ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲ ಕೇಳಿದ ಪ್ರಕಾಶ್ ರೈ

ಬೆಂಗಳೂರು: 2019ರ ಲೋಕಸಭಾ ಚುನಾಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿ ರುವ ಬಹುಭಾಷಾ ನಟ ಪ್ರಕಾಶ್‍ರೈ, ಬೆಂಗ ಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ತಮ್ಮನ್ನು ಕಾಂಗ್ರೆಸ್ ಬೆಂಬಲಿಸಬಹುದು ಎಂದು ಹೇಳಿದ್ದಾರೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ತಾವು ಸ್ಪರ್ಧಿಸಿದರೆ ಕಾಂಗ್ರೆಸ್‍ಗೆ ಬರುವ ಅಲ್ಪಸಂಖ್ಯಾತರ ಮತಗಳು ವಿಭಜನೆ ಯಾಗುವುದಿಲ್ಲವೇ? ಎಂದು ಪತ್ರಕರ್ತರು ಪ್ರಶ್ನಿಸಿದ್ದದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರೈ, ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗುವುದಾದರೆ ಕಾಂಗ್ರೆಸ್ ನನ್ನನ್ನು ಬೆಂಬಲಿಸಲಿ, ಕಾಂಗ್ರೆಸ್‍ನ ಹೋರಾಟ ಕೋಮುವಾದಿ ಶಕ್ತಿಗಳ ವಿರುದ್ಧವಿದೆ ಎಂದಾದರೆ ನಾನು ಅವರ ಮಹಾಘಟಬಂಧನವನ್ನೂ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

ನಾನು ಹುಟ್ಟಿ ಬೆಳೆದ ಪ್ರದೇಶದಿಂದಲೇ ಚುನಾವಣೆ ಎದುರಿಸುತ್ತಿದ್ದೇನೆ, ಇದು ನಾನು ಪಡೆದಿ ರುವುದನ್ನು ಜನತೆಗೆ ವಾಪಸ್ ನೀಡುವ ಸಮಯ, ಆದ್ದರಿಂದ ಜನರ ಧ್ವನಿಯನ್ನು ಸಂಸತ್‍ನಲ್ಲಿ ಪ್ರತಿನಿಧಿಸಲು ಬಯಸುತ್ತಿ ದ್ದೇನೆ ಎಂದು ಹೇಳಿದ್ದಾರೆ.