೂರ್ಣಪ್ರಜ್ಞಾ ಶಾಲೆ ವಾರ್ಷಿಕೋತ್ಸವ ಹಿರಿಯ ಸಾಧಕರಿಗೆ ಸನ್ಮಾನ

ಮೈಸೂರು, ಜ.13(ಎಸ್‍ಪಿಎನ್)-ಎಲ್ಲರಿಗೂ ವಿದ್ಯೆ ಕಲಿಸುವುದು ಸರ್ಕಾರದ ಆದ್ಯ ಕರ್ತವ್ಯ. ಇದಕ್ಕೆ ಪೂರಕವಾಗಿ ಪೂರ್ಣಪ್ರಜ್ಞ ಶಾಲೆಯ ಆಡಳಿತ ಮಂಡಳಿ ಸಹಕರಿ ಸುತ್ತಿರುವುದು ಉತ್ತಮ ಕಾರ್ಯ ಎಂದು ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಪಟ್ಟರು.

ಕುವೆಂಪುನಗರ ಆದಿಚುಂಚನಗಿರಿ ರಸ್ತೆಯಲ್ಲಿ ವೀಣೆ ಶೇಷಣ್ಣ ಭವನದಲ್ಲಿ ನಾಗರಿಕರ ವೇದಿಕೆಯ ಪೂರ್ಣಪ್ರಜ್ಞಾ ವಿದ್ಯಾಕೇಂದ್ರದ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಯಾವೊಬ್ಬ ವಿದ್ಯಾರ್ಥಿಯೂ ವಿದ್ಯೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಇದರ ಜೊತೆಗೆ ನಾಗರಿಕರ ಸಹಕಾರದೊಂದಿಗೆ ವಿದ್ಯಾ ಕೇಂದ್ರಗಳನ್ನು ತೆರೆದು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಅದರಲ್ಲಿ ಪೂರ್ಣಪ್ರಜ್ಞ ವಿದ್ಯಾಕೇಂದ್ರದ ಕೊಡುಗೆ ಸೇರಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಹೆಚ್.ಎನ್.ಶ್ರೀನಿ ವಾಸ ಮೂರ್ತಿ, ಎಸ್.ಕೃಷ್ಣ, ಹೊಂಗಪ್ಪ, ಬಿ.ಎಸ್.ಸಿದ್ದೇಗೌಡ, ಬಿ.ನಾಗರಾಜು, ಡಾ.ಪಿ.ಮುರಾರಿ, ಡಿ.ಎಸ್.ಜಯಪ್ಪಗೌಡ, ಪಾಪಮ್ಮ, ಮಾದಪ್ಪ, ಕೆ.ಚಿಕ್ಕವೀರಯ್ಯ ಅವರನ್ನು ಸನ್ಮಾನಿಸು ತ್ತಿರುವುದು ಉತ್ತಮ ಕಾರ್ಯ. ನಾಗರಿಕ ವೇದಿಕೆಯ ಸದಸ್ಯರು ಮತ್ತಷ್ಟು ಸಮಾಜ ಸೇವೆಗೆ ಮುಂದಾಗಿ, ಒಳ್ಳೆಯ ಕೆಲ ಮಾಡಲಿ ಎಂದರಲ್ಲದೆ, ಪೂರ್ಣಪ್ರಜ್ಷ ವಿದ್ಯಾಸಂಸ್ಥೆ ಬೆಳವಣಿಗೆ ನನ್ನ ಸಹಕಾರವೂ ದೊರಕಲಿದೆ ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ಹಿರಿಯ ಕ್ರೀಡಾಪಟು ವಿಜಯ ರಮೇಶ್, ನಾಗರಿಕ ವೇದಿಕೆಯ ಗೌರವಾಧ್ಯಕ್ಷ ಜಿ.ಕೆ.ವರದಪ್ಪ, ಅಧ್ಯಕ್ಷ ಪಿ.ರಮೇಶ್, ಶಾಲಾ ಸಮಿತಿ ಅಧ್ಯಕ್ಷ ಜೆ.ಲೋಕೇಶ್, ಕಾರ್ಯದರ್ಶಿ ಕುಳ್ಳೇಗೌಡ, ಎಸ್.ಪಿ.ತ್ಯಾಗರಾಜ್, ಕೆ.ಆರ್.ಶ್ರೀರಂಗಯ್ಯ, ಬಿ.ಪಿ.ಪುಟ್ಟಸ್ವಾಮಿ, ಹೆಚ್.ಕೆ.ಅಪ್ಪಾಜಿಗೌಡ, ಹೆಚ್.ಅರವಿಂದ್, ಎಸ್.ಚಂದ್ರಪ್ಪ, ಜೆ.ರಾಮಣ್ಣ, ಬಿ.ನಾಗರಾಜ್ ಉಪಸ್ಥಿತರಿದ್ದರು. ಈ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.