ವಿದ್ಯುತ್ ಅವಘಡ: ಎರಡು ಮನೆ ಭಸ್ಮ

ಹನೂರು: ಆಕಸ್ಮಿಕ ವಿದ್ಯುತ್ ಅವಘಡದಿಂದ ತಡರಾತ್ರಿ ಎರಡು ಮನೆಗಳು ಭಸ್ಮವಾಗಿರುವ ಘಟನೆ ಸಮೀಪದ ದಿನ್ನಳ್ಳಿ ಗ್ರಾಮದಲ್ಲಿ ನಡೆದಿದ್ದು, ಸದ್ಯ ಯಾವುದೇ ಪ್ರಾಣಾಪಾಯದಿಂದ ಸಂಭವಿಸಿಲ್ಲ.

ಗ್ರಾಮದ ಮುಸ್ಲಿಂ ಬಡಾವಣೆಯ ಅಬ್ದುಲ್‍ಮುನಾಫ್, ಅಬ್ದುಲ್ ರಿಯಾಜ್ ಅವರ 2 ಮನೆಗಳು ವಿದ್ಯುತ್ ಅವಘಡದಿಂದ ಸಂಭವಿಸಿದ ಆಕಸ್ಮಿಕ ಬೆಂಕಿಗೆ ಭಸÀ್ಮವಾಗಿದೆ. ಘಟನೆಯಿಂದ ಎಚ್ಚೆತ್ತ ಎರಡೂ ಕುಟುಂಬಗಳ ಸದಸ್ಯರೂ ಹೊರಗೆ ಬಂದಿದ್ದರಿಂದ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಹಂಚಿನ ಮನೆಯಾದ ಕಾರಣ ಮನೆಯಲ್ಲಿದ್ದ ಬಟ್ಟೆ, ದಿನಸಿ, ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.

ಪರಿಹಾರಕ್ಕೆ ಒತ್ತಾಯ: ಬಡಕುಟುಂಬಗಳು ಬೆಂಕಿ ಅವಘಡದಿಂದ ಮನೆಗಳು ಕಳೆದುಕೊಂಡು ನಷ್ಟ ಅನುಭವಿಸಿದ್ದು, ಕುಟುಂಬಗಳಿಗೆ ಜಿಲ್ಲಾಡಳಿತ ಹಾಗೂ ಸಂಬಂಧಿಸಿದವರು ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ತಾಪಂ ಅಧ್ಯಕ್ಷ ರಾಜೇಂದ್ರ ಭೇಟಿ ನೀಡಿ ಪರಿ ಶೀಲಿಸಿದ್ದು, ಈ ಘಟನೆಯ ಬಗ್ಗೆ ಶಾಸಕರ ಗಮನಕ್ಕೆ ತಂದು ಜಿಪಂ, ತಾಪಂ ಹಾಗೂ ಗ್ರಾಪಂನಿಂದ ಸಿಗುವ ಸವಲತ್ತನ್ನು ಬೆಂಕಿ ಅವಘಡದಿಂದ ಬೀಧಿ ಪಾಲಾಗಿರುವ ಕುಟುಂಬಗಳಿಗೆ ನೆರವು ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಹನೂರು ವಿಶೇಷ ತಹಶೀಲ್ದಾರ್ ಶಿವರಾಮ್ ಭೇಟಿ ನೀಡಿ, ಮಾಹಿತಿ ಪಡೆದರು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.