ಟ್ರಾನ್ಸ್ ಜೆಂಡರ್ ಬಿಲ್ ಹಿಂಪಡೆಯಲು ಆಗ್ರಹಿಸಿ ಮಂಗಳಮುಖಿಯರ ಪ್ರತಿಭಟನೆ

ಹಾಸನ: ಟ್ರಾನ್ಸ್ ಜೆಂಡರ್ ಬಿಲ್‍ನ್ನು ಹಿಂಪಡೆಯಿರಿ ಮತ್ತು ಮಾನವ ಕಳ್ಳಸಾಗಾ ಣಿಕೆಯ ಬಿಲ್‍ನ್ನು ಸೆಲೆಕ್ಟ್ ಕಮಿಟಿಗೆ ನೀಡುವಂತೆ ಆಗ್ರಹಿಸಿ ಮಂಗಳಮುಖಿ ಯರ ಜೊತೆ ವಿವಿಧ ಸಂಘಟನೆಗಳ ಮುಖಂಡರು ಡಿಸಿ ಕಛೇರಿ ಆವರಣ ದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.

ಡಿಸೆಂಬರ್ 2018ರ ಲೋಕಸಭೆಯಲ್ಲಿ ಟ್ರಾನ್ ಟೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಬಿಲ್, 2018 ಅನ್ನು 27 ತಿದ್ದುಪಡಿಗಳ ಸಮೆತ ಅನುಮೋದಿಸಲಾಗಿದೆ. ಜುಲೈ 2018 ರಲ್ಲಿ ಮಾನವ ಕಳ್ಳಸಾಗಾಣಿಕೆಯ (ತಡೆಗಟ್ಟುವಿಕೆ, ರಕ್ಷಣೆ ಹಾಗೂ ಪುನರ್ವ ಸತಿ) ಬಿಲ್, 2018 ಅನ್ನು ಅನುಮೋದಿಸ ಲಾಗಿದೆ. ತಿದ್ದುಪಡಿ ಮಾಡಲಾದ ಟ್ರಾನ್ಸ್ ಟೆಂಡರ್ ಬಿಲ್‍ನಲ್ಲಿ ಟ್ರಾನ್ಸ್ ಜೆಂಡರ್ ಪದದ ಸುಧಾರಿತ ವ್ಯಾಖ್ಯಾನ ಸ್ವಾಗತಾರ್ಹ ಎಂದರು. ಇದನ್ನು ಹೊರತುಪಡಿಸಿ ಈ ಜನವಿರೋಧಿ ಬಿಲ್ ಸ್ವೀಕರಿಸಲು ಅನರ್ಹ ವಾಗಿದ್ದು, ಮತ್ತೊಮ್ಮೆ ತಿದ್ದುಪಡಿ ಮಾಡಬೇಕಾಗಿದೆ.

2014ರಲ್ಲಿ ಸರ್ವೋಚ್ಚ ನ್ಯಾಯಾಲಯವು ನ್ಯಾಷನಲ್ ಲೀಗಲ್ ಸರ್ವೀಸಸ್ ಅಥಾ ರಿಟಿ ಹಾಗೂ ಕೇಂದ್ರ ಸರ್ಕಾರದ ಮಧ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ಐತಿಹಾಸಿಕ ತೀರ್ಪಿನ ನಂತರ ಸರಣಿ ಗಳಲ್ಲಿ ರಚಿಸಲಾದ ಬಿಲ್‍ಗಳ ಪೈಕಿ ಇದು ನೂತನವಾದ ಬಿಲ್ ಆಗಿದೆ. 2016ರ ಬಿಲ್ ಬಗ್ಗೆ ಟ್ರಾನ್ಸ್ ಟೆಂಡರ್ ಸಮುದಾಯದ ವಿಮರ್ಶೆಗಳನ್ನು ಹಾಗೂ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಇದ ರಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ದೂರಿದರು. ಇದು ಸರ್ವೋಚ್ಚ ನ್ಯಾಯಾಲಯದ ತೀರ್ಪು, ಭಾರತದ ಸಂವಿಧಾನವು ಕೊಟ್ಟಿರುವ ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಸಮಾನತೆಯ ಹಾಗೂ ಮೂಲ ಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡಿ ರುತ್ತದೆ. ಇದು ಟ್ರಾನ್ಸ್ ಜೆಂಡರ್ ಗಳಿಗೆ ಶಿಕ್ಷಣ, ಉದ್ಯೋಗ ಮುಂತಾದ ಕ್ಷೇತ್ರ ಗಳಲ್ಲಿ ಮೀಸಲಾತಿಯನ್ನು ನೀಡದೆ ಅವ ಕಾಶವಂಚಿತರನ್ನಾಗಿ ಮಾಡಿದೆ ಎಂದರು.

