ಮೈಸೂರು: `ನಮ್ಮ ಭೂಮಿ ನಮಗೆ ವಾಪಸು ನೀಡಿ’ ಎಂದು ಆಗ್ರಹಿಸಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಹಿತರಕ್ಷಣಾ ಸಮಿತಿಯ ಸದಸ್ಯರು ಸೋಮವಾರ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಮೈಸೂರು ಸಹಕಾರ ಸಂಘದ (ಎಂಸಿಪಿ ಸಿಎಸ್) ಆವರಣದಲ್ಲಿರುವ ಸಮಾಪನಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ಮಾಡಿದರು. ಬಳಿಕ ಸಮಾಪನಾಧಿಕಾರಿ ಜೆ.ವಿಕ್ರಮ್‍ರಾಜೇ ಅರಸ್ ಅವರಿಗೆ ಮನವಿ ಸಲ್ಲಿಸಿದರು.
ಮೈಸೂರು, ಕೊಡಗು, ಚಿಕ್ಕಮಗ ಳೂರು, ಹಾಸನದ ಕಾಫಿ ಬೆಳೆಗಾರರಿಗೆ ಸೇರಿದ ಭೂಮಿಯನ್ನು ಹಿಂತಿರುಗಿಸ ಬೇಕು ಎಂಬುದು ಪ್ರತಿಭಟನಾಕಾರ ಕಾಫಿ ಬೆಳೆಗಾರ ರೈತರ ಪ್ರಮುಖ ಬೇಡಿಕೆ.
ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಸದಸ್ಯರ ಹಿತರಕ್ಷಣಾ ಸಮಿತಿಯ ಕಾನೂನು ಸಲಹೆಗಾರ, ಹಿರಿಯ ವಕೀಲ ಕೆ.ಬಿ. ಹೇಮಚಂದ್ರ, ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಎಂಸಿಪಿಸಿಎಸ್‍ನ ಭೂಮಿ ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ ವಿಭಾಗದ ಕಾಫಿ ಬೆಳೆಗಾರರಿಗೆ ಸೇರಿದ್ದು. 1990ರ ದಶಕದಲ್ಲಿ ಕಾಫಿ ಮುಕ್ತ ಮಾರುಕಟ್ಟೆ ಬಂದ ಸಂದರ್ಭ ಮಾರುಕಟ್ಟೆಯಲ್ಲಿ ಸ್ಪರ್ಧಿಸುವಲ್ಲಿ ವಿಫಲ ವಾದ ಸಂಸ್ಥೆ. ಸ್ವಲ್ಪ ಪ್ರಮಾಣದಲ್ಲಿ ಸಾಲ ದಲ್ಲಿ ಮುಳುಗಿತ್ತು. ಸರ್ಕಾರ ಹಸ್ತಕ್ಷೇಪ ಮಾಡಿ ಸಹಕಾರಿ ಕಾನೂನಿನಡಿ ಸಂಸ್ಥೆಗೆ ಸಮಾಪನಾಧಿಕಾರಿ ನೇಮಕ ಮಾಡಿತ್ತು.
ಅಧಿಕಾರ ವಹಿಸಿಕೊಂಡ ಸಮಾಪನಾ ಧಿಕಾರಿ, ಸಂಸ್ಥೆ ಹೊಂದಿದ್ದ ಸಾಲ ತೀರಿಸಿದ್ದಲ್ಲದೆ ಸರ್ಕಾರದ ಪಾಲು ಬಂಡ ವಾಳವನ್ನು ಸಂಘದ ಆಸ್ತಿ ಮಾರಾಟ ಮಾಡುವ ಮೂಲಕ ಹಿಂತಿರುಗಿಸಿತು. ಸಹಕಾರಿ ಕಾನೂನಿನಂತೆ ಅಂದಿಗೆ ಸಮಾ ಪನಾಧಿಕಾರಿಯ ಕೆಲಸ ಮುಕ್ತಾಯ ವಾಯಿತು. ಸರ್ಕಾರ ರೈತರಿಗೆ ಈ ಆಸ್ತಿ ಯನ್ನು ಹಿಂತಿರುಗಿಸಬೇಕಾಗಿತ್ತು. ಆದರೆ, ಆ ಹೊತ್ತಿಗಾಗಲೇ ಕೋಟ್ಯಾಂತರ ರೂ. ಮೌಲ್ಯದ ಈ ಆಸ್ತಿಯನ್ನು ಸರ್ಕಾರ ತನ್ನ ಅಧಿಕಾರಿಗಳ ಮುಖಾಂತರ ಸಹಕಾರಿ ಕಾನೂನನ್ನು ದುರುಪಯೋಗಪಡಿಸಿ ಕೊಂಡು ಆಸ್ತಿ ಕಬಳಿಸುವ ಸಂಚು ರೂಪಿಸಿತು ಎಂದು ಆರೋಪಿಸಿದರು.
