ಮೈಸೂರು: ಹೆಸ ರಾಂತ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಜನ್ಮ ದಿನದ ಹಿನ್ನೆಲೆಯಲ್ಲಿ ಮೈಸೂರಿನ ರಂಗವಲ್ಲಿ ತಂಡ ಕಲಾಮಂದಿರದ ಕಿರು ರಂಗ ಮಂದಿರದಲ್ಲಿ ಏ.26ರಿಂದ 28 ರವರೆಗೆ `ರಂಗವಲ್ಲಿ ನಗೆಹಬ್ಬ-2019’ ಹಾಸ್ಯ ನಾಟಕ ಪ್ರದರ್ಶನ ಆಯೋಜಿಸಿದೆ. ಹಾಸ್ಯಭರಿತ ಕಥೆ ಹೊಂದಿರುವ ಮೂರು ನಾಟಕ ಪ್ರದರ್ಶಿಸುವ ಮೂಲಕ ರಂಗಾ ಸಕ್ತರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದೆ.
ಕಳೆದ 13 ವರ್ಷಗಳಿಂದ ಮೈಸೂರು ರಂಗಭೂಮಿಯಲ್ಲಿ ನಿರಂತರ ರಂಗಚಟು ವಟಿಕೆಯಿಂದ ರಂಗಾಸಕ್ತರ ಗಮನ ಸೆಳೆ ದಿರುವ ನಮ್ಮ ರಂಗವಲ್ಲಿ ತಂಡ ಹೆಸ ರಾಂತ ಹಾಸ್ಯನಟ ಚಾರ್ಲಿ ಚಾಪ್ಲಿನ್ ಜನ್ಮ ದಿನದ ಸಂಭ್ರಮದಲ್ಲಿ ಈ ಹಾಸ್ಯ ನಾಟ ಕೋತ್ಸವ ಹಮ್ಮಿಕೊಂಡಿದೆ. `ಮಧ್ಯರಾತ್ರಿಯ ತಿಗಣೆಗಳು’, `ತಟ್ಟೆ ಇಡ್ಲಿ ರಾದ್ಧಾಂತ’ ಹಾಗೂ `ಸಂಸಾರದಲ್ಲಿ ಸನಿದಪ ‘ ನಾಟಕಗಳನ್ನು ನಗೆಹಬ್ಬದ ರೂಪದಲ್ಲಿ ರಂಗಾಸಕ್ತರ ತಂಡ ಪ್ರಸ್ತುತ ಪಡಿಸುತ್ತಿದೆ.
ಏ.26ರಂದು ಸಂಜೆ 6.50ಕ್ಕೆ : ಪ್ರಭು ಸ್ವಾಮಿ ಮಳೀಮಠ ನಿರ್ದೇಶನದಲ್ಲಿ ಎಸ್.ಎನ್.ಕಿತ್ತೂರು ರಚಿಸಿರುವ `ಮಧ್ಯರಾತ್ರಿಯ ತಿಗಣೆಗಳು’ ನಾಟಕ ಪ್ರದರ್ಶನಗೊಳ್ಳಲಿದೆ. ಹೆಚ್.ಕೆ.ದ್ವಾರಕಾನಾಥ್ ರಂಗವಿನ್ಯಾಸ, ಪ್ರಶಾಂತ್ ಹಿರೇಮಠ ಸಂಗೀತ, ರಾಘ ವೇಂದ್ರ ಬೂದನೂರ್ ಹಾಗೂ ಸರಿತಾ ಪ್ರಸಾದನ, ಮಹೇಶ್‍ಕುಮಾರ್ ಬೆಳಕು, ಸುಷ್ಮಾ ನಾಣಯ್ಯ ಅವರ ವಸ್ತ್ರವಿನ್ಯಾಸ ಈ ನಾಟಕಕ್ಕೆ ಇರುತ್ತದೆ.