ಈ ಬಿಲ್‍ನಲ್ಲಿ ವಯಸ್ಕ ಸ್ವಯಿಚ್ಚೆಯ ಲೈಂಗಿಕ ವೃತ್ತಿ ಮತ್ತು ಬಲವಂತದ ಲೈಂಗಿಕ ವೃತ್ತಿಗೂ ಯಾವುದೇ ರೀತಿಯ ವ್ಯತ್ಯಾಸ ಇಲ್ಲ. ಇದು ವಯಸ್ಕ ಸ್ವಯಿಚ್ಛೆಯ ಲೈಂಗಿಕ ಕಾರ್ಮಿಕರ ಮತ್ತು ಭಿಕ್ಷಾಟನೆ ಮಾಡು ವವರ ಹಕ್ಕುಗಳನ್ನು ಉಲ್ಲಂಘನೆ ಮಾಡು ತ್ತದೆ. ಈ ಎರಡು ದೋಷಪೂರಿತ ಬಿಲ್ ಗಳು ಈಗಾಗಲೆ ದುಸ್ಥಿತಿಯಲ್ಲಿರುವ ಟ್ರಾನ್ಸ್ ಜೆಂಡರ್‍ಗಳ, ಲೈಂಗಿಕ ಕಾರ್ಮಿ ಕರ, ಜೀತ ಕಾರ್ಮಿಕರ, ಗುತ್ತಿಗೆ ಕಾರ್ಮಿ ಕರ, ಗೃಹ ಕಾರ್ಮಿಕರ, ಕಟ್ಟಡ ಕಾರ್ಮಿ ಕರ ಹಾಗೂ ವಲಸೆ ಕಾರ್ಮಿಕರ ಸಮಸ್ಯೆ ಗಳನ್ನು ಮತ್ತಷ್ಟು ತೀವ್ರಗೊಳಿಸುತ್ತದೆ ಎಂದರು. ಮನುಷ್ಯರ ದೇಹಗಳನ್ನು, ಅವರು ಆಯ್ದುಕೊಂಡಿರುವ ಕೆಲಸಗಳನ್ನು ಅಪರಾಧೀಕರಿಸುವ ಹಾಗೂ ಅಂಚಿನಲ್ಲಿ ರುವ ಜನರ ಮೂಲಭೂತ ಹಕ್ಕುಗಳನ್ನು ನಿರಾಕರಿಸುವ ಈ ಬಿಲ್ ವಿರುದ್ಧದ ಎಲ್ಲಾ ಸಂಸದರಲ್ಲಿ ನಮ್ಮ ಕಳಕಳಿಯ ವಿನಂತಿ ಏನೆಂದರೆ ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಬಿಲ್ 2018, ಅನ್ನು ಮತ್ತೊಮ್ಮೆ ಕೂಲಂ ಕುಷವಾಗಿ ಪರಿಶೀಲಿಸಿ ಸುಪ್ರೀಂ ನ್ಯಾಯಾ ಲಯದ (ನ್ಯಾಷನಲ್ ಲೀಗಲ್ ಸರ್ವೀ ಸಸ್ ಅಥಾರಿಟ) ತೀರ್ಪಿಗೆ ಪೂರಕವಾಗಿ ಹಾಗೂ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಟ್ರಾನ್ಸ್ ಜೆಂಡರ್ ಸಮುದಾ ಯವು ನೀಡಿರುವ ಅಭಿಪ್ರಾಯಗಳನ್ನು ಒಳಗೊಂಡಿರುವಂತೆ ಮತ್ತೊಮ್ಮೆ ಬಿಲ್ ಅನ್ನು ಮಂಡಿಸಬೇಕು. ರಾಜ್ಯಸಭೆಯ ಸಭಾಪತಿ ಅವರಿಗೆ ನಾವು ಟ್ರಾಫಿಕಿಂಗ್ ಬಿಲ್‍ಅನ್ನು ಸೆಲೆಕ್ಟ್ ಕಮಿಟಿಗೆ ವರ್ಗಾ ಯಿಸಬೇಕೆಂದು ಕರ್ನಾಟಕ ಲೈಂಗಿಕ ಪ್ರಕೃತಿ ಸೇವಾ ಸಂಸ್ಥೆ ಕಾರ್ಮಿಕರ ಯೂನಿ ಯನ್ ಮತ್ತು ಸಂಗಮದಿಂದ ವಿನಂತಿಸು ತ್ತೇವೆ ಎಂದು ಮನವಿ ಮಾಡಿದರು. ಪ್ರತಿ ಭಟನೆಯಲ್ಲಿ ಅಶ್ವತ್, ಜಾನವಿ, ರಾಜೇಶ್, ವರ್ಷ, ಮರಿಜೋಸೇಫ್, ಹೆತ್ತೂರು ನಾಗರಾಜು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.