ವೀಡಿಯೊ ಕಾನ್ಫರೆನ್ಸ್ ಮೂಲಕ ರೈಲ್ವೆ ನೂತನ ವೇಳಾಪಟ್ಟಿ ಬಿಡುಗಡೆ

ಮೈಸೂರು, ಜು.1(ಎಂಕೆ)- 2019-20ರ ದಕ್ಷಿಣ ಪ್ರಾದೇಶಿಕ ರೈಲ್ವೆ ನೂತನ ವೇಳಾಪಟ್ಟಿಯನ್ನು ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ವೀಡಿಯೊ ಕಾನ್ಫರೆನ್ಸ್ ಮೂಲಕ ಬಿಡುಗಡೆಗೊಳಿಸಿದರು.

ಮೈಸೂರು, ಬೆಂಗಳೂರು ಹಾಗೂ ಹುಬ್ಬಳ್ಳಿ ವಿಭಾಗಗಳೊಂದಿಗೆ ಆಯೋಜಿ ಸಿದ್ದ ವೀಡಿಯೊ ಕಾನ್ಫರೆನ್ಸ್‍ನಲ್ಲಿ ಮಾತನಾ ಡಿದ ಅವರು, ಕಳೆದ ವರ್ಷ ಹೊಸದಾಗಿ 20 ರೈಲುಗಳನ್ನು ನಿಯೋಜಿಸಲಾಗಿತ್ತು. ಇದರಲ್ಲಿ ವಾರದಲ್ಲಿ ಎರಡು ಬಾರಿ ಸಂಚ ರಿಸಿತ್ತಿದ್ದ ಜನಶತಾಬ್ದಿ ರೈಲನ್ನು 6 ದಿನಗಳಿಗೆ, 3 ಭಾರಿ ಇದ್ದ ಉದಯ ಎಕ್ಸ್‍ಪ್ರೆಸ್ (ಡಬಲ್ ಡೆಕ್ಕರ್) ರೈಲುಗಾಡಿಯನ್ನು 6 ಭಾರಿ, ವಾರದ 4 ಬಾರಿ ಹಮ್‍ಸಫರ್ ಎಕ್ಸ್ ಪ್ರೆಸ್, ವಾರದ 6 ದಿನಗಳು ಎಕ್ಸ್‍ಪ್ರೆಸ್ ರೈಲುಗಾಡಿಗಳು, ವಾರಕ್ಕೆ 2 ಬಾರಿ ಸಂಚ ರಿಸುತ್ತಿದ್ದ ಎಕ್ಸ್‍ಪ್ರೆಸ್ ರೈಲುಗಳನ್ನು 3 ಬಾರಿಗೆ, ಪ್ರತಿನಿತ್ಯ 2 ಎಕ್ಸ್‍ಪ್ರೆಸ್ ರೈಲುಗಳು ಹಾಗೂ ವಾರದಲ್ಲಿ 2 ಬಾರಿ ಸಂಚರಿಸುತ್ತಿದ್ದ ರೈಲ್ ಬಸ್‍ನ್ನು 5 ಬಾರಿ ಸಂಚಾರಕ್ಕೆ ಹೆಚ್ಚಿಸ ಲಾಗಿದೆ. ಅಲ್ಲದೆ ನೈರುತ್ಯ ರೈಲ್ವೆಯ 31 ರೈಲುಗಾಡಿಗಳ ವೇಗವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

