ಅಂತಾರಾಷ್ಟ್ರೀಯ ಯೋಗ ಸಮ್ಮೇಳನದ ಪೂರ್ವಭಾವಿಯಾಗಿ ಯೋಗಾಭ್ಯಾಸ

ಮೈಸೂರು, ನ.14(ಆರ್‍ಕೆಬಿ)- `ಹೃದ ಯದ ಆರೈಕೆಗಾಗಿ ಯೋಗ’ ವಿಷಯ ಕುರಿತು ನ.15ರಿಂದ ಎರಡು ದಿನಗಳ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದ ಪೂರ್ವಭಾವಿಯಾಗಿ ಮೈಸೂರು ಅರ ಮನೆ ಅಂಗಳದಲ್ಲಿ ಗುರುವಾರ ಯೋಗಾ ಭ್ಯಾಸ ಕಾರ್ಯಕ್ರಮ ನಡೆಯಿತು.

ನವದೆಹಲಿಯ ಮುರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಯೋಗದ 100 ಮಂದಿ ಸೇರಿದಂತೆ ಒಟ್ಟು 1800 ಮಂದಿ ಯೋಗಪಟುಗಳು ಪೂರ್ವಭಾವಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಅಂತಾರಾಷ್ಟ್ರೀಯ ಯೋಗ ಶಿಷ್ಟಾ ಚಾರದ ಪ್ರಕಾರ ಪ್ರಾರ್ಥನೆ, ಚಾಲನಾ ಕ್ರಿಯೆ, ಕುಳಿತು ಮಾಡುವ ಆಸನಗಳು, ನಿಂತು ಮಾಡುವ ಆಸನಗಳು, ಧ್ಯಾನ, ಪ್ರಾಣಾಯಾಮ, ಶಾಂತಿಮಂತ್ರ, ಶವಾ ಸನದ ಮೂಲಕ ಹೃದಯ ಆರೋಗ್ಯಕ್ಕಾಗಿ ಮಾಡಬಹುದಾದ ಯೋಗ ಪ್ರದರ್ಶನ ನಡೆಯಿತು. ವಿವಿಧ ಯೋಗ ಕೇಂದ್ರಗಳ ಮುಖ್ಯಸ್ಥರಾದ ಮಾರುತಿ, ಶಶಿಕುಮಾರ್, ಗಣೇಶ್ ಪ್ರಸಾದ್, ಡಾ.ಮೂರ್ತಿ, ಡಾ. ಗಜಾನನ ಹೆಗಡೆ, ಡಾ.ಗೋಪಿನಾಥ್ ಮೊದಲಾದವರು ಯೋಗಾಭ್ಯಾಸ ನೆರ ವೇರಿಸಿಕೊಟ್ಟರು.

ಇದಕ್ಕೂ ಮುನ್ನ ಮೇಯರ್ ಪುಷ್ಪ ಲತಾ ಜಗನ್ನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ, ಆಯುಷ್ ಇಲಾಖೆ ಸಚಿವಾಲಯದ ನಿರ್ದೇಶಕ ವಿಕ್ರಂ ಸಿಂಗ್, ಆಯುಷ್ ಇಲಾಖೆಯ ಡಾ.ರಾಜೇಶ್ ಕಟೋಚ, ನವದೆಹಲಿ ಮುರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಯೋಗ ನಿರ್ದೇಶಕ ಡಾ.ಬಸವರೆಡ್ಡಿ, ಆಯುಷ್ ಇಲಾಖೆಯ ಉಪ ನಿರ್ದೇಶಕ ಡಾ.ನಾಗರಾಜ್, ಜಂಟಿ ನಿರ್ದೇಶಕ ಡಾ.ಪ್ರಕಾಶ್, ಮೈಸೂರು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.