ಮೈಸೂರು: ಮೈಸೂರಿನ ರಾಜೀವ್‍ನಗರದ ಆರ್‍ಟಿಓ ಕಚೇರಿಯ ಆವರಣದಲ್ಲಿರುವ ಡ್ರೈವಿಂಗ್ ಟ್ರ್ಯಾಕ್ ಬಳಿ ರಕ್ಷಣೆ ಮಾಡಲಾಗಿದ್ದ, ಬೃಹತ್ ಗಾತ್ರದ ಹೆಬ್ಬಾವನ್ನು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಹುಣಸೂರು ತಾಲೂಕಿನ ಅರಬ್ಬಿತಿಟ್ಟು ಅರಣ್ಯ ಪ್ರದೇಶದ ಕೆರೆಯಲ್ಲಿ ಸುರಕ್ಷಿತವಾಗಿ ಬಿಡಲಾ ಯಿತು. ಶನಿವಾರ ಸಂಜೆ ಮಳೆ ಸುರಿಯುತ್ತಿದ್ದಾಗ ಭಾರೀ ಗಾತ್ರದ ಹೆಬ್ಬಾವು ಆರ್‍ಟಿಓ ಕಚೇರಿಯ ಡ್ರೈವಿಂಗ್ ಟ್ರ್ಯಾಕ್ ಬಳಿ ಹರಿದಾಡುತ್ತಿರುವು ದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕಾಮಿಸಿದ ಉರಗ ತಜ್ಞ ಸ್ನೇಕ್ ಶ್ಯಾಂ ಹೆಬ್ಬಾವನ್ನು ರಕ್ಷಿಸಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದರು. ರಕ್ಷಣೆ ಮಾಡಲಾಗಿದ್ದ ಹೆಬ್ಬಾವನ್ನು ಡಿಸಿಎಫ್ ಪ್ರಶಾಂತ್ ಕುಮಾರ್ ಅವರ ಸಲಹೆ ಮೇರೆಗೆ ರೇಂಜರ್ ಮಂಜುನಾಥ್ ಮತ್ತು ರಾಘವೇಂದ್ರ ಅವರ ಸಮ್ಮುಖದಲ್ಲಿ ಅರಬ್ಬಿತಿಟ್ಟು ಅರಣ್ಯ ಪ್ರದೇಶದಲ್ಲಿ ಸ್ನೇಕ್ ಶ್ಯಾಂ ಅವರೇ ಬಿಟ್ಟು ಬಂದಿದ್ದಾರೆ.