ವಿದ್ಯುತ್ ಸ್ಪರ್ಶ: ಮೂವರ ಸಾವು ತೆಂಗಿನಕಾಯಿ ಕೀಳುವಾಗ ದುರಂತ

ಗೋಣಿಕೊಪ್ಪಲು:ತೋಟದಲ್ಲಿ ತೆಂಗಿನಕಾಯಿ ಕೊಯ್ಲು ಮಾಡುತ್ತಿದ್ದ ಸಂದರ್ಭ ವಿದ್ಯುತ್ ತಂತಿ ಮೇಲೆ ಕಬ್ಬಿಣದ ಏಣಿ ಜಾರಿ ಬಿದ್ದು ಮೂವರು ಸಾವನಪ್ಪಿರುವ ಘಟನೆ ಅರ್ವತೋಕ್ಲು ಗ್ರಾಮದಲ್ಲಿ ನಡೆದಿದೆ.

ಕಾವಡಿ ಗ್ರಾಮದ ಇಗ್ಗುಡ ಸತೀಶ್ (50), ಇಗ್ಗುಡ ರವಿ (45) ಹಾಗೂ ಮೊಟ್ಟೇರ ಧರ್ಮಜ (50) ಮೃತಪಟ್ಟವರು. ರಾಮಜನ್ಮ ಎಂಬುವರ ತೋಟದಲ್ಲಿ ತೆಂಗಿನ ಕಾಯಿ ಕೊಯ್ಲು ಮಾಡುತ್ತಿದ್ದಾಗ ಆಕಸ್ಮಿಕವಾಗಿ ಏಣಿ ಜಾರಿ ಈ ದುರ್ಘಟನೆ ನಡೆದಿದೆ. ಮೂವರ ದೇಹಗಳು ಸಂಪೂರ್ಣ ವಾಗಿ ಕರಕಲಾಗಿವೆ. ಸ್ಥಳಕ್ಕೆ ಡಿವೈಎಸ್ಪಿ ನಾಗಪ್ಪ, ಸೆಸ್ಕ್ ಎಇಇ ಅಂಕಯ್ಯ, ಜೆಇ ಕೃಷ್ಣ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭಾನುವಾರ ಸಾಯಂಕಾಲ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಾತ್ರಿ ಮನೆಗೆ ಬಾರದ ಕಾರಣ ಕುಟುಂಬಸ್ಥರು ಸೋಮವಾರ ಬಂದು ತೋಟದಲ್ಲಿ ನೋಡು ವಾಗ ವಿಚಾರ ಅರಿವಾಗಿದೆ. ಸಾವಿಗೀಡಾದ ಸತೀಶ್ ಅವರು ರಾಮಜನ್ಮ ಎಂಬುವರ ತೋಟದಲ್ಲಿ ರೈಟರ್ ಅಗಿ ಕೆಲಸ ಮಾಡು ತ್ತಿದ್ದರು. ಧರ್ಮಜ ಚಾಲಕರಾಗಿ ದುಡಿಯು ತ್ತಿದ್ದರು. ಸತೀಶ್ ಅವರ ಸಹೋದರ ರವಿ ಅವರು ಇವರೊಂದಿಗೆ ತೋಟಕ್ಕೆ ಬಂದಿದ್ದರೆನ್ನಲಾಗಿದೆ.

ತೋಟದಲ್ಲಿ ತೆಂಗಿನ ಕಾಯಿ ಕೊಯ್ಲು ಮಾಡುತ್ತಿದ್ದಾಗ ಮರದ ಹತ್ತಿರದಲ್ಲಿ ಹಾದು ಹೋಗಿದ್ದ 11 ಕೆ.ವಿ. ವಿದ್ಯುತ್ ತಂತಿ ಮೇಲೆ ಏಣಿ ಬಿದ್ದು ಅನಾಹುತ ನಡೆದಿದೆ. ಏಣಿಯ ಬುಡದಲ್ಲಿಯೇ ಮೂವರ ಶವ ಕರಕಲಾಗಿದೆ. ಇದರಿಂದಾಗಿ ಏರುವ ಸಂದರ್ಭವೇ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಒಬ್ಬ ಏಣಿ ಏರುವಾಗ ಇಬ್ಬರು ಏಣಿ ಜಾರದಂತೆ ಹಿಡಿದು ಕೊಂಡಿರಬಹದು. ಆಕಸ್ಮಾತ್ ಏಣಿ ಜಾರು ವಾಗ ಒಬ್ಬರನೊಬ್ಬರು ತಾಗಿದಾಗ ವಿದ್ಯುತ್ ಮೂವರ ಮೇಲೆ ಹರಿದು ಬೆಂದು ಕರಕ ಲಾಗಿದೆ. ಸುತ್ತ ಬೆಂಕಿಯಿಂದ ತೋಟ ದಲ್ಲಿನ ಎಲೆಗಳು ಕೂಡ ಸುಟ್ಟುಹೋಗಿವೆ.

ಸ್ಥಳೀಯರ ಮಾಹಿತಿಯಂತೆ ಸಾಯಂ ಕಾಲ 5 ಗಂಟೆ ಸುಮಾರಿಗೆ ಈ ಮಾರ್ಗ ದಲ್ಲಿ ಒಮ್ಮೆ ವಿದ್ಯುತ್ ಕಡಿತಗೊಂಡಿದೆ. ತಂತಿಗೆ ಬಡಿದ ಏಣಿ ಮತ್ತೆ ಒಂದು ತಂತಿ ಯಲ್ಲಿ ಮಾತ್ರ ತಾಗಿ ನಿಂತಿತ್ತು. ಇದರಿಂದಾಗಿ ಕಡಿತಗೊಂಡಿದ್ದ ವಿದ್ಯುತ್ ಮತ್ತೆ ಹರಿದಿದೆ. ವಿದ್ಯುತ್ ಕಡಿತಗೊಳ್ಳದ ಕಾರಣ ಸೆಸ್ಕ್ ಸಿಬ್ಬಂದಿ ಕೂಡ ಸಮಸ್ಯೆ ಹುಡುಕುವ ಪ್ರಯತ್ನಕ್ಕೆ ಹೋಗಲಿಲ್ಲ. ಸ್ಥಳದಲ್ಲೇ ಶವಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಯಿತು.