ಮಹಾಯೋಗಿ ಶ್ರೀ ವೇಮನ ಸ್ಮರಣೆ

ಮೈಸೂರು: ತೆಲುಗು ಕವಿ ವೇಮನ ಚಿಂತನೆಗಳು ಸಮಾಜಕ್ಕೆ ಇಂದು ಅನಿವಾರ್ಯ ಎಂದು ರಾಜ್ಯ ಮುಕ್ತ ವಿವಿ ಕನ್ನಡ ಪ್ರಾಧ್ಯಾಪಕಿ ಡಾ. ಜ್ಯೋತಿ ಶಂಕರ್ ಅಭಿಪ್ರಾಯಪಟ್ಟರು.

ಮೈಸೂರಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾ ಯೋಗಿ ಶ್ರೀ ವೇಮನ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ಏರ್ಪಡಿ ಸಿದ್ದ `ಮಹಾಯೋಗಿ ಶ್ರೀವೇಮನ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಕವಿಗಳಾದ ಸರ್ವಜ್ಞ ಮತ್ತು ತಿರು ವಳ್ಳುವರ್ ಅವರ ಸಮಕಾಲೀನರಾಗಿದ್ದ ವೇಮನ ಕವಿಗಳು ತಮ್ಮ ಸಾಹಿತ್ಯದ ಮೂಲಕ ಸಂಸ್ಕøತಿ ಮತ್ತು ಸಂಸ್ಕಾರದ ಮಹತ್ವವನ್ನು ಸಾರಿದ್ದಾರೆ. ಅವರು ತಮ್ಮ ಸಾಹಿತ್ಯದಲ್ಲಿ ನೇರ, ನಿಷ್ಠುರ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿ ದ್ದಾರೆ. ಮನಸ್ಸಿಗೆ ಶಾಂತಿ ಸಿಗಬೇಕೆಂದರೆ ನಾವು ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ವೇಮನ ಹೇಳಿದ್ದು, ಪ್ರತಿಯೊ ಬ್ಬರು ಈ ರೀತಿಯ ಚಿಂತನೆಯೊಂದಿಗೆ ಬದುಕು ಸಾಗಿಸಿದಲ್ಲಿ ಬದುಕು ಸಾರ್ಥಕ ವಾಗುತ್ತದೆ ಎಂದು ಪ್ರತಿಪಾದಿಸಿದರು.

ಉದ್ಘಾಟನೆ ನೆರವೇರಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಜಿಲ್ಲಾಡ ಳಿತ ಮಹನೀಯರ ಜಯಂತಿ ಸಮಾ ರಂಭಕ್ಕೆ ಜನತೆ ಸೇರುವಂತೆ ನೋಡಿಕೊಳ್ಳ ಬೇಕು. ಆಗ ಮಾತ್ರ ಮಹನೀಯರ ವಿಚಾರ ಗಳು ಜನತೆಯನ್ನು ತಲುಪಲು ಸಾಧ್ಯ. ಇಂದಿನ ಕಾರ್ಯಕ್ರಮದಲ್ಲಿ ಬೆರಣಿಕೆ ಯಷ್ಟು ಮಂದಿ ಮಾತ್ರ ಭಾಗವಹಿಸಿದ್ದಾರೆ. ಕನಿಷ್ಠ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನಾ ದರೂ ಸೇರಿಸಿದ್ದರೆ ಅವರಿಗಾದರೂ ಮಹಾತ್ಮರ ವಿಚಾರಧಾರೆ ತಲುಪುತ್ತಿತ್ತು ಎಂದರು.

ಚಿಂತಕ ಪುಟ್ಟಸಿದ್ದಯ್ಯ, ಕನ್ನಡಪರ ಹೋರಾಟಗಾರ ತಾಯೂರು ವಿಠಲ ಮೂರ್ತಿ, ಪ್ರಸಾಧನ ಕಲಾವಿದ ಬಿ.ಎಂ. ರಾಮಚಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿ ಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಮತ್ತಿತರರು ಹಾಜರಿದ್ದರು.