ದೊಡ್ಡಬಸವನಹಳ್ಳಿಯಲ್ಲಿ ಅರಿವು ಮೂಡಿಸಲೆತ್ನಿಸಿದ ಮನೋವೈದ್ಯೆ ಡಾ.ಸುನೀತ
ಕೌಶಿಕÀ, ಜು.5- ನಮ್ಮ ದೇಹದಲ್ಲಿರುವ ನರವಾಹಕಗಳು ಹಾಗೂ ರಾಸಾಯನಿಕಗಳಲ್ಲಿ ಆಗುವ ವ್ಯತ್ಯಾಸದಿಂದಾಗಿ ಮಾನಸಿಕವಾಗಿ ಬಳಲಬೇಕಾಗುತ್ತದೆಯೇ ಹೊರತು ಬೇರೇನೂ ಅಲ್ಲ. ಹಾಗಾಗಿ ಮಾನಸಿಕ ಖಾಯಿಲೆಗಳ ಬಗೆಗಿನ ತಪ್ಪು ಕಲ್ಪನೆಗಳಿಂದ ನಾವು ಮೊದಲು ಹೊರಬರಬೇಕು ಎಂದು ಮನೋವೈದ್ಯೆ ಡಾ.ಸುನೀತ ಅರಿವು ಮೂಡಿಸಲೆತ್ನಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಹಾಗೂ ಕೌಶಿಕದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ದೊಡ್ಡಬಸವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ `ಮಾನಸಿಕ ಆರೋಗ್ಯ ಅರಿವು ಕಾರ್ಯಾಗಾರ-ತಪಾಸಣಾ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲಿಯೂ ಆತಂಕ, ಭಯ, ಗಾಬರಿ, ವಿಚಿತ್ರ ವರ್ತನೆ ಹಾಗೂ ಸಂಶಯಗಳಿದ್ದೇ ಇರುತ್ತವೆ. ಅವುಗಳಿಂದ ಮುಕ್ತರಾಗಲು ಮನೋವೈದ್ಯರ ಸಲಹೆ ಪಡೆಯುವುದು ಸೂಕ್ತ ಎಂದು ಗಮನ ಸೆಳೆದರು.
ಮನೋಚೈತನ್ಯ ಕ್ಲಿನಿಕ್‍ಗಳ ಮೂಲಕ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ತಜ್ಞ ವೈದ್ಯ ರಿಂದ ಮಾನಸಿಕ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾ ಗುತ್ತಿದೆ. ಮನೋರೋಗಿಗಳು ಇರುವ ಕುಟುಂಬದವರು ಈ ಸೌಲಭ್ಯದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಕೌಶಿಕದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀದೇವಿ ಮಾತನಾಡಿ, ಮಾನಸಿಕ ಖಾಯಿಲೆಗಳ ಬಗ್ಗೆ ಪ್ರತಿ ವ್ಯಕ್ತಿಯು ತಿಳಿಯಬೇಕು. ಮಾನಸಿಕ ಸಮಸ್ಯೆಗಳು ಎದುರಾದಾಗ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಮನೋವೈದ್ಯರಾದ ವಿಜಯಕುಮಾರ್, ರವೀಂದ್ರ, ಸತೀಶ್, ಲಲಿತಮ್ಮ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಜರಿದ್ದರು.