ಬಾರ್ ಮುಂದೆ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಪಾಲಿಕೆ ಸದಸ್ಯರು, ನಿವಾಸಿಗಳಿಂದ ಪ್ರತಿಭಟನೆ

ಮೈಸೂರು: ನಿವಾಸಿಗಳ ವಿರೋಧದ ನಡುವೆಯೂ ಮೈಸೂ ರಿನ ಹೆಬ್ಬಾಳ ಒಂದನೇ ಹಂತದ ಹುಡ್ಕೋ ಬಡಾವಣೆ ಲಕ್ಷ್ಮಿಕಾಂತನಗರದ ಸಿಐಟಿಬಿ ಛತ್ರದ ಹಿಂಭಾಗದಲ್ಲಿ ಚಿತ್ರ ರೆಸಿಡೆನ್ಸಿಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲಾಗಿದ್ದು ಅದನ್ನು ಕೂಡಲೇ ಮುಚ್ಚಬೇಕು ಎಂದು ಆಗ್ರಹಿಸಿ ಬಡಾವಣೆ ನಿವಾಸಿಗಳು, ಚಾಮರಾಜ ಕೇತ್ರದ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಬಾರ್ ಅಂಡ್ ರೆಸ್ಟೋರೆಂಟ್ ತೆರೆಯ ಲಾಗಿರುವ ಮಳಿಗೆ ಮುಂದೆ ಮಹಿಳೆ ಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಡಾವಣೆಯ ಜನರ ನೆಮ್ಮದಿ ಹಾಳು ಮಾಡಲಿರುವ ಬಾರ್ ಅಂಡ್ ರೆಸ್ಟೋ ರೆಂಟ್‍ಗೆ ನೀಡಲಾಗಿರುವ ಲೈಸೆನ್ಸ್ ರದ್ದು ಪಡಿಸಬೇಕು. ಕೂಡಲೇ ಬಾರ್ ಮುಚ್ಚಿಸ ಬೇಕು ಎಂದು ಒತ್ತಾಯಿಸಿದರು. ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೂಡಲೇ ಅಬ್ಕಾರಿ ಅಧಿಕಾರಿ ಗಳು ಸ್ಥಳಕ್ಕೆ ಬರಬೇಕು. ಬಾರ್ ಅನುಮತಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಬಾರ್ ತೆರೆಯುವ ವಿಚಾರ ಅರಿತ ಬಡಾವಣೆ ನಿವಾಸಿಗಳು ಕಳೆದ ಆರು ತಿಂಗಳ ಹಿಂದೆಯೇ ಬಾರ್ ತೆರೆಯು ವುದನ್ನು ವಿರೋಧಿಸಿ, ಜಿಲ್ಲಾಧಿಕಾರಿ, ಅಬ್ಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಟ್ಟಡದ ಎದುರು ಉದ್ಯಾನವನ, ಶಾಲೆ, ದೇವ ಸ್ಥಾನ, ಆಸ್ಪತ್ರೆಗಳಿವೆ. ಇಂತಹ ಕಡೆ 100 ಮೀಟರ್‍ನಲ್ಲಿ ಯಾವುದೇ ಮದ್ಯದಂಗಡಿ, ಬಾರ್ ಇತ್ಯಾದಿ ತೆರೆಯಲು ಅವಕಾಶ ಇಲ್ಲ ಎಂದು ಅಬ್ಕಾರಿ ಕಾಯಿದೆ ಹೇಳು ತ್ತದೆ. ಆದರೆ ನಿನ್ನೆಯಿಂದ ಬಾರ್ ಆರಂಭಿ ಸಲಾಗಿದೆ. ಇದು ಬಡಾವಣೆಯ ಜನರ ನೆಮ್ಮದಿ ಭಂಗ ತರುವ ಸಾಧ್ಯತೆಗಳಿವೆ. ಆದ್ದರಿಂದ ಕೂಡಲೇ ಬಾರ್ ಮುಚ್ಚಿಸ ಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಬಡಾವಣೆಯ ನಿವಾಸಿ ಹೆಚ್.ಎಸ್.