ಸಹಕಾರಿ ನಿಯಮವನ್ನು ಸಂಪೂರ್ಣ ಉಲ್ಲಂಘಿಸಿ, ಸದಸ್ಯರ ಮಹಾಸಭೆಯನ್ನೂ ಕರೆಯದೆ 19 ವರ್ಷಗಳ ಕಾಲ ಆಸ್ತಿ ಕಬಳಿಸುವ ಆಲೋಚನೆಯಲ್ಲೇ ಸರ್ಕಾರ ಮುಂದುವರಿದಿದ್ದು, ಈ ಮಧ್ಯೆ ಸಂಘದ ಉಳಿದಿರುವ ಆಸ್ತಿಗಳನ್ನು ಇ-ಟೆಂಡರ್ ಮೂಲಕ ಹರಾಜು ಮಾಡುವ ಪ್ರಕ್ರಿಯೆಗೆ ತೊಡಗಿಸಿಕೊಂಡ ಸಂದರ್ಭ ಸಾರ್ವ ಜನಿಕ ಕಾರ್ಯಕರ್ತರು ಹಾಗೂ ಎಂಸಿ ಪಿಸಿಎಸ್ ಸದಸ್ಯರು ಸಹಕಾರಿ ಮೂಕೊಂಡ ಬೋಸ್ ದೇವಯ್ಯರ ನೇತೃತ್ವದಲ್ಲಿ ಸಹಕಾರಿಗಳ ತುರ್ತು ಸಭೆ ಕರೆದು ಸರ್ವ ಸದಸ್ಯರ ಸಲಹೆ ಪಡೆದು ತಕ್ಷಣದಲ್ಲಿ ಉಚ್ಛ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಿ, ಇ-ಟೆಂಡರ್‍ಗೆ ತಡೆಯಾಜ್ಞೆ ತರುವಲ್ಲಿ ಸಫಲರಾಗಿದ್ದರು.
ಆ ಸಂದರ್ಭ ಸರ್ಕಾರದ ಮೇಲೆ ಒತ್ತಡ ಹೇರಿ 18 ವರ್ಷಗಳ ನಂತರ 1.9.2015ರಂದು ಸಂಘದ ಮಹಾಸಭೆ ಯಲ್ಲಿ ಸಂಸ್ಥೆಯನ್ನು ಪುನಶ್ಚೇತನಗೊಳಿಸಿ ರೈತರಿಗೆ ಮರಳಿಸುವಂತೆ ಸರ್ವಸದಸ್ಯರು ಮನವಿ ಮಾಡಿದರು.
ಇದಕ್ಕೆ ಸೊಪ್ಪು ಹಾಕದ ಸರ್ಕಾರ ಕುಂಟು ನೆಪಗಳನ್ನು ಮುಂದೊಡ್ಡಿ, ರೈತರಿಗೆ ಅವರ ಭೂಮಿಯನ್ನು ಹಿಂತಿರು ಗಿಸಲು ಮೀನಾಮೇಷ ಎಣಿಸಿದ ಮೇಲೆ ಮತ್ತೇ ರೈತರು ಪದೇ ಪದೆ ಒತ್ತಾಯ ಹೇರಿದ ಮೇರೆಗೆ 26.2.2019ರಂದು ಮತ್ತೆ ರೈತರ ಮಹಾಸಭೆ ಕರೆಯ ಲಾಯಿತು. ಈ ಸಭೆಯಲ್ಲಿಯೂ ರೈತರು ತಮಗೆ ಸೇರಿದ ಆಸ್ತಿಯನ್ನು ಹಿಂತಿರುಗಿಸು ವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಈ ಮಧ್ಯೆ ಹಿತರಕ್ಷಣಾ ಸಮಿತಿಯ ಮೂಲ ದಾವೆ ಸಂಖ್ಯೆ 945/15 ಹಾಗೂ 55/17ರಂದು ಮೈಸೂರು ಸಿವಿಲ್ ನ್ಯಾಯಾ ಲಯದಲ್ಲಿ ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಲಾಯಿತು ಎಂದು ವಿವರಿಸಿದರು.
