ಮೇ 27ರವರೆಗೆ ವಿದ್ಯುತ್ ವ್ಯತ್ಯಯ

ಮೈಸೂರು: ಎನ್.ಆರ್ ಮೊಹಲ್ಲಾ ವಿಭಾಗದ ವತಿಯಿಂದ ಮೇ 27 ರವರೆಗೆ 220/66/11 ಕೆವಿ ವಾಜಮಂಗಲ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 100 ಒಗಿಂ ಶಕ್ತಿ ಪರಿವರ್ತಕದ ನಿರ್ವಹಣಾ ಕಾಮಗಾರಿಯನ್ನು ಕ.ವಿ.ಪ್ರ.ನಿ.ನಿ. ವತಿಯಿಂದ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ 66/11 ಕೆವಿ ಮೇಗಳಾಪುರ, ವಾಜಮಂಗಲ ಮತ್ತು ಕಡಕೊಳ ವಿದ್ಯುತ್ ವಿತರಣಾ ಕೇಂದ್ರ ಗಳಿಂದ ಸರಬರಾಜಾಗುವ ಪ್ರದೇಶಗಳಲ್ಲಿ ಅನಿಯಮಿತವಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಲಿದ್ದು, ಸಾಧ್ಯವಾದಷ್ಟು ಮಟ್ಟಿಗೆ ನೀರಾವರಿ ಪಂಪ್‍ಸೆಟ್ ಫೀಡರ್‍ಗಳಿಗೆ ರಾತ್ರಿಯ ಪಾಳಿಯಲ್ಲಿ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.