ಸಿಡಿಲು ಬಡಿದು ಕೂಲಿ ಕಾರ್ಮಿಕ ಮಹಿಳೆ ಸಾವು ಹಲವು ಮನೆಗಳ ಗೋಡೆ ಕುಸಿತ, ಫಸಲು ನಷ್ಟ

ಚಾಮರಾಜನಗರ:  ಸಿಡಿಲು ಬಡಿದು ಕೂಲಿ ಕಾರ್ಮಿಕ ಮಹಿಳೆ ಮೃತಪಟ್ಟಿರುವ ಘಟನೆ ತಾಲೂ ಕಿನ ಬಿಸಲವಾಡಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ತಮಿಳುನಾಡಿನ ಸೇಲಂ ಮೂಲದ ಸೀತಮ್ಮ (25) ಮೃತಪಟ್ಟ ಮಹಿಳೆ.

ಇವರ ಕುಟುಂಬ ಬಿಸಲವಾಡಿ ಕ್ವಾರೆಯಲ್ಲಿ ಕೂಲಿ ಕೆಲಸ ಮಾಡುತ್ತಿತ್ತು. ಸೇಲಂಗೆ ತೆರಳಿದ್ದ ಅವರು ಗುರುವಾರ ರಾತ್ರಿ ಕ್ವಾರೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಮಳೆ ಬಂದ ಕಾರಣ ಬಿಸಲವಾಡಿ ಗ್ರಾಮದ ಬಳಿ ಮರದಡಿ ನಿಂತಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಸ್ಥಳ ದಲ್ಲಿಯೇ ಇದ್ದ ಸೀತಮ್ಮ ಪತಿ ಮತ್ತು ಪುತ್ರ ನಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

ಮನೆ ಕುಸಿತ: ಚಾಮರಾಜನಗರ ಮತ್ತು ತಾಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಹಲವು ಮನೆಗಳ ಗೋಡೆಗಳು ಹಾಗೂ ನಗರದ ಖಾಸಗಿ ಆಸ್ಪತ್ರೆಯೊಂದ ರಲ್ಲಿ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ನಗರದ ಸಂತ ಜೋಸೆಫ್ ಆಸ್ಪತ್ರೆಯಲ್ಲಿ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಆಸ್ಪತ್ರೆಯ ಸಿಬ್ಬಂದಿ ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿತು. ಕೂಡಲೇ ಅಗ್ನಿಶಾಮಕ ಹಾಗೂ ಚೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಹೆಚ್ಚಿನ ಅನಾ ಹುತ ಆಗುವುದನ್ನು ತಪ್ಪಿಸಿದರು.

ಹರದನಹಳ್ಳಿ ಬಂಡಿಗೆರೆಯ ನಂಜಮ್ಮ, ಉಡಿಗಾಲ ಗ್ರಾಮದ ಲಕ್ಷ್ಮಿ, ಮಹದೇವಶೆಟ್ಟಿ, ಆಲ್ದೂರಿನ ಸಂಬಯ್ಯ, ರಂಗಯ್ಯ, ಪುಟ್ಟ ಸ್ವಾಮಿ, ನವಿಲೂರಿನ ರಂಗಮ್ಮ, ಭೋಗಾ ಪುರದ ರಂಗಯ್ಯ, ಶಿವಯ್ಯ ಅವರ ಮನೆ ಹಾಗೂ ಗೋಡೆಗಳು ಹಾನಿಗೊಳಗಾ ಗಿದ್ದು, ನಷ್ಟ ಸಂಭವಿಸಿದೆ.

ಆಲ್ದೂರಿನ ಶಿವನಪ್ಪ ಎಂಬುವವರಿಗೆ ಸೇರಿದ ಒಂದೂವರೆ ಎಕರೆಯಲ್ಲಿ ಬೆಳೆ ದಿದ್ದ ಬಾಳೆ ಫಸಲು ಹಾನಿಗೊಳಗಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.