ಈ ಪ್ರಕರಣದಲ್ಲೂ ಹಾಲಿ ಸಂಸ್ಥೆಯ ಬೆಲೆ ಬಾಳುವ ಗೋದಾಮುಗಳನ್ನು ಬಾಲಾಜಿ ವೇರ್ ಹೌಸಿಂಗ್ ಕಂಪನಿಗೆ ಬಾಡಿಗೆಗೆ ನೀಡಿದ್ದಾರೆ. ಈ ಸಂಸ್ಥೆ ಬೆಳೆಗಾರರಿಗೆ ಸೇರಿದ ಗೋದಾಮಿನಲ್ಲಿ ಭಾರೀ ಪ್ರಮಾಣದಲ್ಲಿ ಗೊಬ್ಬರ, ಸಿಮೆಂಟ್ ದಾಸ್ತಾನು ಮಾಡಿದೆ. ಕಟ್ಟಡ ಶಿಥಿಲಾವಸ್ಥೆಗೆ ಬಂದಿದೆ. ಹೀಗಾಗಿ ಅವರನ್ನು ತೆರವುಗೊಳಿಸುವಂತೆ ಹಾಗೂ ಅವರು ನೀಡುತ್ತಿರುವ ಬಾಡಿಗೆಯನ್ನು ನ್ಯಾಯಾಲಯದಲ್ಲಿ ಠೇವಣಿ ಇಡುವಂತೆ ಪ್ರಾರ್ಥಿಸಿದ್ದು, ಸರ್ಕಾರಕ್ಕೆ ಇದರ ಸಂಪೂರ್ಣ ಮಾಹಿತಿ ಇದ್ದರೂ ಮತ್ತೆ ಸಹಕಾರ ಇಲಾಖೆ ಕಾನೂನು ಬಾಹಿರವಾಗಿ ಬಾಲಾಜಿ ಸಂಸ್ಥೆಗೆ ಮತ್ತೆ ಮುಂದಿನ 11 ತಿಂಗಳಿಗೆ ಬಾಡಿಗೆ ಕರಾರು ಮಾಡಿಕೊಟ್ಟಿ ರುವುದನ್ನು ಹಿತರಕ್ಷಣಾ ಸಮಿತಿ ಸಂಪೂರ್ಣ ಖಂಡಿಸಿದೆ ಎಂದರು.
ಇಲಾಖೆಯ ಈ ಕ್ರಮವನ್ನು ಪ್ರಶ್ನಿಸಿ, ಸಹಕಾರಿ ಇಲಾಖೆಗೆ, ಸರ್ಕಾರಕ್ಕೆ ನೋಟೀಸ್ ನೀಡಿರುವುದಲ್ಲದೆ, ಸಮಾಪ ನಾಧಿಕಾರಿಗಳ ಕ್ರಮವನ್ನು ಖಂಡಿಸಿ, ಸಂಘದ sಸಂಚಾಲಕ ಮೂಕೊಂಡ ಬೋಸ್ ದೇವಯ್ಯ, ಸಹ ಸಂಚಾಲ ಕರಾದ ಕೋಲತಂಡ ಸುಬ್ರಮಣಿ, ಚೆಂದ್ರಿಮಾಡ ಗಣೇಶ ನಂಜಪ್ಪ ಇನ್ನಿತರರು ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದಾಗಿ ವಕೀಲ ಕೆ.ಬಿ.ಹೇಮಚಂದ್ರ ತಿಳಿಸಿದರು.