ಪೂರ್ವಭಾವಿ ಸಭೆಯಲ್ಲಿ ಶಾಸಕ ಶಿವಲಿಂಗೇಗೌಡ ಶ್ಲಾಘನೆ
ಅರಸೀಕೆರೆ: ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಸುಧಾರಣೆಯೊಂದಿಗೆ ಸಮಾಜದಲ್ಲಿದ್ದ ಅಸಮಾನತೆ ಹೋಗಲಾ ಡಿಸಲು ಹೋರಾಡಿದರು. 21ನೇ ಶತ ಮಾನದಲ್ಲಿ ಸಾಣೇಹಳ್ಳಿ ಶ್ರೀಗಳು ಮತ್ತೆ ಕಲ್ಯಾಣ ಕಾರ್ಯಕ್ರಮ ರೂಪಿಸುವ ಮೂಲಕ ಬಸವಣ್ಣನವರ ತತ್ವ ಆದರ್ಶಗಳನ್ನು ಅನುಷ್ಠಾನಗೊಳಿಸಲು ಹೊರಟಿರುವುದು ಶ್ಲಾಘನೀಯ ಎಂದು ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ನಗರದ ಪಾರ್ವತಮ್ಮ ಪರಮೇಶ್ವರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪ ಡಿಸಿದ್ದ `ಮತ್ತೆ ಕಲ್ಯಾಣ ಕಾರ್ಯಕ್ರಮ’ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿದ್ದ ಮೇಲು-ಕೀಳು ಹೋಗಲಾಡಿಸಲು ಈ ಭೂಮಿಗೆ ಬಂದ ದೈವಾಂಶ ಸಂಭೂತ ಬಸವಣ್ಣನವರು, ಸಮಾನತೆಯನ್ನು ಜಗತ್ತಿಗೆ ಸಾರಿ ಮಹಾನ್ ಪುರುಷರಾದರು. ಬಸವಣ್ಣ ಕೊಟ್ಟ ಸಂದೇಶ, ಮಾಡಿದ ಸಾಮಾಜಿಕ ಬದಲಾವಣೆಗಳು, ಅಂದು ಕಟ್ಟಿದ ಅನುಭವ ಮಂಟಪದ ಪರಿಕಲ್ಪನೆಯಲ್ಲೇ ನಮ್ಮ ಲೋಕಸಭೆ, ವಿಧಾನ ಸಭೆಗಳಿವೆ. ಎಲ್ಲಾ ಸಮಾಜದವರಿಗೂ ಸಮಾನ ಸ್ಥಾನಮಾನ ನೀಡಲು ನಡೆಸಿದ ಹೋರಾ ಟವೇ ಇಂದಿನ ಸಂವಿಧಾನವಾಗಿದೆ ಎಂದರು.
ಸಾಹಿತಿ ಚಟ್ನಳ್ಳಿ ಮಹೇಶ್ ಮಾತ ನಾಡಿ, ವಚನ ಸಾಹಿತ್ಯದ ಮಹತ್ವ ಜಗತ್ತಿ ನಾದ್ಯಂತ ಪಸರಿಸಬೇಕು ಎಂಬ ಮಹ ತ್ಕಾರ್ಯ ನಡೆಯುತ್ತಿರುವ ಈ ಸಂದರ್ಭ ನೆನಪಿಸಬೇಕಾದ ವಿಷಾದದ ಸಂಗತಿ ಯೆಂದರೆ ಪಕ್ಕದ ದಕ್ಷಿಣ ಕನ್ನಡ, ಕಾಸರ ಗೋಡು, ಕಾರವಾರ, ಮಂಗಳೂರು, ಉಡುಪಿ ಮೊದಲಾದೆಡೆಯ ಜನರಿಗೆ ಬಸವಾದಿ ಪ್ರಮಥರ ಪರಿಚಯವೇ ಇಲ್ಲ. ಇದನ್ನು ಮನಗಂಡ ಸಾಣೇಹಳ್ಳಿ ಶ್ರೀಗಳು ಜನಸಾಮಾನ್ಯರು, ವಿದ್ಯಾರ್ಥಿಗಳ ಜೀವನಕ್ಕೆ ಪೂರಕವಾದ ಬಸವಾದಿ ಶಿವ ಶರಣರ ತತ್ವ ಆದರ್ಶಗಳನ್ನು ರಾಜ್ಯದೆಲ್ಲೆಡೆ ತಿಳಿಸಲು 30 ಜಿಲ್ಲೆಗಳಲ್ಲಿ `ಮತ್ತೆ ಕಲ್ಯಾಣ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ವಿದ್ಯಾರ್ಥಿ ಸಮೂಹ ಸರಿಯಾದರೆ ಇಡೀ ಜಗತ್ತೇ ಸರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ತಾಪಂ ಮಾಜಿ ಅಧ್ಯಕ್ಷ ಹಿರಿಯೂರು ರೇವಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎ.ಎಸ್.ಬಸವರಾಜು, ಜಿಪಂ ಸದಸ್ಯರಾದ ಪಟೇಲ್ ಶಿವಪ್ಪ, ಮಾಡಾಳು ಸ್ವಾಮಿ ಮಾತನಾಡಿದರು. ದಲಿತ ಮುಖಂಡ ಹೆಚ್.ಟಿ.ಶಿವಮೂರ್ತಿ, ಮುಖಂಡರಾದ ಅಬ್ದುಲ್ ಜಮೀಲ್, ರಾಜಣ್ಣ, ಮೋಹನ್ ಕುಮಾರ್, ಹೇಮಂತ್ ಕುಮಾರ್, ಕಿರಣ್ ಕುಮಾರ್, ಎನ್.ಜಿ ಮಧು, ಕಸಾಪ ತಾಲೂಕು ಅಧ್ಯಕ್ಷ ಶಿವಮೂರ್ತಿ, ಜಿಲ್ಲಾ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನಕುಮಾರ್, ಡಿ.ಎಂ.ಶ್ರೀಕಂಠಪ್ಪ. ಸ್ವಾಮಿ, ದಿವಾಕರ್ ಮತ್ತಿತರರಿದ್ದರು.
ಸಂವಾದ-ನಾಟಕ
ಹೊಳೆನರಸೀಪುರ, ಅರಕಲಗೂಡು, ಅರಸೀಕೆರೆ ಕಾಲೇಜುಗಳಲ್ಲಿ `ಶಿಕ್ಷಣದಲ್ಲಿ ವಚನಕಾರರ ಚಿಂತನೆ’ ಎಂಬ ಸಂವಾದ ಕಾರ್ಯಕ್ರಮವನ್ನು ಆ.19ರ ಬೆಳಿಗ್ಗೆ 11ಕ್ಕೆ ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳ ಜತೆ ಸಾಣೇಹಳ್ಳಿ ಶ್ರೀಗಳು ಸಂವಾದ ನಡೆಯ ಲಿದೆ. ಸಂಜೆ 4ಕ್ಕೆ ಅಂಬೇಡ್ಕರ್ ಭವನದಿಂದ ಸದ್ಭಾವನಾ ಯಾತ್ರೆ ಹೊರಡಲಿದೆ. ಸಂಜೆ 6 ಗಂಟೆಗೆ ಹಾಸನದ ಕಲಾ ಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಮರಣವೇ ಮಹಾನವಮಿ ನಾಟಕ ಪ್ರದರ್ಶನವಾಗಲಿದೆ.