ಶಾಲಾ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮ ಶೀಘ್ರ ಆರಂಭ

ಮೈಸೂರು:  ಮೊಬೈಲ್ ಸೈನ್ಸ್ ಲ್ಯಾಬ್ ಮೂಲಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಲ್ಲಿ ವಿಜ್ಞಾ ನದ ಬಗ್ಗೆ ಆಸಕ್ತಿ ಮೂಡಿಸಲು ಶೀಘ್ರದಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮೈಸೂರು ವಿವಿ ಶಾಲೆಗಳಲ್ಲಿ ವಿಜ್ಞಾನಾ ಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ತಿಳಿಸಿದರು.

ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದ ಹಾಲ್‍ನಲ್ಲಿ ಗುರುವಾರ ಮೈಸೂರು ವಿವಿಯ ಶಾಲೆಗಳಲ್ಲಿ ವಿಜ್ಞಾ ನಾಭಿ ವೃದ್ಧಿ ಸಮಿತಿ (ಸಿಡಿಎಸ್‍ಎಸ್) ವತಿಯಿಂದ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಪ್ರೌಢ ಶಾಲಾ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ಹಮ್ಮಿಕೊಂಡಿರುವ 3 ದಿನಗಳ ಪುನಶ್ಚೇತನ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ 4 ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮೊಬೈಲ್ ಸೈನ್ಸ್ ಲ್ಯಾಬ್ ಮೂಲಕ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲಿ ಆರಂಭಿ ಸಲಾಗುವುದು. ಮೊಬೈಲ್ ಸೈನ್ಸ್ ಲ್ಯಾಬ್ ವಾಹನದ ದುರಸ್ಥಿ ಕೆಲಸಗಳು ಬಾಕಿ ಇದ್ದು, ನಂತರ ಹಂತ ಹಂತವಾಗಿ 4 ಜಿಲ್ಲೆಗಳ ಶಾಲೆಗಳಿಗೆ ಮೊಬೈಲ್ ಲ್ಯಾಬ್ ಭೇಟಿ ನೀಡಲಿದೆ ಎಂದು ತಿಳಿಸಿದರು.

ಆಸಕ್ತಿ ಇದ್ದರೂ ಆಯ್ಕೆ ಬೇರೆ: 2002-03ರ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಸರ್ಕಾ ರದ ಮೂಲಕ ಪದವಿಪೂರ್ವ ಶಿಕ್ಷಣಕ್ಕೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಲಾ ಗಿತ್ತು. ಆ ಪ್ರಕಾರ 10ನೇ ತರಗತಿ ಉತ್ತೀರ್ಣ ಗೊಂಡು ಪಿಯುಸಿ ಪ್ರವೇಶ ಪಡೆಯು ವವರಲ್ಲಿ ಶೇ.17ರಷ್ಟು ವಾಣಿಜ್ಯ, ಶೇ.25 ರಷ್ಟು ವಿಜ್ಞಾನ ಹಾಗೂ ಶೇ.58ರಷ್ಟು ಕಲಾ ವಿಭಾಗ ಆಯ್ಕೆ ಮಾಡಿಕೊಂಡಿದ್ದರು. ಈ ವರದಿಯ ಮತ್ತೊಂದು ಮುಖ್ಯ ಅಂಶವೆಂದರೆ, ಕಲಾ ವಿಭಾಗ ಆಯ್ದು ಕೊಂಡವರಲ್ಲಿ ಬಹುತೇಕ ಮಂದಿಗೆ ವಿಜ್ಞಾ ನದ ಬಗ್ಗೆ ಆಸಕ್ತಿ ಇದ್ದರೂ ವಿಜ್ಞಾನ ಕಲಿಕೆ ನಿನಗೆ ಕಷ್ಟ ಎಂಬ ಭಾವನೆ ಉಂಟು ಮಾಡಲಾಗಿತ್ತು. ಹೀಗಾಗಿ ಆಸಕ್ತಿ ಇದ್ದರೂ ಸುತ್ತಮುತ್ತಲಿನ ಹಲವರು ಅವರಲ್ಲಿ ನಿರು ತ್ಸಾಹ ಮೂಡುವಂತೆ ಮಾಡುತ್ತಾರೆ ಎಂದು ಪ್ರೊ.ಪಿ.ವೆಂಕಟರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದರು.

