ಮೈಸೂರು-ಕೊಡಗು ಕ್ಷೇತ್ರ ಕಾಂಗ್ರೆಸ್ ಪಡೆಯಲು ಆಗ್ರಹಿಸಿ ಅಂಚೆ ಚಳವಳಿ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟು, ಹಿಂದು ಳಿದ ವಗರ್À ಅಥವಾ ದಲಿತ ಸಮು ದಾಯದ ಸಮರ್ಥ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಅಹಿಂದ ಸಂಘಟನೆಗಳ ಒಕ್ಕೂ ಟದ ಕಾರ್ಯಕರ್ತರು ಅಂಚೆ ಚಳವಳಿ ನಡೆಸಿದರು.

ಮೈಸೂರಿನ ಪ್ರಧಾನ ಅಂಚೆ ಕಛೇರಿ ಬಳಿ ಅಂಚೆ ಚಳವಳಿ ನಡೆಸಿದ ಕಾರ್ಯಕರ್ತರು, ಮಹಾ ನಿರ್ಣಾಯಕ ವಾದ 2019ರ ಲೋಕಸಭಾ ಚುನಾವಣೆ ಯಲ್ಲೂ ಕೋಮುವಾದಿ ಶಕ್ತಿಗಳನ್ನು ದಮನ ಮಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಪP್ಷÀ ಗಳು ಮೈತ್ರಿ ಮಾಡಿಕೊಂಡಿರುವುದು ಸಂತ ಸದ ಸಂಗತಿ. ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪP್ಷÀವೇ ಉಳಿಸಿ ಕೊಂಡು ಕಾಂಗ್ರೆಸ್ ಪP್ಷÀದಿಂದ ಓರ್ವ ಸಮರ್ಥ ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಸೇರಿದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇ ಕೆಂದು ಎಐಸಿಸಿ ಅಧ್ಯP್ಷÀ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇ ಗೌಡರಿಗೆ ಅಂಚೆ ಪತ್ರದ ಮೂಲಕ ಒತ್ತಾ ಯಿಸಿದರು. ಈ ಸಂದರ್ಭದಲ್ಲಿ ಕರ್ನಾ ಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಪದಾ ಧಿಕಾರಿಗಳಾದ ಜಾಕೀರ್ ಹುನೇಸ್, ಕಾಡನ ಹಳ್ಳಿ ಸ್ವಾಮಿ, ಚಂದ್ರಶೇಖರ್, ಪ್ರಸನ್ನ, ಪ್ರಭು ಲಿಂಗಸ್ವಾಮಿ, ಮಹೇಶ್ ಪಾಲ್ಗೊಂಡಿದ್ದರು.