ಶಾಸಕರಿಂದ ರೈತರಿಗೆ ಪಂಪ್‍ಸೆಟ್ ವಿತರಣೆ

ಅರಸೀಕೆರೆ: ಹತ್ತಾರು ವರ್ಷ ಗಳಿಂದ ಬರದ ಸುಳಿಗೆ ಸಿಕ್ಕಿ ನರಳುತ್ತಿರುವ ಕ್ಷೇತ್ರದ ರೈತರಿಗೆ ಗಂಗಾ ಕಲ್ಯಾಣ ಯೋಜ ನೆಯು ವರದಾನವಾಗಿದೆ.ಈ ಯೋಜ ನೆಯ ಮೂಲಕ ಅನ್ನದಾತನ ಕೃಷಿ ಚಟು ವಟಿಕೆಗಳಿಗೆ ಉತ್ತೇಜಿಸಲು ವಿವಿಧ ಸಾಮ ಗ್ರಿಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ನಗರ ಪ್ರವಾಸಿ ಮಂದಿರದಲ್ಲಿ 2016-17 ಮತ್ತು 2017-18ನೇ ಸಾಲಿನಲ್ಲಿ ಆಯ್ಕೆ ಯಾದ ತಾಲೂಕಿನ ಎಸ್.ಸಿ ಸಮುದಾ ಯದ ಫಲಾನುಭವಿಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಡಿಯಲ್ಲಿ ನೀಡ ಲಾದ ಉಚಿತ ಪಂಪ್‍ಸೆಟ್ ಮತ್ತು ಪೈಪ್ ಗಳನ್ನು ವಿತರಿಸಿ ಮಾತನಾಡಿದ ಅವರು ತಾಲೂಕಿನ ಹಿಂದುಳಿದ ರೈತರ ಕೃಷಿಗಾಗಿ ನೀರಿನ ಅನುಕೂಲಕ್ಕಾಗಿ 118 ಫಲಾ ನುಭವಿಗಳನ್ನು ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಸರಕಾರದ ಯೋಜನೆ ಗನು ಗುಣವಾಗಿ ಗುರುತಿಸಿ ಅವರಿಗೆ ಕೊಳವೆ ಬಾವಿ ಗಳನ್ನು ಕೊರೆಸಿಕೊಡು ವುದಲ್ಲದೇ ಅದಕ್ಕೆ ಬೇಕಾಗುವ ಪಂಪ್‍ಸೆಟ್, ಪೈಪ್ ಸೇರಿ ದಂತೆ ಇತರೆ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದು ಇದನ್ನು ಬಳಸಿಕೊಂಡು ರೈತರು ಉತ್ತಮ ಕೃಷಿಯಲ್ಲಿ ತೊಡಗಿಕೊಳ್ಳಬೇಕು.

ತಾಲೂಕಿನಾದ್ಯಂತ ಅಂತರ್ಜಲ ಕುಸಿ ದಿದ್ದು ಕೊಳವೆ ಬಾವಿಗಳನ್ನು ಕೊರೆಸಿ ದರೂ ನೀರು ದೊರಕದ ಸ್ಥಿತಿಯಲ್ಲಿದ್ದು ಇದಕ್ಕೆ ಕೆಲವೇ ತಿಂಗಳುಗಳಲ್ಲಿ ಎತ್ತಿನ ಹೊಳೆ ಯೋಜನೆಯ ಮೂಲಕ ಒಳಿ ತನ್ನು ಕಾಣಲಿದ್ದೇವೆ, ನೀರಾವರಿ ಯೋಜ ನೆಯಿಂದ ವಂಚಿತರಾಗಿರುವ ನಮಗೆ ದೇವರು ತಂದುಕೊಟ್ಟಿರುವ ಈ ಯೋಜನೆ ಯಿಂದ ಬರದ ನಾಡಿನ ಜನರು ಬದುಲಿದ್ದು ಇದರ ಕಾಮಗಾರಿಯು ಪೂರ್ಣ ಗೊಳಿಸಿಕೊಡುವಂತೆ ಬೆಳಗಾವಿ ಅಧಿ ವೇಶನದಲ್ಲಿ ಸರಕಾರಕ್ಕೆ ಒತ್ತಡ ಹಾಕಲಾಗುವುದು ಎಂದರು.

ಜೆಡಿಎಸ್ ಮುಖಂಡ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ, ಕ್ಷೇತ್ರದ ಶಾಸಕರು ರೈತಾಪಿ ಜನತೆಗೆ ಯಾವುದೇ ಮಲತಾಯಿ ಧೋರಣೆ ಮಾಡದೇ ಆರ್ಹ ಪ್ರತಿ ಫಲಾನುಭವಿಗಳನ್ನು ಗುರು ತಿಸಿ ಅವರಿಗೆ ಕೃಷಿಗೆ ಪೂರಕವಾದ ಅನು ಕೂಲವನ್ನು ಕಲ್ಪಿಸಿದ್ದಾರೆ. ಬಡವರ ಪರ ವಾದ ಯೋಜನೆಗಳಿಗೆ ಒತ್ತು ನೀಡು ತ್ತಿರುವ ಶಾಸಕರು ಕ್ಷೇತ್ರದ ಪಾಲಿಗೆ ಅಭಿವೃ ದ್ಧಿಯ ಹರಿಕಾರರಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ, ಶಿವಮೂರ್ತಿ, ಭೀಮಾನಾಯ್ಕ, ತಾಲ್ಲೂಕು ಅಭಿವೃದ್ದಿ ಅಧಿಕಾರಿ ನಾಗೇಶ್ ಹಾಜರಿದ್ದರು.