ಮೈಸೂರು,ಆ.1(ಆರ್‍ಕೆಬಿ)- ಮಾನವ, ಭೂಮಿ, ಜಲ, ಪಶು ಹೀಗೆ ಸ್ಥಳೀಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಾಗ ಮಾತ್ರ ಬಡತನ ನಿರ್ಮೂಲನೆಯಾಗಿ ಅಭಿವೃದ್ಧಿ ಸಾಧ್ಯ ವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಇಂದಿಲ್ಲಿ ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಿಗೆ ಮೈಸೂ ರಿನ ಜೆ.ಪಿ.ನಗರದ ರಾಹುಲ್ ಕನ್ವೆನ್ಷನ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ `ಪ್ರಗತಿ ಚಿಂತನಾ’ ಸಭೆಗೆ ಚಾಲನೆ ನೀಡಿ ಅವರು ಮಾತ ನಾಡಿದರು. ಮನುಷ್ಯನ ಯೋಚನೆಗಳು ಯೋಜನೆಗಳಾಗಿ ಕಾರ್ಯರೂಪಕ್ಕೆ ಬಂದಾಗ ಮಾತ್ರ ಸಮಾಜದಲ್ಲಿ ಸಾಧನೆ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಬಡತನ ಶಾಶ್ವತವಲ್ಲ, ಉಳಿತಾಯ ಬದುಕಿನ ಬವಣೆಯನ್ನು ನೀಗಿಸುತ್ತದೆ. ನಾವು ಪರಿವರ್ತನೆಯಾಗಬೇಕೆಂಬ ಜಾಗೃತಿ ಎಲ್ಲ ರಲ್ಲೂ ಮೂಡಬೇಕು. ಪ್ರಗತಿ ಪ್ರಕೃತಿಯ ಸಹಜ ಕ್ರಿಯೆ. ಹಾಗೆಯೇ ನಮ್ಮಲ್ಲೂ ಬದ ಲಾವಣೆ ಪರಿವರ್ತನೆಗಳು ಅನಿವಾರ್ಯ. ನಾವು ಪರಿವರ್ತನೆ ಅಪೇಕ್ಷಿಸಿದರೆ ಬಡತನ ನಿವಾರಣೆ ಸಾಧ್ಯವಾಗುತ್ತದೆ. ದುಡಿಮೆಯಲ್ಲಿ ಶಿಸ್ತು ಕಾಪಾಡಬೇಕು, ಕೃಷಿ ಮಾಡಿದರೆ ಸಾಲದು, ಶ್ರೇಷ್ಠವಾದ ಫಸಲು ತೆಗೆದು ಒಳ್ಳೆಯ ಮಾರುಕಟ್ಟೆಗೆ ಕೊಡಬೇಕು. ಶ್ರೇಷ್ಠತೆ ಯನ್ನು ಕಾಪಾಡಬೇಕು, ನಾವಿರುವುದು ಹೀಗೆ ಎಂದು ಕೂರದೆ, ಬದಲಾವಣೆ ಬಯಸಿ ಬಡತನ ನಿವಾರಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಜನರ ಬದಲಾವಣೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಅನೇಕ ಯೋಜನೆಗಳನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಯಶಸ್ಸು ಕಾಣ ಬಹುದು. ರಾಜ್ಯದಲ್ಲಿಂದು ಬಡತನ ಬಹ ಳಷ್ಟು ಕಡಿಮೆಯಾಗಿದೆ. ಹಾಗಿದ್ದರೂ ಸೂಕ್ತ ಮಾರ್ಗದರ್ಶನದ ಪರಿವರ್ರ್ತನೆಗೆ ಅವಕಾಶ ಮಾಡಿಕೊಡಬೇಕು ಎಂದರು.
ಬದುಕು, ಕೃಷಿ, ಮಕ್ಕಳ ಶಿಕ್ಷಣ, ಪರಿಸರ ಸಂರಕ್ಷಣೆ, ನೀರಿನ ಸದ್ಬಳಕೆ, ಸ್ವಚ್ಛತೆ ಬಗ್ಗೆ ಯೋಜನೆಯ ಸದಸ್ಯರಲ್ಲಿ ಜಾಗೃತಿ ಮೂಡಿ ಸುವ ಬಗ್ಗೆ ಗಂಭೀರ ಚಿಂತನೆ ಮಾಡ ಬೇಕು. ಕುಟುಂಬಗಳಲ್ಲಿ ದುಶ್ಚಟಗಳಿದ್ದರೆ ದೂರ ಮಾಡಿ, ಗ್ರಾಮೀಣ ಜನರು ಸುಂದರ ಬದುಕು ರೂಪಿಸಿಕೊಳ್ಳಲು ಹೆಚ್ಚಿನ ಗಮನ ಕೊಡಬೇಕು ಎಂದು ಸೇವಾ ಪ್ರತಿನಿಧಿ ಗಳಿಗೆ ಕರೆ ನೀಡಿದರು. ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ, ಪಿ.ಗಂಗಾ ಧರ ರೈ, ಜಿಲ್ಲಾ ನಿರ್ದೇಶಕ ವಿ.ವಿಜಯ ಕುಮಾರ್ ನಾಗನಾಳ, ಎಸ್.ಮೂರ್ತಿ, ಸುಮಿತ್ರ ಎಸ್.ಮೂರ್ತಿ, ಯೋಜನಾ ಧಿಕಾರಿಗಳಾದ ಆನಂದ್. ಕೆ.ಶಶಿಧರ್, ಸಂಜೀವನಾಯ್ಕ, ಯು.ಎಸ್.ಚಂದ್ರ ಶೇಖರ್, ಆನಂದಗೌಡ, ಗಾಯತ್ರಿ, ಯಶೋಧ ಶೆಟ್ಟಿ, ಗಣಪತಿ ಭಟ್, ಸದಾಶಿವ ಕುಲಾಲ್, ಪ್ರೇಮಾನಂದ್, ವಿಶ್ವಾಸ್ ಶೆಟ್ಟಿ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.