ಸಮಾಜಕ್ಕೆ ಪ್ರವಾದಿ ಮಹಮ್ಮದ್‍ರ ಸಂದೇಶ ಅನಿವಾರ್ಯ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಮಂಡ್ಯ, ಡಿ.22(ನಾಗಯ್ಯ)- ಪ್ರಸ್ತುತ ಪ್ರವಾದಿ ಮಹಮ್ಮದ್ ಅವರ ಸಂದೇಶ ಗಳನ್ನು ಸಮಾಜಕ್ಕೆ ತಲುಪಿಸುವÀ ಅನಿವಾರ್ಯ ಇದೆ ಎಂದು ಸುತ್ತೂರು ಮಠದ ಶ್ರೀ ಶಿವ ರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಮುಸ್ಲಿಂ ಒಕ್ಕೂಟದ ವತಿ ಯಿಂದ ಆಯೋಜಿಸಿದ್ದ ಪ್ರವಾದಿ ಮಹ ಮ್ಮದ್ ಕುರಿತಾದ ಸೀರತ್ ಪ್ರವಚನ ಮತ್ತು ಸೌಹಾರ್ದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದಲ್ಲಿ ಎಲ್ಲಾ ಧರ್ಮಗಳನ್ನು ಗೌರವಿಸಲಾಗುವುದು. ಹೀಗಾಗಿ ಧರ್ಮ ದಲ್ಲಿ ನಿಷ್ಠೆ ಇರಬೇಕು. ಪರಧರ್ಮವನ್ನು ಗೌರವಿಸಬೇಕು ಎಂದರು.

ಮಾನವೀಯ ಅಂತಃಕರಣ ಹೊಂದಿದ್ದ ಪ್ರವಾದಿ ಮಹಮ್ಮದ್‍ರು ಪವಿತ್ರವಾದ ಜೀವನ ನಡೆಸಬೇಕು. ಸುಳ್ಳು ಹೇಳಬಾರದು. ಮದ್ಯ ಪಾನ ಮಾಡಬಾರದು. ಹೆಣ್ಣು ಮಕ್ಕಳ ಬಗ್ಗೆ ಗೌರವದಿಂದಿರಬೇಕು ಎಂದು ತಿಳಿಸಿ ದ್ದರು. ಹೀಗಾಗಿ ಪ್ರತಿಯೊಬ್ಬರು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಅಹಂಕಾರವಿದ್ದ ಕಡೆ ಸಮಾಜ ಬೆಳೆಯಲು ಸಾಧ್ಯವಿಲ್ಲ. ಪ್ರತಿಯೊಂದು ಘಟನೆಯೂ ಜೀವ ನಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದರು.

ಶಾಂತಿ ಪ್ರಕಾಶನದ ಮಹಮ್ಮದ್ ಕುಂಞ ಸಾಹೇಬ್ ಮಾತನಾಡಿ, ಸಂದೇಶಗಳಿಂದ ಮಾನವನ ಸುಧಾರಣೆ ಸಾಧ್ಯ. ವೈಜ್ಞಾನಿಕ ವಾಗಿ ಮುಂದುವರಿದ ಜಗತ್ತು ನಮ್ಮದು. ಅಸಾಧ್ಯವಾದುದು ಯಾವುದೂ ಇಲ್ಲ. ಮನುಷ್ಯ ಶೈಕ್ಷಣಿಕ, ಸಾಮಾಜಿಕವಾಗಿ ಬೆಳೆದಿರುವ ಸಮಾಜದಲ್ಲಿ ನಾವಿದ್ದೇವೆ ಎಂದರು.

ಪ್ರಸ್ತುತ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಸಮಾಜ ನೈತಿಕ ಮತ್ತು ಧಾರ್ಮಿಕವಾಗಿ ಅಧಃಪತನ ಕಾಣುತ್ತಿದೆ. ಪ್ರವಾದಿ ಮಹ ಮ್ಮದ್‍ರು ಎಲ್ಲರಿಗೂ ಮಾರ್ಗದರ್ಶನ ಮಾಡಿ ದ್ದರು. ಕೆಡಕು, ಉಗ್ರವಾದ, ಅನೈತಿಕತೆ ಇರು ವಂತಹ ಸಮಾಜದೊಳಗೆ ಅವೆಲ್ಲವೂ ಬದಿಗೆ ಸರಿದು ಒಳ್ಳೆಯ ಸಮಾಜ ನಿರ್ಮಾಣ ವಾಗಬೇಕು ಎಂದು ತಿಳಿಸಿದರು.

ಬೆಂಗಳೂರಿನ ಜಾಮಿಯಾ ಮಸೀದಿಯ ಮೌಲಾನಾ ಮಕ್ಸುದ್ ಇಮ್ರಾನ್ ರಷಾದಿ ಸಾಹೇಬ್, ಸಿಎಸ್‍ಐ ಸಾಡೆ ಸ್ಮಾರಕ ದೇವಾ ಲಯದ ಮುಖ್ಯಸ್ಥ ರೆವರೆಂಡ್ ಎಸ್.ರಾಜ್ ಕುಮಾರ್, ಶಾಸಕ ಎಂ.ಶ್ರೀನಿವಾಸ್, ಡಿಸಿ ಡಾ.ಎಂ.ವಿ.ವೆಂಕಟೇಶ್, ಎಸ್ಪಿ ಪರಶುರಾಮ್, ಜಿಪಂ ಸಿಇಓ ಯಾಲಕ್ಕಿಗೌಡ, ಮುನಾವರ್ ಖಾನ್, ವಕ್ಫ್‍ಬೋರ್ಡ್ ಅಧ್ಯಕ್ಷ ಶೇಖ್ ಉಪೇದುಲ್ಲಾ, ಪಿಎಫ್‍ಐ ಜಿಲ್ಲಾಧ್ಯಕ್ಷ ಎಂ.ಎಸ್.ರಫೀಕ್, ವೈದ್ಯ ಡಾ. ನಂದೀಶ್, ಮುಖಂಡರಾದ ಲಕ್ಷ್ಮಣ್, ಹನೀಫ್, ಶ್ರೀನಿವಾಸ್ ಇನ್ನಿತರರಿದ್ದರು.