ಬಿರುಸಿನ ಜೀವನ ಎಲ್ಲವನ್ನು ಅವಸರ ದಲ್ಲಿ ಬಂಧಿಸಿ ಬಿಟ್ಟಿದೆ. ನಡು ನಡುವೆ ವಿಶ್ರಾಂತಿಯೂ ಬೇಕಾಗುತ್ತದೆ. ಈ ಸಂಕೋಲೆಗಳಿಂದ ಮನುಷ್ಯ ಬಿಡಿಸಿ ಕೊಳ್ಳಲಾಗದಿದ್ದರೆ ಅಂಗವಿಕಲನಾಗುವ ಸಾಧ್ಯತೆಯೂ ಇರುತ್ತದೆ. ‘ಮಧ್ಯರಾತ್ರಿಯ ತಿಗಣೆಗಳು’ ನಾಟಕವು ಮೇಲ್ನೋಟಕ್ಕೆ ಹಾಸ್ಯ ಘಟನೆಗಳಿಂದ ಕೂಡಿದ್ದರೂ ಜೀವನದ ಅನೇಕ ಸೂಕ್ಷ್ಮ ಪ್ರಶ್ನೆಗಳನ್ನು ಮೂಡಿಸಲಿದೆ. ಸಮಾಜದ ಅನೇಕ ಸ್ತರ ಗಳ ಬದುಕನ್ನು ಅನಾವರಣ ಮಾಡು ತ್ತಲೇ ಸ್ವಭಾವದಲ್ಲಿನ ಭಿನ್ನತೆಯನ್ನು ತನ್ನದೇ ಆದ ರೀತಿಯಲ್ಲಿ ಬೆತ್ತಲುಗೊಳಿ ಸುತ್ತದೆ. ಈ ಸಂಕೀರ್ಣ ಮನಸ್ಥಿತಿಯ ಜನಗಳು, ಪರಿಸರ ಹಾಗೂ ಪರಿಸ್ಥಿತಿಗಳ ಒತ್ತಡದಲ್ಲಿ ಯಾವ ರೀತಿ ವರ್ತಿಸುತ್ತಾರೆ. ಯಾವ ರೀತಿ ತಮ್ಮನ್ನು ಗುರುತಿಸಿ ಕೊಳ್ಳಲು ಹವಣಿಸುತ್ತಾರೆ ಎಂಬ ಅಂಶವು ಈ ನಾಟಕದಲ್ಲಿ ಬರುತ್ತದೆ. ಇಷ್ಟೆ ಅಲ್ಲದೆ, ನಗರ ಜೀವನದ ಬದುಕಿನ ತಲ್ಲಣಗಳು, ಮಧ್ಯಮ ವರ್ಗದ ತ್ರಿಶಂಕು ಬದುಕು ಹಾಗೆ ಸಣ್ಣತನಗಳು, ಇವೆಲ್ಲವೂ ಈ ನಾಟಕದಲ್ಲಿ ಪಾತ್ರಗಳ ಮೂಲಕ ಅನಾ ವರಣಗೊಳಿಸುತ್ತವೆ
ಏ.27 ರಂದು ಸಂಜೆ 7ಕ್ಕೆ : ಮಾಯ ಸಂದ್ರ ಕೃಷ್ಣಪ್ರಸಾದ್ ರಚನೆ ಮತ್ತು ನಿರ್ದೇಶನದಲ್ಲಿ `ತಟ್ಟೆ ಇಡ್ಲಿ ರಾದ್ಧಾಂತ’ ಹಾಸ್ಯ ನಾಟಕ ಹೆಚ್.ಕೆ.ದ್ವಾರಕಾನಾಥ್ ಅವರ ರಂಗವಿನ್ಯಾಸ, ಹರಿಪ್ರಸಾದ್ ಕಶ್ಯಪ್ ವಸ್ತ್ರವಿನ್ಯಾಸ, ಉದಿತ್ ಹರಿತಸ್ ಹಿನ್ನೆಲೆ ಸಂಗೀತ, ಬೆಳಕು-ಕೃಷ್ಣಕುಮಾರ ನಾರ್ಣ ಕಜೆ, ಮಹೇಶ್‍ಕುಮಾರ್ ಬೆಳಕು, ರಾಘ ವೇಂದ್ರ ಬೂದನೂರು, ಸರಿತಾ ಪ್ರಸಾ ದನದಲ್ಲಿ ಮೂಡಿಬರಲಿದೆ.
