ಬಿಇಓ ಕಚೇರಿ ಮುಂಭಾಗ ಕರವೇ ಪ್ರತಿಭಟನೆ

ಕೆ.ಆರ್.ಪೇಟೆ: ತಾಲೂಕಿನ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಇಲಾಖೆಯ ಕಾನೂನು ಮೀರಿ ಹೆಚ್ಚಿನ ಡೊನೇಷನ್ ಪಡೆಯಲಾಗುತ್ತಿದ್ದು, ಈ ಬಗ್ಗೆ ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಪಟ್ಟಣದಲ್ಲಿ ಬುಧ ವಾರ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‍ಶೆಟ್ಟಿ ಬಣ)ದಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂಭಾಗ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಆರ್. ಅಂಜನ್ ಮತ್ತು ಗೌರವಾ ಧ್ಯಕ್ಷ ಟಿ.ವೈ. ಆನಂದ್ ಅವರ ನೇತೃತ್ವದಲ್ಲಿ ಸಮಾವೇಶ ಗೊಂಡ ಕಾರ್ಯಕರ್ತರು ಖಾಸಗಿ ಶಾಲೆ ಗಳ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.

ತಾಲೂಕಿನಾದ್ಯಂತ ಎಲ್ಲಾ ಖಾಸಗಿ ಶಾಲೆ ಗಳಲೂ ಡೊನೇಷನ್ ಹಾವಳಿ ಹೆಚ್ಚಾಗಿದೆ. ಪೋಷಕರ ಬಳಿ ಲಕ್ಷಾಂತರ ರೂಪಾಯಿ ಹಣ ಕಟ್ಟಿಸಿಕೊಂಡಿದ್ದಾರೆ. ಈ ಸಂಬಂಧ 3 ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪ್ರತಿಭಟನೆ ಮಾಡಿ ಡೊನೇಷನ್ ಹಾವಳಿ ತಪ್ಪಿಸಿ ಎಂದು ಮನವಿ ಮಾಡಿದ್ದರೂ. ಯಾವುದೇ ಪ್ರಯೋ ಜನವಾಗಿಲ್ಲ. ಡೊನೇಷನ್ ಪಡೆಯಲು ಶಾಲಾ ಆಡಳಿತ ಮಂಡಳಿಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹಕರಿಸು ತ್ತಿದ್ದಾರೆ ಎಂದು ಆರೋಪಿಸಿದರು.

ಯಾವುದೇ ಶಾಲಾ ಆಡಳಿತ ಮಂಡಳಿ ಡೊನೇಷನ್ ಪಡೆಯಲು ಬಿಇಓ ಕಚೇರಿ ಯಿಂದ ಅನುಮೋದನೆ ಪಡೆದು ಶಾಲಾ ಮುಂಭಾಗ ನೋಟೀಸ್ ಬೋರ್ಡ್‍ನಲ್ಲಿ ಪ್ರಕಟಿಸಿ ಪೋಷಕರ ಗಮನಕ್ಕೆ ತಂದಿಲ್ಲ. ಜೊತೆಗೆ, ಮಕ್ಕಳ ದಾಖಲಾತಿ ಸಮಯ ದಲ್ಲಿ ಶಾಲಾ ಆಡಳಿತ ಮಂಡಳಿ ಪ್ರವೇಶ ಶುಲ್ಕ ಪಡೆಯಲು ಬಿಇಓ ಅವರಿಂದ ಅನು ಮೋದನೆ ಪಡೆದ ಬಳಿಕ ಪೋಷಕರ ಗಮನಕ್ಕೆ ತಂದು ಪ್ರವೇಶ ಶುಲ್ಕ ಪಡೆಯಬೇಕು ಎಂಬು ದಾಗಿ ಸರ್ಕಾರ ಕಟ್ಟುನಿಟ್ಟಿನ ನಿಯಮ ತಂದಿದ್ದರೂ ಸಹ ಬಿಇಓ ಈ ಸಂಬಂಧ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಬಡ ಪೋಷಕರು ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಲು ಹೋದರೆ, ಆಡಳಿತ ಮಂಡಳಿ ಪ್ರವೇಶ ಮುಕ್ತಾಯವಾಗಿದೆ ಎಂದು ನೆಪ ಹೇಳುತ್ತಾರೆ. ದುಡ್ಡಿಲ್ಲದಿದ್ದರೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆ ಯುವುದು ಹರಸಾಹಸವಾಗಿದೆ. ಕೂಡಲೇ ಖಾಸಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯ ದರ್ಶಿ ಸುನೀಲ್, ಆಟೋ ವಿಭಾಗದ ಅಧ್ಯಕ್ಷ ಕೆ.ಎನ್.ವಾಸುದೇವ್, ಕರವೇ ಪದಾಧಿಕಾರಿಗಳಾದ ನಾಗೇಂದ್ರ, ಅವಿನಾಶ್, ಪ್ರತಾಪ್, ಲತೇಶ್, ಪುನೀತ್, ಮಂಜು ನಾಥ್, ಮೋಹನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.