ಬೇಲೂರು: ಹೊಯ್ಸಳರ ನಾಡಾದ ಬೇಲೂರಿನಲ್ಲಿ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ಅಂಗವಾಗಿ ಬುಧ ವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆ ಯಿಂದ ನಾಡ ರಥೋತ್ಸವ ನೆರವೇರಿತು. ರಥವನ್ನು ದೇವಾಲಯದ ಮೂರು ದಿಕ್ಕುಗಳಲ್ಲಿಯೂ ಎಳೆದು ರಥದ ಮನೆಯ ಸ್ವಸ್ಥಾನದ ಸಮೀಪ ನಿಲ್ಲಿಸಲಾಯಿತು. ಈ ಮೂಲಕ ಸಾವಿರಾರು ಜನರು ನಾಡಿನ ರಥೋತ್ಸವಕ್ಕೆ ಸಾಕ್ಷೀಕರಿಸಿದರು.
ಎರಡನೇ ದಿನವಾದ ಬುಧವಾರ ದಂದು ನಾಡ ರಥೋತ್ಸವವು ವಿಶೇಷ ವಾಗಿ ಗ್ರಾಮೀಣ ಪ್ರದೇಶದವರಿಗೆ ಮೀಸ ಲಾದ ರಥೋತ್ಸವವಾಗಿದೆ. ಪಟ್ಟಣದ ವಿಷ್ಣು ಸಮುದ್ರದ ಕಲ್ಯಾಣಿ ಸಮೀಪದಿಂದ ಹಳ್ಳಿ ವಾದ್ಯದೊಂದಿಗೆ ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ನಾಡ ಪಟೇಲ ರುಗಳು ಹಾಗೂ ಗ್ರಾಮಸ್ಥರು ವಿವಿಧÀ ಜಾನಪದ ವಾದ್ಯಗಳೊಂದಿಗೆ ಕೀಲು ಕುದುರೆ, ದೊಡ್ಡ ಗೊಂಬೆಗಳೊಂದಿಗೆ ಮೆರವಣಿಗೆ ಮೂಲಕ ರಥಕ್ಕೆ ಪೂಜೆ ಸಲ್ಲಿಸಿದರು. ಶ್ರೀಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನ ಸಮಿತಿಯಿಂದ ಸ್ವಾಗತಿಸಲಾಯಿತು.
ನಂತರ ನಾಡ ಪಟೇಲರು ನಾಡಿನ ರಥವನ್ನು ಸುತ್ತುಹಾಕಿ ರಥದಲ್ಲಿದ್ದ ಶ್ರೀಚನ್ನಕೇಶವಸ್ವಾಮಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಥೋ ತ್ಸವದಲ್ಲಿ ಶಾಸಕ ಕೆ.ಎಸ್.ಲಿಂಗೇಶ್, ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಾಮೋದರ್, ಸಮಿತಿಯ ಬಿ.ಎಂ. ರವೀಶ್, ನಿಶಾಂತ್, ದಾನಿ, ದೇವಾಲಯ ಕಾರ್ಯನಿರ್ವಣಾಧಿಕಾರಿ ವಿದ್ಯಾಲತಾ, ಜೆಡಿಎಸ್ ತಾ.ಅಧ್ಯಕ್ಷ ತೋ.ಚ.ಸುಬ್ಬರಾಯ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿಧಿ ಹಾಗೂ ಸಾವಿರಾರು ಭಕ್ತರು ಹಾಜರಿದ್ದರು.