ಪರೀಕ್ಷೆ ಮುಂದೂಡಿಕೆ

ಮೈಸೂರು: ಕಾರಾಗೃಹ ಇಲಾಖೆಯಲ್ಲಿನ ಜೈಲರ್ ಮತ್ತು ವಾರ್ಡರ್ ಹುದ್ದೆಗಳ ನೇಮಕಾತಿ ಪಕ್ರಿಯೆಗೆ ರಾಜ್ಯದ ವಿವಿಧ ನಗರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮೇ 19ರಂದು ಲಿಖಿತ ಪರೀಕ್ಷೆ ನಡೆಸಲು ತೀರ್ಮಾನಿಸ ಲಾಗಿತ್ತು. ಕಾರಣಾಂತರಗಳಿಂದ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಮುಂದಿನ ಲಿಖಿತ ಪರೀಕ್ಷಾ ದಿನಾಂಕ ವನ್ನು ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.