ಜಯಪ್ಪ ಅವರು, ಮೈಸೂರು ವಲಯ ಆಯುಕ್ತರಿಗೆ ಪತ್ರ ನೀಡಿ, ಯಾವುದೇ ಬಾರ್, ಮದ್ಯದಂಗಡಿ ತೆರೆ ಯಲು ಅನುಮತಿ ನೀಡಬಾರದು ಎಂದು ಗಮನ ಸೆಳೆಯಲಾಗಿತ್ತು. ಇದಕ್ಕೆ ನಗರ ಪಾಲಿಕೆ ಅಧಿಕಾರಿಗಳು, ಸ್ಥಳ ಪರಿಶೀಲನೆ ಮಾಡಿ ನಗರಪಾಲಿಕೆಯಿಂದ ಯಾವುದೇ ಅನುಮತಿ ಪತ್ರ ಮತ್ತು ಉದ್ದಿಮೆ ಪರವಾ ನಗಿ ನೀಡಿಲ್ಲವೆಂದು ಪಾಲಿಕೆ ವಲಯ ಕಚೇರಿ 5ರ ವಲಯ ಆಯುಕ್ತರು ಕಳೆದ ಮಾ.12ರಂದು ನೀಡಿದ ಹಿಂಬರಹದಲ್ಲಿ ತಿಳಿಸಿದ್ದಾರೆ. ಅಲ್ಲದೆ, ವಲಯ 2ರ ಅಬ ಕಾರಿ ನಿರೀಕ್ಷಕರು ಸಹ ಯಾವುದೇ ಅರ್ಜಿ ಅಥವಾ ಪ್ರಸ್ತಾವನೆ ಬಂದಿಲ್ಲ ಎಂದು ಹಿಂಬರಹ ನೀಡಿದ್ದಾರೆ. ಹೀಗಿದ್ದೂ, ರಾತ್ರೋ ರಾತ್ರಿ ಬಾರ್‍ಗೆ ಅನುಮತಿ ನೀಡಿ, ನಿನ್ನೆಯಿಂದ ಬಾರ್ ತೆರೆದಿದೆ ಎಂದು ಆರೋಪಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಬಾರ್ ಬೇಡ ಎಂದು ನಿವಾಸಿಗಳು ಈ ಮೊದಲೇ ಮನವಿ ಮಾಡಿದ್ದರೂ, ಜನ ರನ್ನು ಧಿಕ್ಕರಿಸಿ ಬಾರ್ ತೆರೆದಿರುವುದು ಅಧಿಕಾರಿಗಳ ಭ್ರಷ್ಟತನಕ್ಕೆ ನಿದರ್ಶನ ವಾಗಿದೆ. ಲಕ್ಷ್ಮೀಕಾಂತನಗರ, ಸುಬ್ರಹ್ಮಣ್ಯ ನಗರ, ಹೆಬ್ಬಾಳ ಒಂದನೇ ಹಂತ, ಹುಡ್ಕೋ ಬಡಾವಣೆ ಸೇರಿದಂತೆ ಇಡೀ ವಾರ್ಡ್ ವ್ಯಾಪ್ತಿಯ ನಿವಾಸಿಗಳು ಪಕ್ಷ ಭೇದ ಮರೆತು ಪ್ರತಿಭಟನೆಯಲ್ಲಿ ಭಾಗವ ಹಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನವನ್ನೂ ಸೆಳೆಯಲಾಗಿದೆ. ಬಾರ್ ಎದುರಿನಲ್ಲಿ ಉದ್ಯಾನವನವಿದೆ. ಶಾಲೆ, ದೇವಾಲಯ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ನೂರು ಮೀಟರ್ ಅಂತರದಲ್ಲಿ ಬಾರ್, ಮದ್ಯದಂಗಡಿ ತೆರೆಯುವಂತಿಲ್ಲ ಎಂಬ ನಿಯಮವಿದೆ. ಆದರೂ, ನಿಯಮ ಗಾಳಿಗೆ ತೂರಿ ಬಾರ್ ತೆರೆಯ ಲಾಗಿದೆ ಎಂದು ಆಕ್ಷೇಪಿಸಿದರು.

ಪ್ರತಿಭಟನೆಯಲ್ಲಿ ನಗರಪಾಲಿಕೆ ಸದಸ್ಯ ರಾದ ಲಕ್ಷ್ಮಿ ಶಿವಣ್ಣ, ಸತೀಶ್, ಸುಬ್ಬಯ್ಯ, ರಮೇಶ್, ಪ್ರೇಮಾ ಶಂಕರೇಗೌಡ, ಪ್ರಮೀಳಾ ಭರತ್, ವೇದಾವತಿ, ಶ್ರೀಧರ್, ಪಾಲಿಕೆ ಮಾಜಿ ಉಪಮೇಯರ್ ಮಹದೇವಪ್ಪ, ಮಾಜಿ ಸದಸ್ಯ ಶಿವಣ್ಣ, ಬಡಾವಣೆಯ ಮುಖಂಡರಾದ ಹೆಚ್.ಎಸ್.ಜಯಪ್ಪ, ತ್ರಿವೇಣಿ ಜಯಪ್ಪ, ಶಾರದಾಬಾಯಿ, ಕಿರಣ್‍ಕುಮಾರ್, ಕಿರಣ್‍ಗೌಡ, ನಂದೀಶ್, ವಿಜಯಕುಮಾರ್, ಕಾರ್ತಿಕ್, ಜಗದೀಶ್, ಗಂಗಾಧರ್ ಇನ್ನಿತರರು ಪಾಲ್ಗೊಂಡಿದ್ದರು.