ರಥಸಪ್ತಮಿ, ರಾಜ್ಯಮಟ್ಟದ ಜಾನಪದ ಹಬ್ಬಕ್ಕೆ ಮೇಲುಕೋಟೆ ಸಜ್ಜು

ಮೇಲುಕೋಟೆ: ಇಲ್ಲಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಮೇಲುಕೋಟೆಯ ಚೆಲುವ ನಾರಾಯಣಸ್ವಾಮಿ ದೇವಾ ಲಯ ಫೆ.12 ರಂದು ನಡೆಯುವ ರಥಸಪ್ತಮಿ ಮಹೋ ತ್ಸವ ಮತ್ತು 20ನೇ ವರ್ಷದ ರಾಜ್ಯಮಟ್ಟದ ಜಾನಪದ ಹಬ್ಬಕ್ಕೆ ಸಜ್ಜುಗೊಂಡಿದೆ.

ಅಂದು ಮುಂಜಾನೆ 6ರಿಂದ 9.30 ರವರೆಗೆ ಸ್ಥಾನೀಕಂ ನಾಗ ರಾಜ ಅಯ್ಯಂಗಾರ್ ಸಾಂಸ್ಕøತಿಕ ವೇದಿಕೆ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಜಾನಪದ ಕಲಾಮೇಳ ದಲ್ಲಿ ಕರ್ನಾಟಕದ ಎಲ್ಲಾ ಪ್ರಮುಖ ಜಾನಪದ ಕಲಾ ಪ್ರಕಾರಗಳ ಜೊತೆಗೆ ಭಾರತ ಸರ್ಕಾರದ ತಂಜಾವೂರಿನ ಸೌತ್ ಜೋನ್ ಕಲ್ಚರಲ್ ಸೆಂಟರ್ ಪ್ರಾಯೋ ಜನೆಯಲ್ಲಿ ಕೇರಳ, ತಮಿಳುನಾಡು, ಪಾಂಡಿಚೇರಿ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದ ಪ್ರಖ್ಯಾತ ಜಾನಪದ ಕಲಾ ಪ್ರಕಾರಗಳು ಭಾಗವಹಿಸಲಿದೆ.

ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವ ಸಿ.ಎಸ್.ಪುಟ್ಟರಾಜು, ಚಿತ್ರನಟಿ ರಚಿತಾರಾಮ್, ಸಮಾಜಸೇವಕ ಕೆ.ಪಿ. ನಾಗರಾಜ್, ಡಾ.ದೀಪಾ ಜಾನಪದ ಕಲಾ ಮೇಳ ಉದ್ಘಾಟಿಸಿ ರಥಸಪ್ತಮಿಗೆ ಚಾಲನೆ ನೀಡಲಿದ್ದಾರೆ. ಖ್ಯಾತ ಧಾರ್ಮಿಕ ಮುಖಂಡ ಮಹರ್ಷಿ ಆನಂದ ಗುರೂಜಿ ಸಾನಿಧ್ಯ ವಹಿಸಲಿದ್ದಾರೆ. ಸ್ಥಾನಾಚಾರ್ಯ ಸಂಪತ್ಕು ಮಾರನ್ ಅಧ್ಯಕ್ಷತೆ ವಹಿಸಲಿದ್ದು, ರೇಖಿ ತಜ್ಞ ಬಾಲಕೃಷ್ಣ ಗುರೂಜಿ, ವಿದ್ವಾನ್ ಆನಂದಾಳ್ವಾರ್, ಪರಮೇಶ್ ಗೌಡ, ಜಿಪಂ ಸದಸ್ಯ ತ್ಯಾಗರಾಜು, ಮನ್‍ಮುಲ್ ಉಪಾಧ್ಯಕ್ಷ ರವಿ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸೂರ್ಯಮಂಡಲ: ಮುಂಜಾನೆ ಆರಂಭವಾಗುವ ವೈಭವದ ಸೂರ್ಯ ಮಂಡಲೋತ್ಸವ ಮೇಲು ಕೋಟೆಯ ಚತುರ್ವೀದಿಗಳಲ್ಲಿ ನಡೆಯಲಿದೆ.