3 ಎಕ್ಸ್‍ಪ್ರೆಸ್ ರೈಲುಗಳ ಆವರ್ತನವನ್ನು ಹೆಚ್ಚಿಸಲಾಗಿದೆ, 10 ಜೋಡಿ ರೈಲುಗಳ ವಿಸ್ತ ರಣೆ, ಎಲ್‍ಎಚ್‍ಬಿ ಕುಂಟೆ ಬದಲಿಸಿದ 22 ರೈಲುಗಳು ಮತ್ತು 112 ರೈಲುಗಳ ಸಮಯಗಳನ್ನು ವಿವರಿಸಿದರು. 82 ಎಕ್ಸ್ ಪ್ರೆಸ್ ರೈಲುಗಳು ಮತ್ತು 30 ಪ್ರಯಾಣಿಕರ ರೈಲುಗಳನ್ನು ಪ್ರಯಾಣಿಕರಿಗೆ ಅನು ಕೂಲವಾಗುವಂತೆ ಪರಿಷ್ಕರಿಸಲಾಗಿದೆ. ಕೆಲವು ರೈಲುಗಳನ್ನು ವಿಸ್ತರಣೆ ಮಾಡುವು ದರ ಜತೆಗೆ ಹಳೆಯ ಬೋಗಿಗಳ ಬದ ಲಾವಣೆ ಮಾಡಲಾಗುತ್ತಿದೆ ಎಂದರು.

ಕೆಂಗೇರಿ ಹಾಗೂ ಎಂಎನ್‍ಜಿಟಿ ಬಳಿ ರೈಲುಗಳು ವಿಳಂಬವಾಗುತ್ತಿವೆ ಎಂಬುದರ ಕುರಿತು ಪ್ರತಿಕ್ರಿಯಿಸಿದ ಅವರು, ಮೈಸೂರು ನಿಲ್ದಾಣದಲ್ಲಿ 6 ಪ್ಲಾಟ್‍ಫಾರಂಗಳಿದ್ದು, ಖಾಲಿಯಿದ್ದರೆ ಯಾವುದೇ ಸಮಸ್ಯೆ ಇರು ವುದಿಲ್ಲ. ಅಕಸ್ಮಾತ್ ಬೇರೆ ರೈಲು ಗಾಡಿ ನಿಂತಿ ದ್ದರೆ ಸ್ವಲ್ಪ ಸಮಯವಾಗುತ್ತದೆ. ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ಅಲ್ಲದೆ ಕೆಂಗೇರಿಯಲ್ಲಿ ಯಾವುದೇ ಸಮಸ್ಯೆ ಇಲ್ಲದಿರುವುದರಿಂದ ರೈಲುಗಳು ವಿಳಂಬ ವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ನಿಲ್ದಾಣದಲ್ಲಿ ಉಂಟಾಗು ತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಬೈಯ ಪ್ಪನಹಳ್ಳಿಯಲ್ಲಿ 150 ವೆಚ್ಚದ ಟರ್ಮಿನಲ್ ರೈಲು ನಿಲ್ದಾಣ ನಿರ್ಮಾಣವಾಗುತ್ತಿದೆ. ಇದು 7 ಪ್ಲಾಟ್‍ಫಾರ್ಮ್‍ಗಳು, 3 ಪಿಟ್ ಲೈನ್ ಗಳು, 3 ಸ್ಟೆಬ್ಲಿಂಗ್ ಲೈನ್ ಹೊಂದಿರುತ್ತದೆ. 3 ಪ್ಲಾಟ್ ಫಾರ್ಮ್‍ಗಳೊಂದಿಗೆ ಪ್ರಾರಂಭ ವಾಗಲಿರುವ ಮೊದಲ ಹಂತದ ಕಾರ್ಯ ಗಳು ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳ ಲಿದ್ದು, ಎಲ್ಲಾ 7 ಪ್ಲಾಟ್‍ಫಾರ್ಮ್‍ಗಳ ಸಂಪೂರ್ಣ ಕೆಲಸ ಮುಂದಿನ ವರ್ಷದ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ಇದರಿಂದ ಮೈಸೂರಿಗೆ ಬರುವ ರೈಲುಗಳು ಬೇಗನೆ ಬರಲು ಸಹಾಯವಾಗುತ್ತದೆ ಎಂದರು. ವೀಡಿಯೊ ಕಾನ್ಫರೆನ್ಸ್ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ರೂಪ ಶ್ರೀನಿವಾಸ್, ಅಧಿಕಾರಿಗಳಾದ ಸತೀಶ್, ಅನೀಶ್ ಪಾಂಡೆ, ಬಿರಾಧರ್, ಯಶೋದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು