‘ಶತಮಾನದ ಸಂತ’ ಶಿವಕುಮಾರ ಸ್ವಾಮೀಜಿಗೆ ನುಡಿ ನಮನ

ಬೇಲೂರು: ಕಾಯಕಯೋಗಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ಖ್ಯಾತಿ ಪಡೆದಿರುವ ಸಿದ್ಧಗಂಗಾ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ಹಿನ್ನೆಲೆ ಯಲ್ಲಿ ಕೆಂಪೇಗೌಡ ವೃತ್ತದಲ್ಲಿ ಒಕ್ಕಲಿಗರ ಯುವ ವೇದಿಕೆಯಿಂದ ಪೂಜ್ಯರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಮೇಣದ ಬತ್ತಿ ಹಚ್ಚುವ ಮೂಲಕ ಅಂತಿಮ ನಮನ ಸಲ್ಲಿಸಲಾಯಿತು.

ವೇದಿಕೆಯ ಅಧ್ಯಕ್ಷ ಪೃಥ್ವಿ ಮಾತನಾಡಿ, 12ನೇ ಶತಮಾನದಲ್ಲಿ ವಿಶ್ವ ಗುರು ಬಸ ವಣ್ಣನವರ ನಿಜರೂಪವೇ ಆದ ಶಿವ ಕುಮಾರ ಸ್ವಾಮೀಜಿ ಸಮಾಜಕ್ಕೆ ಮಾರ್ಗ ದರ್ಶಕರು. ಜಾತಿ, ಧರ್ಮ ಭೇದವಿಲ್ಲದೆ ಅವರು ಸಾವಿರಾರು ಮಕ್ಕಳಿಗೆ ಊಟ, ವಸತಿ, ಶಿಕ್ಷಣ ನೀಡಿ ತ್ರಿವಿಧ ದಾಸೋಹಿ ಯಾಗಿದ್ದಾರೆ. ಇಂತಹ ಮಹಾನ್ ಚೇತನ ಲಿಂಗೈಕ್ಯರಾಗಿರುವುದು ನೋವು ತಂದಿದೆ. ಪೂಜ್ಯರು 111 ವರ್ಷ ಅವಿರತ ಹೋರಾ ಟದ ಬದುಕು ನಮಗೆ ದಾರಿದೀಪವಾಗ ಬೇಕು. ಅವರ ಆದರ್ಶಗಳನ್ನು ನಾವುಗಳು ಅಳವಡಿಸಿಕೊಳ್ಳುವ ಮೂಲಕ ಪೂಜ್ಯರ ಆತ್ಮಕ್ಕೆ ಶಾಂತಿ ತರಬೇಕು ಎಂದು ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ವಿ.ಎಸ್.ಬೋಜೇಗೌಡ ಮಾತನಾಡಿ, ಪ್ರತಿ ವರ್ಷ ಸಿದ್ಧಗಂಗೆಯಲ್ಲಿ ಸುಮಾರು 12 ಸಾವಿರ ಮಕ್ಕಳಿಗೆ ವಸತಿ ದಾಸೋಹ ನೀಡಿ, ಅವರನ್ನು ಸಮಾಜ ದಲ್ಲಿ ಉತ್ತಮ ಪ್ರಜೆ ಮಾಡಲು ಪೂಜ್ಯರು ಪಟ್ಟ ಕಷ್ಟ ನಿಜಕ್ಕೂ ಮಾದರಿಯಾಗಿದೆ. ಶ್ರೀಗಳಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಲಾಯಿತು. ವೇದಿಕೆ ಗೌರವಾಧ್ಯಕ್ಷರಾದ ಮಾರುತಿ ಚಂದ್ರು, ಯುವರಾಜ್(ಗಿರೀಶ) ಸತೀಶ್, ಖಾದರ್, ಜಯಪ್ರಕಾಶ್, ಮಂಜುನಾಥ್, ಜಯರಾಂ, ರಿಜ್ವಾನ್, ಜಗದೀಶ್, ದಿನೇಶ್, ರವಿ ಕುಮಾರ್, ಪುಟ್ಟಸ್ವಾಮಿಗೌಡ, ವೇದಬ್ರಹ್ಮ ಮಂಜುನಾಥ್, ನಾಗಭೂಷಣ್, ಯಶವಂತ್ ಹಾಜರಿದ್ದರು.