60ಕ್ಕೂ ಹೆಚ್ಚು ಕಲಾ ಮೇಳ: ಈ ಜಾನಪದ ಕಲಾ ಮೇಳದಲ್ಲಿ ಕೇರಳದ ಚಂಡೆ, ಪಂಚವಾದ್ಯ, ತಮಿಳುನಾಡಿನ ಡ್ರಮ್ಸ್ ಸೇರಿದಂತೆ 60ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳ 600 ಮಂದಿ ಕಲಾವಿದರು ಭಾಗವಹಿಸ ಲಿದ್ದಾರೆ. ಮಾಗಡಿಯ ಚಿಲಿಪಿಲಿ ಗೊಂಬೆ, ಕೊತ್ತತ್ತಿಯ ಮರ ಗಾಲು ಕುಣಿತ, ಹುಲಿವೇಷ, ಮೈಸೂರಿನ ಕೀಲುಕುದುರೆ, ಕರಗದ ನೃತ್ಯ, ಮೈಸೂರು ನಗಾರಿ, ತುಮ ಕೂರಿನ ಬ್ಯಾಂಡ್À, ಮೈಸೂರು ಯಕ್ಷಗಾನ ಪಾತ್ರಧಾರಿಗಳು, ಬೆಂಗಳೂರಿನ ವಿಶೇಷ ವೇಷಭೂಷಣಗಳ ಮಕ್ಕಳು, ಚಾಮ ರಾಜನಗರದ ಗೊರವರ ಕುಣಿತ, ಲಕ್ಷ್ಮೀ ಸಾಗರದ ನಾಸಿಕ್ ಡೋಲ್, ಕರಡಿ ಮಜಲು, ಮಂಡ್ಯದ ನಂದಿಕಂಬ, ಪಟ ಕುಣಿತ, ಗಾರುಡಿಗೊಂಬೆ, ಹುಲಿವೇಷ, ವೀರಗಾಸೆ, ಕೋಲಾಟ, ಡೊಳ್ಳುಕುಣಿತ, ಜಾಂಜ್ ಮೇಳ, ಸೋಮನಕುಣಿತ, ಚಕ್ರಾದಿ ಬಳೆ, ಖಡ್ಗಪವಾಡ, ವೀರ ಭದ್ರನಕುಣಿತ, ಗಾರುಡಿ ಗೊಂಬೆ ಗಳು, ಶಾಲಾ ಮಕ್ಕಳ 101 ಕಳಶÀ, ವೀರಮಕ್ಕಳ ಕುಣಿತ, ಕಂಸಾಳೆ, ನಾದಸ್ವರ, ಚಂಡೆ ನಗಾರಿ, ಜಡೆ ಕೋಲಾಟ, ಭಾಗವಂತಿಕೆ ಮೇಳ, ದಾಸಯ್ಯರ ದರ್ಶನ, ಶಾಲಾ ಮಕ್ಕಳ ಬ್ಯಾಂಡ್, ಕರಡಿ ಕುಣಿತ ಸೇರಿ ದಂತೆ ವೈವಿಧ್ಯಮಯ ಜಾನ ಪದ ಕಲಾ ಪ್ರಕಾರಗಳು ಮೇಳದಲ್ಲಿ ಭಾಗವಹಿಸಲಿವೆ.

ಪ್ರತಿಭಾ ತಂಡಗಳು: ಜಾನಪದ ಕಲಾ ಮೇಳದಲ್ಲಿ ಶಾಲಾ ಮಕ್ಕಳ ಪ್ರತಿಭಾ ಪ್ರದರ್ಶನ ಸಹ ನಡೆಯಲಿದ್ದು, ಮೇಲುಕೋಟೆಯ ಗುರು ಶನೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಯದುಗಿರಿ ಆಂಗ್ಲ ಮಾಧ್ಯಮ ಪ್ರಾಥ ಮಿಕ ಶಾಲೆ, ಯದುಶೈಲಾ ಪ್ರೌಢಶಾಲೆ, ಸರ್ಕಾರಿ ಬಾಲಕರು ಮತ್ತು ಬಾಲಕಿಯರ ಶಾಲೆ, ಉಳಿಗೆರೆ ಮುರಾರ್ಜಿ ವಸತಿ ಶಾಲೆ, ಪಾಂಡವಪುರ ವಿಜಯ ಪ್ರೌಢಶಾಲೆಯ ಬ್ಯಾಂಡ್, ಲಕ್ಷ್ಮೀಸಾಗರ ಸರ್ಕಾರಿ ಪ್ರೌಢ ಶಾಲೆಯ 500ಕ್ಕೂ ಹೆಚ್ಚು ಮಕ್ಕಳು ಭಾಗ ವಹಿಸಿ 101 ಕಳಸ, ಬ್ಯಾಂಡ್, ಲಜೀಮ್, ಪಿರಮಿಡ್, ಮುಂತಾದ ಪ್ರದರ್ಶನ ನೀಡಲಿದ್ದಾರೆ ಎಂದು ಸ್ಥಾನೀಕಂ ಶ್ರೀನಿವಾಸನರಸಿಂಹನ್ ಗುರೂಜಿ, ಪತ್ರಕರ್ತೆ ಸೌಮ್ಯ ಸಂತಾನಂ ಜಾನಪದ ಕಲಾವಿದ ಆರ್.ಶಿವಣ್ಣಗೌಡ ತಿಳಿಸಿದ್ದಾರೆ.