ಮೈಸೂರು ಜಿಲ್ಲಾಡಳಿತದ ವತಿಯಿಂದ ಪ್ರಾರ್ಥನಾ ಸಭೆ

ಮೈಸೂರು: ರಾಷ್ಟ್ರ ಪಿತ ಮಹಾತ್ಮ ಗಾಂಧಿ ಜಯಂತಿ ದಿನ ವಾದ ಬುಧವಾರ ಮೈಸೂರಿನ ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ಗಾಂಧೀಜಿ ಯವರನ್ನು ಸ್ಮರಿಸಲಾಯಿತು.

ಪುರಭವನದಲ್ಲಿ ಜಿಲ್ಲಾಡಳಿತ, ಮೈಸೂರು ಮಹಾನಗರಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮೈಸೂರಿನ ಪುರಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿಂದೂ, ಮುಸ್ಲಿಂ, ಬೌದ್ಧ ಧರ್ಮಗುರು ಗಳ ಸಮ್ಮುಖದಲ್ಲಿ ಪ್ರಾರ್ಥನಾ ಸಭೆ ನಡೆಸಲಾಯಿತು. ಭಗವದ್ಗೀತೆ, ಕುರಾನ್, ಬುದ್ಧ ದಮ್ಮ, ಜೈನ ಪ್ರಾರ್ಥನೆಗಳ ತತ್ವಗಳ ಬಗ್ಗೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಗಾಂಧೀಜಿಯವರು ತಿಳಿಸಿ ಕೊಟ್ಟಿರುವ ಸಾಮರಸ್ಯದ ತಾತ್ವಿಕ ಸಿದ್ಧಾಂತವನ್ನು ನಾವೆಲ್ಲರೂ ಅನುಸರಿಸ ಬೇಕಿದೆ. ಅವರ ದಾರಿಯಲ್ಲಿ ನಡೆಯ ಬೇಕಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಾಲಿಕೆಯಿಂದ ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ, ಜಲಶಕ್ತಿ, ಪರಿಸರ, ಹೊಗೆ ರಹಿತ ಅಡುಗೆ ಮನೆ ಇನ್ನಿತರೆ ಅಳವಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸಲು ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ನಗರ ಪಟ್ಟಣ ಪ್ರದೇಶ ಗಳಲ್ಲಿ ಮನೆ ಮನೆಗೆ ಅಂಗೀಕಾರ್ ಆಂದೋ ಲನ್ ಕಾರ್ಯಕ್ರಮಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಿ, ಪ್ರತಿಜ್ಞಾ ವಿಧಿ ಬೋಧಿಸ ಲಾಯಿತು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಮನೆಗಳಿಗೆ ಅಂಗೀ ಕಾರ್ ಸಂಪನ್ಮೂಲ ವ್ಯಕ್ತಿಗಳು ಭೇಟಿ ನೀಡಿ ಮೊಬೈಲ್ ಆ್ಯಪ್ ಮೂಲಕ ಫಲಾನುಭವಿ ಗಳ ಅಗತ್ಯತೆಗಳನ್ನು ಗುರುತಿಸಿ ಜಾಗೃತಿ ಮೂಡಿಸಲಾಗುವುದು. ಅಭಿಯಾನವು ಡಿ.10ರಂದು ಮುಕ್ತಾಯಗೊಳ್ಳಲಿದ್ದು, ಇದರ ಯಶಸ್ಸಿಗೆ ಸಾರ್ವಜನಿಕರು ಕೈಜೋಡಿ ಸುವಂತೆ ನಗರಪಾಲಿಕೆ ಸಹಾಯಕ ಆಯುಕ್ತ ಶಿವಾನಂದಮೂರ್ತಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ತನ್ವೀರ್ ಸೇಠ್, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶÀಕ ಆರ್. ರಾಜು, ಮುಸ್ಲಿಂ ಧರ್ಮಗುರು ಸರ್ಖಾಜಿ ಮಹಮ್ಮದ್ ಉಸ್ಮಾನ್ ಷರೀಫ್, ಬೌದ್ಧ ಧರ್ಮದ ಬಂತೇ ಕಲ್ಯಾಣ ಸಿರಿ ಸ್ವಾಮೀಜಿ, ಜೈನ ಧರ್ಮದ ಸುರೇಶ್‍ಕುಮಾರ್ ಜೈನ್ ಇನ್ನಿತರರು ಉಪಸ್ಥಿತರಿದ್ದರು.