ನಗರಸಭೆ ಪೌರಕಾರ್ಮಿಕರ ಪ್ರತಿಭಟನೆ

ಹಾಸನ:  ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವ ನಗರಸಭೆ ಆರೋಗ್ಯ ನಿರೀಕ್ಷಕ ಸ್ಟೀಫನ್ ಪ್ರಕಾಶ್‍ರನ್ನು ಕೂಡಲೇ ಬೇರೆಡೆಗೆ ವರ್ಗಾಯಿಸುವಂತೆ ಒತ್ತಾಯಿಸಿ ನಗರಸಭೆ ಪೌರಕಾರ್ಮಿಕರು ಜಿಲ್ಲಾಡಳಿತ ಕಚೇರಿ ಮುಂದೆ ಪ್ರತಿಭಟಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ ದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಸ್ಟೀಫನ್ ಪ್ರಕಾಶ್ 20 ವರ್ಷಗಳಿಂದ ನಗರಸಭೆ ಆರೋಗ್ಯ ನಿರೀಕ್ಷಕನಾಗಿ ಕೆಲಸ ಮಾಡು ತ್ತಿದ್ದು, ಪೌರ ಕಾರ್ಮಿಕರನ್ನು ಅಮಾನವೀಯ ವಾಗಿ ನಡೆಸಿಕೊಳ್ಳುತ್ತಿದ್ದಾರೆ. ಈ ಪ್ರಶ್ನಿ ಸುವವರನ್ನು ಕಠಿಣ ಕೆಲಸಕ್ಕೆ ನಿಯೋಜಿಸಿ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ. ಇವ ರಿಂದ ಸಾಕಷ್ಟು ಪೌರಕಾರ್ಮಿಕರು ಅನಾ ರೋಗ್ಯಕ್ಕೀಡಾಗಿ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಹಲವು ಕುಟುಂಬಗಳು ಬೀದಿ ಪಾಲಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆಯಲ್ಲಿ 74 ಜನ ಖಾಯಂ ಪೌರ ಕಾರ್ಮಿಕರಿದ್ದು, 200 ಮಂದಿ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 20 ವರ್ಷಗಳಿಂದಲೂ ವರ್ಗಾವಣೆಯಾಗದೆ ಸ್ಟೀಫನ್ ಪ್ರಕಾಶ್ ಪೌರಕಾರ್ಮಿಕರ ಮೇಲೆ ದರ್ಪ ಮತ್ತು ದೌರ್ಜನ್ಯದಿಂದ ಕಿರುಕುಳ ನೀಡುತ್ತಿದ್ದಾರೆ ಕೂಡಲೇ ಈತ ನನ್ನು ಇಲ್ಲಿಂದ ಬೇರೆಡೆಗೆ ವರ್ಗಾಯಿಸ ಬೇಕು ಎಂದು ಒತ್ತಾಯಿಸಿದರು. ಪ್ರತಿ ಭಟನೆಯಲ್ಲಿ ಕದಸಂಸ (ಭೀಮವಾದ) ರಾಜ್ಯ ಸಂಘಟನಾ ಸಂಚಾಲಕ ನಾಗರಾಜ್ ಹೆತ್ತೂರು, ಪೌರ ಕಾರ್ಮಿಕ ಕ್ಷೇಮಾಭಿ ವೃದ್ಧಿ ಸಂಘದ ಅಧ್ಯಕ್ಷ ಲೋಕೇಶ್, ಕಾರ್ಯ ದರ್ಶಿ ಪರಶುರಾಮು, ಗೌರವ ಸಲಹೆ ಗಾರ ವಿಮಲ್ ಕುಮಾರ್ ಶೀಗೋಡು, ಸಂಘದ ಅಧ್ಯಕ್ಷ ಲೋಕೇಶ್, ಮಾರ, ನಲ್ಲಪ್ಪ, ಮುನಿಯಪ್ಪ, ಬಾಬು, ನರಸಿಂಹ, ದೇವರಾಜು, ಶಿವಸ್ವಾವಿ, ನಾಗಭೂಷಣ, ಡ್ರೈವರ್ ರಂಗೇಗೌಡ, ಯೋಗೇಶ್ ಪುಟ್ಟರಾಜು, ಮಂಜುಳಾ, ರಾಮಕ್ಕ, ಭಾಗ್ಯಮ್ಮ, ಮಂಜುಳಾ, ಸಣ್ಣಮ್ಮ ಹಾಗೂ ಮೊದಲಾದವರಿದ್ದರು.