ಶಾಲೆಗಳಲ್ಲಿ ವಿಜ್ಞಾನಾಭಿವೃದ್ಧಿ ಸಮಿ ತಿಯು ಮೈಸೂರು ವಿವಿಯಲ್ಲಿ 2006ರಲ್ಲಿ ಆರಂಭಗೊಂಡಿತು. ಅಂದಿನಿಂದಲೂ ಹಲವು ಕಾರ್ಯಕ್ರಮಗಳ ಮೂಲಕ ಮಕ್ಕ ಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸ ಲಾಗುತ್ತಿದೆ. ಪ್ರತಿ ತಿಂಗಳ ಮೊದಲ ಶನಿ ವಾರ ಪ್ರೌಢಶಾಲಾ ಮಕ್ಕಳಿಗೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಂವಾದ ಏರ್ಪಡಿಸ ಲಾಗುತ್ತಿದೆ. ಮಾನಸಗಂಗೋತ್ರಿ ಆವರಣ ದಲ್ಲಿರುವ ವಿವಿಯ ಸೈನ್ಸ್ ಲ್ಯಾಬ್‍ಗಳಿಗೆ ಮಕ್ಕಳನ್ನು ಕರೆದೊಯ್ದು ವಿಜ್ಞಾನದ ಅನೇಕ ಕೌತುಕದ ವಿಷಯಗಳನ್ನು ಅವರಿಗೆ ತಿಳಿಸಲಾಗುತ್ತಿದೆ ಎಂದು ವಿವರಿಸಿದರು.

ವಿದ್ಯಾರ್ಥಿವೇತನ: ವಿಜ್ಞಾನದತ್ತ ಮಕ್ಕ ಳನ್ನು ಸೆಳೆಯಲು 10ನೇ ತರಗತಿಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಶೇ.1ರಷ್ಟು ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವಿದ್ಯಾರ್ಥಿ ವೇತನ ನೀಡುತ್ತದೆ. ಇಂತಹ ಹತ್ತು ಹಲವು ವಿಚಾರ ಗಳನ್ನು ಮಕ್ಕಳಿಗೆ ತಿಳಿಸಲು ಶಿಕ್ಷಕರು ಮುಂದಾಗಬೇಕು. ಈ ರೀತಿ ಕಾರ್ಯಾಗಾರ ಗಳನ್ನು ಸದ್ಬಳಕೆ ಮಾಡಿಕೊಂಡು ನಿರಂತರ ವಾಗಿ ಜ್ಞಾನಾಭಿವೃದ್ಧಿ ಶಿಕ್ಷಕರು ಒತ್ತು ನೀಡುವ ಮೂಲಕ ಮಕ್ಕಳಲ್ಲಿ ಅನ್ವೇಷಣಾ ಮನೋ ಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಸಾರ್ವ ಜನಿಕ ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಪ್ರೊ.ಜಿ.ಎಸ್. ಪ್ರಭುಸ್ವಾಮಿ ಮಾತನಾಡಿ, ಶಿಕ್ಷಕರು ಕೇವಲ ಪಠ್ಯಪುಸ್ತಕಕ್ಕೆ ಸೀಮಿತ ಆಗಬಾರದು. ವಿಜ್ಞಾನ ಕ್ಷೇತ್ರದಲ್ಲಾಗುವ ನಿರಂತರ ಬೆಳ ವಣಿಗೆಯನ್ನು ಆಧರಿಸಿ ಮಕ್ಕಳಿಗೆ ಪ್ರಾಯೋ ಗಿಕ ಶಿಕ್ಷಣ ಒದಗಿಸಲು ಮುಂದಾಗಬೇಕು. ಆ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋ ಭಾವ ಬೆಳೆಸಬೇಕು ಎಂದರಲ್ಲದೆ, ಹಲವು ಶಿಕ್ಷಕರು ಇಂದು ಕೆಲ ತರಬೇತಿ ಕಾರ್ಯ ಕ್ರಮದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಮುಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಹಾಜರುವಂತೆ ಕ್ರಮ ವಹಿಸ ಲಾಗುವುದು ಎಂದು ತಿಳಿಸಿದರು.

50ಕ್ಕೂ ಹೆಚ್ಚು ವಿಜ್ಞಾನ ಮತ್ತು ಗಣಿತ ವಿಷಯದ ಶಿಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದು, ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಬಗ್ಗೆ ಶಿಕ್ಷಕರಿಗೆ ವಿವರಿ ಸಲಿದ್ದಾರೆ. ವಿವಿಯ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್ ಕಾರ್ಯಾಗಾರ ಉದ್ಘಾ ಟಿಸಿದರು. ಬಾಲ ವಿಜ್ಞಾನ ಮಾಸ ಪತ್ರಿಕೆಯ ಪ್ರಧಾನ ಸಂಪಾದಕಿ ಶ್ರೀಮತಿ ಹರಿಪ್ರಸಾದ್, ಸಿಡಿಎಸ್‍ಎಸ್ ಸಂಚಾಲಕ ಎಂ.ಎಸ್.ಚಂದ್ರ ಶೇಖರ್ ಮತ್ತಿತರರು ಹಾಜರಿದ್ದರು.