ಮೈಸೂರು: ಮೈಸೂರಿನ ಅವ ಧೂತ ದತ್ತ ಪೀಠದ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 77ನೇ ಹುಟ್ಟು ಹಬ್ಬದ ಅಂಗವಾಗಿ ಮೇ 12ರಂದು ಸಂಜೆ 4 ಗಂಟೆಗೆ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ `ಸಚ್ಚಿದಾನಂದಶ್ರೀ’ ಗುರುವಂದನಾ ಗ್ರಂಥ ಬಿಡುಗಡೆಗೊಳ್ಳ ಲಿದೆ ಎಂದು ಗ್ರಂಥ ಸಂಪಾದಕ ಸಮಿತಿಯ ಗೌರವ ಸಂಪಾ ದಕ ಪ್ರೊ.ಸಿ.ಪಿ.ಕೃಷ್ಣಕುಮಾರ್ ಇಂದಿಲ್ಲಿ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕರ್ನಾ ಟಕದ ಮಠ ಮಾನ್ಯಗಳ ಇತಿಹಾಸದಲ್ಲಿ ಧಾರ್ಮಿಕ, ಸಾಂಸ್ಕøತಿಕವಾಗಿ ತಮ್ಮದೇ ಛಾಪು ಮೂಡಿಸಿರುವ ಗಣಪತಿ ಸಚ್ಚಿದಾನಂದರನ್ನು ಕುರಿತು ಗ್ರಂಥ ಹೊರ ತರಲಾಗಿದೆ ಎಂದು ಹೇಳಿದರು.
ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಕಿರಿಯ ಗುರು ಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಿರಿಯ ಸಾಹಿತಿ, ನಾಡೋಜ ಪ್ರೊ.ಹಂ.ಪ. ನಾಗರಾಜಯ್ಯ ಗ್ರಂಥ ಬಿಡುಗಡೆ ಮಾಡುವರು.
ಮಾಜಿ ಲೋಕಾಯುಕ್ತ ಡಾ.ಸಂತೋಷ್ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಹಿರಿಯ ಸಂಸ್ಕøತ ವಿದ್ವಾಂಸ ಪ್ರೊ. ಹೆಚ್.ವಿ.ನಾಗರಾಜರಾವ್ ಕೃತಿ ಕುರಿತು ಮಾತನಾಡುವರು. ಗ್ರಂಥದ ಗೌರವ ಸಂಪಾದಕ, ದತ್ತ ಪೀಠದ ಆಸ್ಥಾನ ವಿದ್ವಾನ್ ಪ್ರೊ.ಸಿ.ಪಿ.ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸುವರು. ಗ್ರಂಥದ ಪ್ರಧಾನ ಸಂಪಾದಕಿ ಹಾಗೂ ಕರ್ನಾಟಕ ಸಂಸ್ಕøತ ವಿವಿ ಕುಲಪತಿ ಪ್ರೊ.ಪದ್ಮಾ ಶೇಖರ್, ಚಿತ್ರನಟ ಶ್ರೀನಾಥ್, ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತಕುಮಾರ್, ತುಮಕೂರು ವಿವಿ ಕುಲಪತಿ ಪ್ರೊ. ವೈ.ಎಸ್.ಸಿದ್ದೇಗೌಡ, ಹಿರಿಯ ಸಾಹಿತಿ ಹಾಗೂ ಡಾ.ಕೆ.ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕಿ ಡಾ.ಲೀಲಾ ಪ್ರಕಾಶ್, ಬೆಂಗಳೂರಿನ ಸ್ವತಂತ್ರ ಪತ್ರಕರ್ತ, ಸಂದರ್ಶಕ ಪ್ರಾಧ್ಯಾಪಕ ಈಶ್ವರ ದೈತೋಟ ಅತಿಥಿಯಾಗಿ ಭಾಗವಹಿಸುವರು ಎಂದು ಹೇಳಿದರು.
ಸಚ್ಚಿದಾನಂದಶ್ರೀ ಗುರುವಂದನಾನ ಗ್ರಂಥವು ವ್ಯಕ್ತಿ ಶ್ರೇಷ್ಠತೆಯ ಪ್ರತಿಷ್ಟಾಪನೆಯಾಗಷ್ಟೇ ಉಳಿಯದೆ, ಧಾರ್ಮಿಕ, ಸಾಂಸ್ಕøತಿಕ ವಿಷಯಗಳನ್ನು ಹೆಚ್ಚು ಅಳ ವಡಿಸಿಕೊಂಡು, ಒಂದು ಅಮೂಲ್ಯ ಪರಾಮರ್ಶನಾ ಗ್ರಂಥವಾಗಿ ಹೊರ ತರಲಾಗಿದೆ. ಇದಕ್ಕಾಗಿ ಗ್ರಂಥದ ಸಂಪಾದಕರಾದ ಪ್ರೊ. ಜಯಲಕ್ಷ್ಮಿ ಸೀತಾಪುರ, ಕಾರ್ಯ ನಿರ್ವಾಹಕ ಸಂಪಾ ದಕ ಎಸ್.ಪ್ರಕಾಶ್‍ಬಾಬು ಮತ್ತು ಸಮಿತಿ ಇನ್ನಿತರ ಸದ ಸ್ಯರು ಬಹಳವಾಗಿ ಶ್ರಮಿಸಿದ್ದಾರೆ ಎಂದರು. ಸುದ್ದಿಗೋಷ್ಠಿ ಯಲ್ಲಿ ಪ್ರೊ.ಜಯಲಕ್ಷ್ಮಿ ಸೀತಾಪುರ, ಎಸ್.ಪ್ರಕಾಶ್ ಬಾಬು, ಬೋರೇಗೌಡ ಇನ್ನಿತರರು ಉಪಸ್ಥಿತರಿದ್ದರು.