ಪ್ರೊ. ಲಿಂಗರಾಜ ಗಾಂಧಿ ಮೈಸೂರು ವಿವಿ ನೂತನ ಕುಲಸಚಿವ

ಪರೀಕ್ಷಾಂಗ ಕುಲಸಚಿವರಾಗಿ ಡಾ. ಕೆ.ಎಂ.ಮಹದೇವನ್
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರನ್ನಾಗಿ ಬೆಂಗ ಳೂರು ಕೇಂದ್ರ ವಿಶ್ವವಿದ್ಯಾನಿಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಲಿಂಗರಾಜ ಗಾಂಧಿ ಅವರನ್ನು ನೇಮಿಸಲಾಗಿದೆ. ಪರೀಕ್ಷಾಂಗ ಕುಲಸಚಿವರನ್ನಾಗಿ ಕಡೂರಿನಲ್ಲಿರುವ ಕುವೆಂಪು ವಿವಿ ಪಿ.ಜಿ. ಸೆಂಟರ್ ನಿರ್ದೇಶಕ ಡಾ.ಕೆ.ಎಂ.ಮಹದೇವನ್ ಅವರನ್ನು ನೇಮಿಸಿ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎನ್.ವೀರಬ್ರಹ್ಮಚಾರಿ ಇಂದು ಅಧಿಸೂಚನೆ ಹೊರಡಿಸಿದ್ದಾರೆ. ಈವರೆಗೆ ಮೈಸೂರು ವಿವಿಯಲ್ಲಿ ಕುಲಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಆರ್.ರಾಜಣ್ಣ ಹಾಗೂ ಪರೀಕ್ಷಾಂಗ ಕುಲ ಸಚಿವ ಪ್ರೊ.ಜೆ.ಸೋಮಶೇಖರ್ ಅವರನ್ನು ವಿಶ್ವವಿದ್ಯಾನಿಲ ಯದ ಮಾತೃ ಸ್ಥಾನಗಳಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರದಿ ಮಾಡಿ ಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಪ್ರೊ.ಲಿಂಗರಾಜ ಗಾಂಧಿ ಅವರು ಈ ಹಿಂದೆ ಮೈಸೂರು ವಿವಿ ಸಿಡಿಸಿ ನಿರ್ದೇಶಕರಾಗಿ ಅಕಾ ಡೆಮಿ ಸ್ಟಾಫ್ ಕಾಲೇಜು ನಿರ್ದೇ ಶಕರಾಗಿ ಹಾಗೂ ಪಿಎಂಇ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.