ಇಂದು ಹುಬ್ಬಳ್ಳಿಯಲ್ಲಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ಬೆಂಗಳೂರು: ಆಪರೇಷನ್ ಕಮಲದ ಮೂಲಕ ಬಿ.ಎಸ್.ಯಡಿ ಯೂರಪ್ಪ ಮುಖ್ಯಮಂತ್ರಿಯಾಗಲು ನಿರಂತರ ಪ್ರಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ಇದ್ಯಾವುದೂ ನಮಗೆ ತಿಳಿಯದೆನ್ನುವಂತೆ ಬಿಜೆಪಿ ವರಿಷ್ಠರು ಮುಂಬ ರುವ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣಾ ಪ್ರಚಾರವನ್ನು ಮುಂಬೈ ಕರ್ನಾ ಟಕ ಭಾಗದ ಹುಬ್ಬಳ್ಳಿಯಲ್ಲಿ ನಾಳೆ ಆರಂಭಿಸುತ್ತಿದ್ದು, ಇದಲ್ಲದೆ ಇನ್ನು ಎರಡು ಕೇಂದ್ರಗಳಲ್ಲಿ ಇದೇ ತಿಂಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡುತ್ತಾರೆ. ಮತ್ತೊಂದೆಡೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯದ ಪ್ರಮುಖ ಮುಖಂಡರೊಟ್ಟಿಗೆ ಕಳೆದ ಮೂರು ದಿನಗಳ ಹಿಂದೆ ವಿಡಿಯೋ ಕಾನ್ಫರೆನ್ಸ್ ಮಾಡಿ ಚುನಾವಣಾ ಸಿದ್ಧತೆ ಬಗ್ಗೆ ಮಾಹಿತಿ ಪಡೆದಿರುವು ದಲ್ಲದೆ, ಕೆಲವು ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಷ್ಟ್ರದ ನಮ್ಮ ಬಹುತೇಕ ರಾಜ್ಯ ಘಟಕಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದರೆ, ನೀವು ಮಾತ್ರ ಸರ್ಕಾರ ರಚಿಸುವುದರಲ್ಲೇ ಕಾರ್ಯಮಗ್ನರಾಗಿದ್ದೀರಿ. ನಿಮಗೆ ಏನಾಗಿದೆ. ನಮಗೆ ಲೋಕಸಭಾ ಚುನಾವಣೆ ಮುಖ್ಯ. ಇತ್ತ ಗಮನಹರಿಸುತ್ತಿರೋ ಇಲ್ಲವೆ ನಾವೇ ರಂಗ ಪ್ರವೇಶ ಮಾಡಬೇಕೋ ಎಂದು ಕಿಡಿಕಾರಿದ್ದಾರೆ.

ನನಗೆ ಬಂದಿರುವ ಮಾಹಿತಿಯಂತೆ ನೀವು ಇನ್ನೂ ಬೂತ್ ಕಮಿಟಿ ಸಭೆಗಳನ್ನೇ ಮಾಡಿಲ್ಲ. ಚುನಾವಣೆ ಸಮೀಪವಾಗುತ್ತಿದೆ. ಪ್ರತಿ ಕ್ಷೇತ್ರಗಳ ಅರ್ಹ ಅಭ್ಯರ್ಥಿಗಳ ಪಟ್ಟಿಯೂ ನಿಮ್ಮಿಂದ ಸಿದ್ಧಪಡಿಸಲು ಆಗುತ್ತಿಲ್ಲ. ಇದು ನೀವು ಮಾಡುತ್ತಿರುವ ಕೆಲಸವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಇನ್ನು ಎಷ್ಟು ದಿನ ಸರ್ಕಾರ ರಚನೆ ಮಾಡುವ ಕಾರ್ಯದಲ್ಲೇ ಮಗ್ನರಾಗುತ್ತೀರಿ ತಿಳಿಸಿ, ಇಲ್ಲವೆ ಚುನಾವಣೆಗಾಗಿ ಕಾರ್ಯ ಕರ್ತರ ಬಳಿ ತೆರಳಿ, ಅವರನ್ನು ಹುರಿದುಂಬಿಸಿ, ಅವರಿಂದ ಸ್ಥಳೀಯ ಮಾಹಿತಿ ಸಂಗ್ರಹಿಸುವ ಕೆಲಸ ನಡೆಯಲಿ. ಮುಂದಿನ ಸಭೆ ನಡೆಸುವ ವೇಳೆಗೆ ಕರ್ನಾಟಕದ 28 ಲೋಕಸಭಾ ಕ್ಷೇತ್ರದ ಸಂಘಟನೆ ಮಾಹಿತಿ ಪೂರ್ಣ ವಿವರ ಲಭ್ಯವಾಗಬೇಕು. ಇದೇ ತಿಂಗಳು ನಾನು ಮೂರು ದಿನಗಳ ಕಾಲ ಪ್ರವಾಸ ಕೈಗೊಳ್ಳುತ್ತೇನೆ. ಆ ಸಂದರ್ಭದಲ್ಲಿ ಭೇಟಿ ಮಾಡೋಣ, ನೀವು ಎಲ್ಲಾ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಅಮಿತ್ ಷಾ ಇದೇ ಮಾತುಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೂ ತಂದಿದ್ದಾರೆ, ಆದರೆ ಅವರು ತಮ್ಮ ಛಲದಲ್ಲೇ ಸರ್ಕಾರ ರಚಿಸಿಯೇ ತಿರುತ್ತೇವೆ. ಇದರಿಂದ ನಮಗೆ ಹೆಚ್ಚು ಸ್ಥಾನ ಲಭ್ಯವಾಗುತ್ತವೆ ಎಂದು ಹೇಳಿಕೊಂಡಿದ್ದಾರೆ.

ಇದೀಗ ನಾಳೆ ಮೋದಿ ಮತ್ತೆ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ಸಂಸದರು, ರಾಜ್ಯ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.