ಠೇವಣಿ ಹಣ ಮರು ಪಾವತಿಗೆ ಆಗ್ರಹಿಸಿ ಪ್ರತಿಭಟನೆ

ಬೇಲೂರು: ಕಳೆದ 5 ತಿಂಗಳ ಹಿಂದೆ ಪುರಸಭೆಯಿಂದ ಹರಾಜು ಮಾಡಿದ್ದ ಮೀನು ಮಾರಾಟ ಮಳಿಗೆಗಳ ಬಿಡ್ ದಾರರಿಗೆ ಠೇವಣಿ ಹಣ ವಾಪಸ್ ನೀಡದೆ ವಂಚಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ ಪುರಸಭೆ ಮುಂಭಾಗ ಸೋಮವಾರ ಮೀನು ಮಳಿಗೆಗಳ ಬಿಡ್ ದಾರರು ಪ್ರತಿಭಟನೆ ನಡೆಸಿದರು.

ಪುರಸಭೆ ಮಾಜಿ ಸದಸ್ಯ ಎಸ್.ರವಿ ಮಾತನಾಡಿ, ಪುರಸಭೆಯಿಂದ ಪಟ್ಟಣದ ಮಸೀದಿ ಬೀದಿಯ ಬಳಿ ಮೀನು ಮಾರಾಟ ಕ್ಕೆಂದು ನಿರ್ಮಿಸಿದ 6 ಮಳಿಗೆಗಳನ್ನು ನಿಯಮಾನುಸಾರ ವಿವಿಧ ರೀತಿಯಲ್ಲಿ ಬಾಡಿಗೆಗೆ ಹರಾಜು ಕೂಗಿ ಪಡೆದು ಕೊಂಡೆವು. ಈ ವೇಳೆ ಪ್ರತಿ ಮಳಿಗೆಗೆ ಪ್ರತಿಯೊಬ್ಬರಿಂದ 1 ಲಕ್ಷರೂ. ಠೇವಣಿ ಹಣ ಕಟ್ಟಿಸಿಕೊಂಡರು ಎಂದರು.

2018 ನ. 28ರಂದು ನಡೆದ ಹರಾಜು ವೇಳೆ ಬಿಡ್ಡುದಾರರೊಂದಿಗೆ ಮಾತನಾ ಡಿದ ಪುರಸಭೆÀ ಅಧ್ಯಕ್ಷೆಯಾಗಿದ್ದ ಭಾರತಿ ಅರುಣಕುಮಾರ್, ಮುಖ್ಯಾಧಿಕಾರಿಯಾ ಗಿದ್ದ ಮಂಜುನಾಥ್, ಸದಸ್ಯ ಶ್ರೀನಿಧಿ ಅವರು, ಹಾಲಿ ಇರುವ ಮೀನು ಮಾರಾ ಟದ ವ್ಯವಸ್ಥೆಯನ್ನು ರದ್ದುಗೊಳಿಸಿ ಹರಾಜು ಕೂಗಿರುವ ಮಳಿಗೆಯಲ್ಲೇ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿ ದ್ದರು. ಹೊಸ ಮಳಿಗೆಗೆ ಮೂಲ ಸೌಲಭ್ಯ ಒದಗಿಸಿಕೊಡುವುದಾಗಿ ಭರವಸೆ ನೀಡಿ ದ್ದರು. ಆದರೆ, ಭರವಸೆ ನೀಡಿ 7 ತಿಂಗಳು ಕಳೆದರೂ ಮೀನು ಅಂಗಡಿಯನ್ನು ರದ್ದು ಪಡಿಸಿಲ್ಲ ಮತ್ತು ಹೊಸ ಮಳಿಗೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ದೂರಿದರು.

ಮೂಲ ಸೌಲಭ್ಯಗಳಾದ ವಿದ್ಯುತ್, ನೀರು, ರಸ್ತೆ ಸೇರಿದಂತೆ ಯಾವುದನ್ನೂ ಮಾಡಿಸಿ ಕೊಟ್ಟಿಲ್ಲ. ಈ ಕಾರಣದಿಂದ ಬಿಡ್ಡುದಾರರು ಪಾವತಿಸಿದ ಠೇವಣಿ ಹಣವನ್ನು ವಾಪಸ್ ನೀಡುವಂತೆ ಮನವಿ ಮಾಡಿದರೂ, ವಾಪಸ್ ನೀಡಿಲ್ಲ. ಇದು ಪುರಸಭೆಯಿಂದ ಮಳಿಗೆ ಪಡೆದ ಬಿಡ್ಡುದಾರರಿಗೆ ಆಗುತ್ತಿರುವ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀನುಗಾರರ ಸಂಘದ ಅಧ್ಯಕ್ಷ ಹಾಗೂ ಮಳಿಗೆದಾರ ಹನುಮಂತು ಮಾತನಾಡಿ, ಮಳಿಗೆದಾರರಿಗೆ ಸೌಲಭ್ಯ ಕಲ್ಪಿಸಿಕೊಡು ವುದಾಗಿ ಮತ್ತು ಹಾಲಿ ಇರುವ ಮೀನಿನ ಅಂಗಡಿಯನ್ನು ಮುಚ್ಚುವುದಾಗಿ ನೀಡಿದ್ದ ಭರವಸೆ ನಂಬಿ ಠೇವಣಿ ಕಟ್ಟಿ 24 ಸಾವಿರ ರೂ.ಗಳಿಂದ 35 ಸಾವಿರದವರಗೆ ಬಾಡಿ ಗೆಗೆ ಹರಾಜು ಮೂಲಕ 6 ಜನ ಬಿಡ್ಡು ದಾರರು ಕೂಗಿದ್ದಾರೆ. ಆದರೆ ಪುರಸಭೆ ಯಿಂದ ನಮಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿ ಪುರಸಭೆಯ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಬಿಡ್ಡುದಾರರಾದ ಪೂರ್ಣಿಮಾ, ಉದಯಕುಮಾರ್, ಯೋಗೇಶ್, ಆಯಿಷ್ ಲೋರಲ್, ಶಿವ ನಾಯಕ, ಡಾ.ರಾಜ್ ಸಂಘದ ಅಧ್ಯಕ್ಷ ತೀರ್ಥಂಕರ್ ಇತರರು ಇದ್ದರು.