ಆಧುನಿಕತೆಯ ಭರದಲ್ಲಿ ವಿಘಟನೆ ಗೊಳ್ಳುತ್ತಿರುವ ಅವಿಭಕ್ತ ಕುಟುಂಬಗಳು, ಮನುಷ್ಯ ಸಂಬಂಧಗಳ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಿವೆ. ಇಂದಿನ ಯುವ ಜನಾಂಗ ಅನುಭವದ ಗಣಿಯಾದ ವಯೋವೃದ್ಧ ರನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕಿದೆ. ಕೊನೆಗಾಲದಲ್ಲಿ ಆಸರೆಯಾಗಲಿಲ್ಲವೆಂದು ಆಸ್ತಿ ಪಾಲು ಮಾಡದ ತಂದೆ ವೆಂಕಟಸುಬ್ಬಯ್ಯನ ಜಿಪುಣತನವನ್ನೇ ನೆಪವಾಗಿಟ್ಟುಕೊಂಡ ಮಕ್ಕಳು ಆತನಿಗೆ ವಿಷವಿಕ್ಕಿ ಕೊಲ್ಲುತ್ತಾರೆ. ವೆಂಕಟಸುಬ್ಬಯ್ಯನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಅನಾಮಧೇಯನೊಬ್ಬ ಬರೆದ ಪತ್ರದ ಮೂಲಕ ಕೊಲೆಯ ಬೆನ್ನತ್ತುವ ಪೊಲೀ ಸರು ಸಾವಿನ ಗುಟ್ಟನ್ನು ಹೇಗೆ ಭೇದಿಸುತ್ತಾರೆ ಎಂಬುದು ಈ ನಾಟಕದ ಸಾರಾಂಶ.
ಏ.28ರಂದು ಮಧ್ಯಾಹ್ನ 3.30ಕ್ಕೆ ಮತ್ತು ಸಂಜೆ 7ಕ್ಕೆ: ದಾರಿಯೋ ಫೋ ಅವರ ದಿ ವರ್ಚುವಸ್ ಬರ್ಗ್‍ಲರ್ ಮೂಲ ನಾಟಕವಾದ `ಸಂಸಾರದಲ್ಲಿ ಸನಿದಪ’ ವನ್ನು ಕೆ.ವಿ.ಅಕ್ಷರ ರಚಿಸಿದ್ದು, ರವಿ ಪ್ರಸಾದ್ ನಿರ್ದೇಶಿಸಿದ್ದಾರೆ. ಬೆಳಕು-ಮಹೇಶ್ ಕುಮಾರ್, ಪ್ರಸಾದನ-ರಾಘವೇಂದ್ರ ಬೂದನೂರ್ ಮತ್ತು ಸರಿತಾ, ಸಂಗೀತ ನಿರ್ವಹಣೆ-ಸುಖದೇವ್ ತೇಜಸ್ವಿ, ವಸ್ತ್ರವಿನ್ಯಾಸ -ಹರಿಪ್ರಸಾದ್, ಮಂಜುನಾಥಶಾಸ್ತ್ರಿ ಅವರ ಸಹ ನಿರ್ದೇಶನ ಈ ನಾಟಕಕ್ಕಿದೆ.
ಕಳ್ಳ, ಇನ್ಸ್‍ಪೆಕ್ಟರ್, ಪ್ರೇಯಸಿಯೊಂದಿಗೆ ಮನೆ ಮಾಲೀಕ ಒಂದೇ ಮನೆಯಲ್ಲಿ ನಾಲ್ಕು ಕುಟುಂಬಗಳು ಸಿಲುಕುವ ಹಾಸ್ಯ ಭರಿತ ಸನ್ನಿವೇಶ ಇರುವ ಈ ನಾಟಕ ರಂಗಾ ಸಕ್ತರನ್ನು ನಕ್ಕು ನಗಿಸಲಿದೆ. ನಾಟಕೋತ್ಸವ ಹೆಚ್ಚಿನ ಮಾಹಿತಿಗಾಗಿ ಮೊ.9448871 815, ಮೊ.9901626 701, ಮೊ.996465 6482 ಸಂಪರ್ಕಿಸಬಹುದಾಗಿದೆ.