ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಪ್ರತಿಭಟನೆ

ಚಾಮರಾಜನಗರ: ಕಾವೇರಿ ನೀರು ನಿರ್ವಹಣಾ ಮಂಡಳಿಯು ತಮಿಳು ನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ನಗರದಲ್ಲಿ ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನ ವನದ ಆವರಣದಲ್ಲಿ ಜಮಾಯಿಸಿದ ಕರ್ನಾ ಟಕ ಸೇನಾಪಡೆ ಕಾರ್ಯಕರ್ತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇ ಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ, ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ತಮಿಳುನಾಡು ಸರ್ಕಾರ, ಕರ್ನಾಟಕದ ಸಂಸದರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಸೇನಾಪಡೆ ಅಧ್ಯಕ್ಷ ಶ್ರೀನಿವಾಸ ಗೌಡ ಮಾತನಾಡಿ, ದೆಹಲಿಯಲ್ಲಿ ಸೋಮ ವಾರ ನಡೆದ ಕಾವೇರಿ ನೀರು ನಿರ್ವ ಹಣಾ ಮಂಡಳಿಯ ಸಭೆಯಲ್ಲಿ ತಮಿಳು ನಾಡಿಗೆ ಕಾವೇರಿಯಿಂದ ಜುಲೈನಲ್ಲಿ 31 ಟಿಎಂಸಿ ನೀರು ಹರಿಸುವಂತೆ ಆದೇಶ ಮಾಡಿರುವುದು ಖಂಡನೀಯವಾದದ್ದು, ಈ ಸಭೆಯಲ್ಲಿ ಕರ್ನಾಟಕದ ಕೆರೆಕಟ್ಟೆಗಳು, ಕಾಲುವೆಗಳಿಗೆ ನೀರು ತುಂಬಿಸುವ ವಿಚಾರ ಗಳ ಚರ್ಚೆ ಮಾಡಿಲ್ಲ, ರಾಜ್ಯದ ಕುಡಿ ಯುವ ನೀರು, ಕೃಷಿ ಬೆಳೆಗಳ ನೀರಿನ ವಿಚಾ ರವಾಗಿ ಚಕಾರ ಎತ್ತಿಲ್ಲ. ಏಕಾಏಕಿ ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳು ನಾಡಿಗೆ ನೀರು ಬಿಡುವುದಾಗಿ ಆದೇಶ ಮಾಡಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡು ತ್ತಿದೆ ಎಂದು ಆರೋಪಿಸಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ಸದಸ್ಯರು ಸುಮಾರು 6 ಜನರು ತಮಿಳು ನಾಡಿನ ಮೂಲದ ಅಧಿಕಾರಿಗಳಾಗಿದ್ದಾರೆ. ಕರ್ನಾಟಕ ಮುಖ್ಯಮಂತ್ರಿಯೂ ಕೂಡ ಕಾವೇರಿ ನ್ಯಾಯಾಧೀಕರಣ ಅನುಮತಿ ಪಡೆದು ರಾಜ್ಯದಲ್ಲಿರುವ ಜಲಾಶಯಗ ಳನ್ನು ಪರಿಶೀಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರಿಂದ ಮುಖ್ಯಮಂತ್ರಿಗಳು ಹಾಗೂ ಸಚಿವರು ಜಲಾಶಯಗಳ ಸ್ಥಿತಿ ಗತಿಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ರಾಜ್ಯದ ಜನತೆ ಕಾವೇರಿಕೊಳ್ಳದಲ್ಲಿ ನೀರು ಉಳಿಸು ವಂತೆ ಮಾಡಬೇಕಿದೆ ಎಂದು ಒತ್ತಾಯಿಸಿದರು.

ಸೇನಾ ಪಡೆಯ ಗೌರವ ಅಧ್ಯಕ್ಷ ಶಾ.ಮುರಳಿ ಮಾತನಾಡಿ, ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿಯನ್ನು ತಕ್ಷಣವೇ ವಜಾ ಮಾಡಬೇಕು. ರಾಜ್ಯದ ಸಂಸದರು ಪಕ್ಷಬೇಧ ಮರೆತು ಕಾವೇರಿ ನೀರಿನ ವಿಚಾರ ವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗು.ಪುರುಷೋತ್ತಮ, ಪಣ್ಯದಹುಂಡಿರಾಜು, ಮಹೇಶ್‍ಗೌಡ, ಅರುಣ್‍ಕುಮಾರ್ ಗೌಡ, ಡಾ.ಶಿವರುದ್ರ ಸ್ವಾಮಿ, ಚಾ.ಸಿ.ಸಿದ್ದರಾಜು, ಚಾ.ರ.ಕುಮಾರ್, ಟೈಲರ್‍ನಟರಾಜು, ಸಿದ್ದಶೆಟ್ಟಿ, ನಂಜುಂಡ ಸ್ವಾಮಿ ಇತರರು ಭಾಗವಹಿಸಿದ್ದರು.